Marimuthu Passed Away: ಜೈಲರ್ ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದ ಖ್ಯಾತ ತಮಿಳು ನಟ ಮಾರಿಮುತ್ತು ನಿಧನ!

Film news jailer film fame marimuthu passed away due to heart attack while dubbing for TV show

G. Marimuthu Passed Away: ತಮಿಳು ನಟ, ನಿರ್ದೇಶಕ ಮಾರಿಮುತ್ತು (Marimuthu) ಇಂದು ಬೆಳಿಗ್ಗೆ (ಸೆ.8) ಹೃದಯಾಘಾತದಿಂದ ನಿಧನರಾಗಿದ್ದಾರೆ. ರಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ಪೆರುಮಾಳ್ ಪಾತ್ರದಲ್ಲಿ ನಟಿಸಿದ್ದ ಮಾರಿಮುತ್ತು ವಿಧಿವಶರಾಗಿದ್ದಾರೆ (Marimuthu Passed Away).

 

ತಮಿಳು ಖ್ಯಾತ ನಟ ಮಾರಿಮುತ್ತು (Marimuthu) ಅವರು ಇಂದು ಹೃದಯಾಘಾತದಿಂದ (ಸೆಪ್ಟೆಂಬರ್ 8)ಇಂದು ನಿಧನರಾಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಜೈಲರ್’ ಸಿನಿಮಾದಲ್ಲಿ (Jailer Movie) ಅವರು ವಿಲನ್ ಸಹಚರನ ಪಾತ್ರ ಮಾಡಿದ್ದರು.ಇಂದು ಬೆಳಿಗ್ಗೆ ಮಾರಿಮುತ್ತು ಅವರು ಟಿವಿ ಶೋ ಒಂದರ ಡಬ್ಬಿಂಗ್ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಚೆನ್ನೈನ ಸ್ಟುಡಿಯೋದಲ್ಲಿ ಈ ಡಬ್ಬಿಂಗ್ ಕೆಲಸ ನಡೆಯುತ್ತಿದ್ದ ಸಂದರ್ಭ. ಡಬ್ ಮಾಡುತ್ತಿರುವಾಗಲೇ ನಟ ಕುಸಿದು ಬಿದ್ದಿದ್ದಾರೆ.ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಾರಿಮುತ್ತು ಮೃತಪಟ್ಟಿದ್ದಾರೆ. ಮಾರಿಮುತ್ತು ಅವರಿಗೆ 58 ವರ್ಷ ವಯಸ್ಸಾಗಿತ್ತು.

ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿ, ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 650 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು, ಈ ಚಿತ್ರದಲ್ಲಿ ವಿಲನ್ ವರ್ಮಾನ (ವಿನಾಯಕನ್) ಸಹಚರನಾಗಿ ಮಾರಿಮುತ್ತು ಕಾಣಿಸಿಕೊಂಡಿದ್ದಾರೆ. ಮಾರಿ ಮುತ್ತು ಅವರ ಪಾತ್ರ ನೋಡುಗರ ಗಮನ ಸೆಳೆದಿದೆ. ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದಾಗಲೇ ಮಾರಿಮುತ್ತು ಮೃತಪಟ್ಟ ಸುದ್ದಿ ಎಲ್ಲರಿಗೂ ಆಘಾತ ತಂದಿದೆ.

ಮಾರಿಮುತ್ತು ಅವರು 1999ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು,ಅಜಿತ್ ಕುಮಾರ್ ನಟನೆಯ ‘ವಾಲಿ’ ಅವರ ನಟನೆಯ ಮೊದಲ ಸಿನಿಮಾವಾಗಿದೆ. ಈ ಬಳಿಕ ಅವರು ಹಲವು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರದಲ್ಲಿ ಅವರು ನಟಿಸುತ್ತಿದ್ದರು ಎನ್ನಲಾಗಿದೆ. ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿರುವ ನಡುವೆಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಚೆನ್ನೈನಲ್ಲಿರುವ ಮಾರಿ ಮುತ್ತು ಅವರ ನಿವಾಸಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿದೆ.ಮಾರಿಮುತ್ತು ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: KPSC Job: ಗ್ರೂಪ್‌ ಸಿ ಹುದ್ದೆಗೆ ಅರ್ಜಿ ಆಹ್ವಾನ, ಮಾಸಿಕ ರೂ.58ಸಾವಿರ ಸಂಬಳ!! ಪದವಿ ಪಾಸಾದವರಿಗೆ ಆದ್ಯತೆ

Leave A Reply

Your email address will not be published.