Post Office Updates: ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಉಳಿತಾಯ ಖಾತೆ ಇದೆಯೇ? ಹಾಗಾದರೆ ಈ 3 ಬದಲಾವಣೆ ಬಗ್ಗೆ ಗಮನಿಸಿ!
Business Post office saving account updates know about three changes in savings account rules
Post Office Updates: ಸರ್ಕಾರದ ಹಲವು ಯೋಜನೆಗಳಲ್ಲಿ ಅಂಚೆ ಕಚೇರಿಯ ಯೋಜನೆಯು (post office scheme) ಒಂದು. ಈ ಯೋಜನೆ ಜನರ ಹಿತದೃಷ್ಟಿಗಾಗಿ ಸರ್ಕಾರ (government) ನಡೆಸುವ ದೊಡ್ಡಮಟ್ಟದ ಉಳಿತಾಯ ಯೋಜನೆ (Post Office saving schemes) ಎಂದೇ ಹೇಳಬಹುದು. ಇದು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ (Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ (Savings) ನೆರವಾಗುತ್ತದೆ.
ಇದೀಗ ಅಂಚೆ ಕಚೇರಿಯಲ್ಲಿ (Post Office Updates) ಸೇವಿಂಗ್ಸ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರೂ ಗಮನಿಸಬೇಕಾ ಇದೀಗ ದ ಸುದ್ದಿ ಇಲ್ಲಿದೆ. ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ತಿದ್ದುಪಡಿ ಯೋಜನೆ (post office savings account amendment scheme 2023) ಮೂಲಕ ಇತ್ತೀಚೆಗೆ 3 ಬದಲಾವಣೆಗಳನ್ನು ತರಲಾಗಿದೆ. ಯಾವೆಲ್ಲಾ ನಿಯಮ ಬದಲಾವಣೆ ಎಂಬುದರ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ಖಾತೆದಾರರ ಸಂಖ್ಯೆಯಲ್ಲಿ ಬದಲಾವಣೆ :
ಪೋಸ್ಟ್ ಆಫೀಸ್ನಲ್ಲೂ ಜಂಟಿ ಖಾತೆ ತೆರೆಯಬಹುದಾಗಿದೆ. ನಿಯಮ ಬದಲಾವಣೆಯಿಂದ ಈಗ ಮೂವರು ಸೇರಿ ಪೋಸ್ಟ್ ಆಫೀಸ್ನಲ್ಲಿ ಜಾಯಿಂಟ್ ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಈ ಹಿಂದೆ ಇಬ್ಬರು ಮಾತ್ರ ಜಾಯಿಂಟ್ ಅಕೌಂಟ್ ತೆರೆಯಲು ಅವಕಾಶ ಇತ್ತು.
ಪೋಸ್ಟ್ ಆಫೀಸ್ ಖಾತೆಯಲ್ಲಿನ ಠೇವಣಿ ಮೇಲೆ ಬಡ್ಡಿ: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಕ್ತಿ ಮೃತಪಟ್ಟರೆ, ಅವರು ಸಾಯುವ ಹಿಂದಿನ ತಿಂಗಳ ಅಂತ್ಯದಲ್ಲಿ ಮಾತ್ರವೇ ಬಡ್ಡಿ ಹಾಕಲಾಗುತ್ತದೆ. ಈಗ ತಿದ್ದುಪಡಿ ನಿಯಮದ ಪ್ರಕಾರ, ಖಾತೆದಾರ ಮೃತಪಟ್ಟ ಹಿಂದಿನ ತಿಂಗಳವರೆಗೂ ಬಡ್ಡಿ ಕೊಡಲಾಗುತ್ತದೆ.
ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ನಿಂದ ಹಣ ಹಿಂಪಡೆಯುವ ನಿಯಮ : ಪೋಸ್ಟ್ ಆಫೀಸ್ನ ಸೇವಿಂಗ್ಸ್ ಅಕೌಂಟ್ನಿಂದ ಹಣ ಹಿಂಪಡೆಯುವ ಕ್ರಮದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಮೊದಲು 50 ರೂ. ಗಿಂತ ಹೆಚ್ಚು ಮೊತ್ತದ ಹಣ ಹಿಂಪಡೆಯಲು ಫಾರ್ಮ್-2 ಅನ್ನು ಭರ್ತಿ ಮಾಡಿ ಸಲ್ಲಿಸಬೇಕಿತ್ತು. ಇದೀಗ ಹೊಸ ನಿಯಮದ ಪ್ರಕಾರ, ಫಾರ್ಮ್-2 ಬದಲು ಫಾರ್ಮ್-3 ಅನ್ನು ಭರ್ತಿ ಮಾಡಿ ಪಾಸ್ಬುಕ್ ಜೊತೆಗೆ ಸಲ್ಲಿಸಬೇಕು.