KSRTC Bus in Mangalore: ಫ್ರೀ ಎಫೆಕ್ಟ್‌, ಮಂಗಳೂರಿಗರೇ ನಿಮಗೊಂದು ಶುಭ ಸುದ್ದಿ; ರೋಡಿಗಿಳಿಯಲಿದೆ ಸರಕಾರಿ ಬಸ್‌ಗಳು!

Mangaluru news good news for mangalore peoples KSRTC bus in Mangalore

KSRTC Bus in Mangalore: ಮಂಗಳೂರು ನಗರದಲ್ಲಿ (Mangalore City)ಖಾಸಗಿ ಬಸ್‌ಗಳೇ ಎಲ್ಲಾ ಕಡೆ ಹೆಚ್ಚಾಗಿ ಕಾಣುತ್ತದೆ. ಅದರಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಇದ್ದರೂ ಮಂಗಳೂರಿನಲ್ಲಿ ಸರಕಾರಿ ಬಸ್‌ಗಳನ್ನು(KSRTC Bus in Mangalore) ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಇದೀಗ ಕೆಎಸ್‌ಆರ್‌ಟಿಸಿ (KSRTC) ಶುಭ ಸುದ್ದಿಯೊಂದನ್ನು ನೀಡಿದ್ದು, ಮಂಗಳೂರಿನ ಯಾವ ರೂಟ್‌ಗಳಲ್ಲಿ ಬಸ್‌ಗಳನ್ನು ಕರ್ಯಾಚರಣೆಗೆ ಬಿಡಬಹುದು ಎಂಬುವುದನ್ನು ಸಮೀಕ್ಷೆ ನಡೆಸಿದೆ ಎಂದು ವರದಿಯಾಗಿದೆ. ಈ ಕುರಿತು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೋಡಿಕಲ್-ಕೂಳೂರು-ಕಾವೂರು-ಬೋಂದೆಲ್‌ ಈ ಕಡೆಯ ಮಾರ್ಗದಲ್ಲಿ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದೆ. ಸಮೀಕ್ಷೆ ಮುಂದುವರಿದಿದ್ದು, ಅಗತ್ಯ ಇರುವ ಮಾರ್ಗಗಳಿಗೆ ಅರ್ಜಿ ಸಲ್ಲಿಸಲಾಗುತ್ತದೆ. ಎಲ್ಲಾ ಮಾರ್ಗಗಳಿಗೂ ಬಸ್‌ ಒದಗಿಸಲು ಸಾಧ್ಯವಾಗದಿದ್ದರೂ, ಮೂರು-ನಾಲ್ಕು ಮಾರ್ಗ ಸಂಪರ್ಕಿಸಲು ಒಂದು ಬಸ್‌ ಕೊಡುವ ಕುರಿತು ಯೋಜನೆ ಮಾಡುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ಹೇಳಿರುವುದಾಗ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ದೈವಿಕ ಕಾರ್ಯಗಳತ್ತ ಇಂದು ಮನಸ್ಸು ವಾಲುತ್ತೆ ಈ ರಾಶಿಯವರಿಗೆ! ಇತರರಿಗೆ ಸಹಾಯ ಮಾಡೋ ಮನಸ್ಸು ಧಾರಳ ಈ ರಾಶಿಯವರದ್ದು!!!

Leave A Reply

Your email address will not be published.