Rakshith Shetty: ಅವಳ ಹಿಂದೆ ಇಡೀ ದಿನ ಅಲೆದಾಡಿದ್ದೆ – ಆಕೆ ನನ್ನ ಬೆಸ್ಟ್ ಕ್ರಶ್‌ ಎಂದ ರಕ್ಷಿತ್‌ ಶೆಟ್ಟಿ ?!

Rakshit Shetty remembers his school days crush in sapta saagaradaache ello movie promotion

Rakshit Shetty: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡ ರಕ್ಷಿತ್ ಶೆಟ್ಟಿ (Rakshit Shetty) ಸದ್ಯ ಚಾರ್ಲಿ ಸಿನಿಮಾದ ಯಶಸ್ಸಿನ ಬಳಿಕ ಈ ವರ್ಷ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಕಾಣಿಸಿದ್ದಾರೆ. ಇದೀಗ ರಕ್ಷಿತ್ ಇಂಟ್ರೆಸ್ಟಿಂಗ್ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ. ನಟ ನಟಿಯರ ಕ್ರಶ್ ಬಗ್ಗೆ ತಿಳಿಯಲು ಅಭಿಮಾನಿಗಳಿಗೆ ಏನೋ ಕಾತುರವಿರುತ್ತದೆ. ಅಂತೆಯೇ ರಕ್ಷಿತ್ ತಮ್ಮ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ.

 

ಈ ಹುಡುಗಿ ಬಗ್ಗೆ ಮೊದಲು ಈ ರೀತಿ ಅನಿಸಿರಲಿಲ್ಲ, ಇವತ್ತು ಏಕೆ ಹೀಗೆ ಆಗ್ತಿದೆ ಎಂದುಕೊಂಡೆ. ಆ ದಿನ ಇಡೀ ಟ್ರಿಪ್‌ ಮುಗಿಯುವವರೆಗೂ ಅವಳ ಹಿಂದೆಯೇ ಸುತ್ತಾಡಿದ್ದೆ” ಎಂದು ರಕ್ಷಿತ್‌ ಶೆಟ್ಟಿ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಹೌದು, ಸಪ್ತ ಸಾಗರದಾಚೆ ಎಲ್ಲೋ ಒಂದು ಸುಂದರ ಪ್ರೇಮ ಕಥೆ. ರಕ್ಷಿತ್‌ ಶೆಟ್ಟಿ ನಿರ್ಮಾಣದ ಸಿನಿಮಾ
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪ್ರಮೋಷನ್‌ ಸಮಯದಲ್ಲಿ ಸಂದರ್ಶನದಲ್ಲಿ ರುಕ್ಮಿಣಿ ವಸಂತ್‌, ರಕ್ಷಿತ್‌ ಶೆಟ್ಟಿ ಹಾಗೂ ಹೇಮಂತ್‌ ತಮ್ಮ ಕ್ರಶ್‌ಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ರಕ್ಷಿತ್‌ ಶೆಟ್ಟಿ ಸ್ಕೂಲ್‌ ಟ್ರಿಪ್‌ಗೆ ಹೋದಾಗ ನಡೆದ ಘಟನೆಯನ್ನು ಹಂಚಿಕೊಂಡಿದ್ದು ಆ ವಿಡಿಯೋ ವೈರಲ್‌ ಆಗುತ್ತಿದೆ.

ಟ್ರಿಪ್‌ ಮುಗಿಯುವವರೆಗೂ ಆ ಹುಡುಗಿ ಹಿಂದೆ ಸುತ್ತಾಡಿದ್ದೆ
ಸ್ಕೂಲ್‌ನಲ್ಲಿ ಆಗಿದ್ದನ್ನು ಲವ್‌ ಎನ್ನಲು ಸಾಧ್ಯವಿಲ್ಲ, ಅದನ್ನು ಕ್ರಶ್‌ ಎನ್ನಬಹುದು. ”ಒಮ್ಮೆ ಸ್ಕೂಲ್‌ ಟ್ರಿಪ್‌ ಹೋಗಿದ್ದೆವು. ಬಸ್‌ನಲ್ಲಿ ನಾನು ಲಾಸ್ಟ್‌ ಸೀಟ್‌ನಲ್ಲಿ ಕೂತಿದ್ದೆ. ಆಗ ಒಂದು ಹುಡುಗಿ ಟ್ರಿಪ್ ಗೆ ಬಂದಿದ್ದಳು. ಆಕೆ 6ನೇ ಕ್ಲಾಸ್‌ನಿಂದಲೂ ನನ್ನ ಕ್ಲಾಸ್‌ಮೇಟ್‌. ಆದರೆ ಆಕೆಯನ್ನು ನಾನು ಗಮನಿಸಿರಲಿಲ್ಲ. ಆಕೆ ಬಸ್‌ ಹತ್ತಿ ಕುಳಿತುಕೊಂಡಳು, ಒಮ್ಮೆ ನನ್ನತ್ತ ತಿರುಗಿ ನೋಡಿ ನಕ್ಕಳು, ಕೆಲವು ಸೆಕೆಂಡ್‌ಗಳ ಕಾಲ ನನ್ನ ಮನಸ್ಸಿಗೆ ಏನೋ ಒಂದು ವಿಚಿತ್ರ ಅನುಭವ ಆಯ್ತು. ಈ ಹುಡುಗಿ ಬಗ್ಗೆ ಮೊದಲು ಈ ರೀತಿ ಅನಿಸಿರಲಿಲ್ಲ, ಇವತ್ತು ಏಕೆ ಹೀಗೆ ಆಗ್ತಿದೆ ಎಂದುಕೊಂಡೆ. ಆ ದಿನ ಇಡೀ ಟ್ರಿಪ್‌ ಮುಗಿಯುವವರೆಗೂ ಅವಳ ಹಿಂದೆಯೇ ಸುತ್ತಾಡಿದ್ದೆ” ಎಂದು ರಕ್ಷಿತ್‌ ಶೆಟ್ಟಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಈ ಬಗ್ಗೆ ಕಾಮೆಂಟ್ ನಲ್ಲಿ ಕೆಲವರು ರಶ್ಮಿಕಾ ಹೆಸರು ಎತ್ತಿದ್ದಾರೆ. ಇನ್ನು ಕೆಲವರು ಈ ಲವ್‌, ಕ್ರಶ್‌ ಅನ್ನೋದು ಎಲ್ಲಾ ಹುಡುಗರ ವೀಕ್‌ನೆಸ್‌ ಎಂದು ಕಾಮೆಂಟ್‌ ಮಾಡಿದ್ಧಾರೆ.

 

ಇದನ್ನು ಓದಿ: Divorce: ಮುದ್ದು ಮಗಳಿಗೆ ಹಿಡಿಸದ ಅಡುಗೆ ಮಾಡಿದ ಹೆಂಡತಿ – ಏಕಾಏಕಿ ಡೈವೋರ್ಸ್ ಕೊಟ್ಟ ಪತಿ !!

Leave A Reply

Your email address will not be published.