ದಾಳಿಂಬೆ ಗಿಡ ಸಣ್ಣ ಬಕೆಟ್ ನಲ್ಲಿ ಬೆಳೆಸೋದು ಹೇಗೆ? ಇಲ್ಲಿದೆ ಉತ್ತರ!!!
Lifestyle horticulture how to grow a pomegranate plant in a bucket
pomegranate plant: ಮನೆಯಲ್ಲಿ ದಾಳಿಂಬೆ (pomegranate plant) ಮರವನ್ನು ಬೆಳೆಸುವುದು ಸುಲಭ ಮತ್ತು ಸರಳವಾಗಿದೆ. ನಾವು ಮನೆಯಲ್ಲಿ ಯಾವುದೇ ಹಣ್ಣು ಹಂಪಲು, ತರಕಾರಿ ಬೆಳೆಸಿದರು ಅವುಗಳಲ್ಲಿ ಹೆಚ್ಚಿನ ಪ್ರೊಟೀನ್ ನಮಗೆ ದೊರೆಯುತ್ತದೆ.
ದಾಳಿಂಬೆಯನ್ನು ತಾಜಾವಾಗಿ ಸೇವಿಸಬಹುದು ಅಥವಾ ರಸ ಮತ್ತು ಜಾಮ್ ಆಗಿ ಸಂಸ್ಕರಿಸಬಹುದು. ದಾಳಿಂಬೆ ಮರಗಳು ಹಣ್ಣು ಬಿಡಲು ಪ್ರಾರಂಭಿಸಲು 3 ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ನಂತರ 30 ವರ್ಷಗಳವರೆಗೆ ಹಣ್ಣುಗಳನ್ನು ಉತ್ಪಾದಿಸಬಹುದು.
ಅಂತೆಯೇ ದಾಳಿಂಬೆಯನ್ನು
ಶೀತ ಋತುವಿನಲ್ಲಿ ನೀವು
ಮನೆಯಲ್ಲಿ ಬಕೆಟ್ನಲ್ಲಿ ಬೆಳೆಯಬಹುದು. ದಾಳಿಂಬೆ ಗಿಡದ
ಗಾತ್ರ ಚಿಕ್ಕದಾಗಿರುವುದರಿಂದ ಮನೆಯ ಬಾಲ್ಕನಿ ಮತ್ತು ಅಂಗಳ ಗಳಲ್ಲಿ ನೆಡಬಹುದು.
ಮುಖ್ಯವಾಗಿ ದಾಳಿಂಬೆ ಬೀಜಗಳನ್ನು ನೆಡಲು ಉತ್ತಮ ಸಮಯವೆಂದರೆ ವಸಂತಕಾಲದ ಮಧ್ಯದವರೆಗೆ ಬಿಸಿ ಪ್ರದೇಶಗಳಲ್ಲಿ ನೀವು ಇದನ್ನು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳ ನಡುವೆ ನೆಡಬಹುದು. ನೀವು ಅದರ ಬೀಜ ವನ್ನು ಮೊಳಕೆ ಬರಿಸಿ ದಾಳಿಂಬೆ ಗಿಡವನ್ನು ಬೆಳೆಯಬಹುದು.
ದಾಳಿಂಬೆ ವಿವಿಧ ಮಣ್ಣಿನ ಪ್ರಕಾರಗಳಲ್ಲಿ ಬೆಳೆಯಬಲ್ಲದು. ಆದರೆ ಆಳವಾದ ಮತ್ತು ಚೆನ್ನಾಗಿ ನೀರು ಬಸಿಯುವ ಭಾರವಾದ ಕಲಸು ಲೋಮಿ ಮಣ್ಣಿಗೆ ಆದ್ಯತೆ ನೀಡುತ್ತದೆ. ಅತಿಯಾದ ಮಣ್ಣಿನ ತೇವಾಂಶವು ಇಳುವರಿ ಮತ್ತು ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
ಸಮಶೀತೋಷ್ಣ, ಅರೆ-ಶುಷ್ಕ ಮತ್ತು ಉಪ- ಉಷ್ಣವಲಯದ ವಾತಾವರಣ ದಲ್ಲಿ ದಾಳಿಂಬೆ ಬೆಳೆಯಬಹುದು. ಇದು ಸಾಮಾನ್ಯವಾಗಿ ಉತ್ತಮ ಬೆಳವಣಿಗೆಗಾಗಿ, ಅದರಲ್ಲೂ ವಿಶೇಷವಾಗಿ ಹಣ್ಣು ಬಿಡುವ ಸಮಯದಲ್ಲಿ ಬಿಸಿಲು, ಬೆಚ್ಚಗಿನ, ಶುಷ್ಕ ವಾತಾವರಣವನ್ನು ಬಯಸುತ್ತದೆ. ಜೊತೆಗೆ, ಚಳಿಗಾಲದಲ್ಲಿ ಶೀತ ಮತ್ತು ಶುಷ್ಕ ಹವಾಮಾನದ ಅಗತ್ಯವಿರುತ್ತದೆ
ಇನ್ನು ದಾಳಿಂಬೆ ಮರಗಳಿಗೆ ಕಡಿಮೆ ನೀರು ಪೂರೈಕೆ ಸಾಕಾಗುತ್ತದೆ. ಇದನ್ನು ಒಣ ಸ್ಥಳಗಳಲ್ಲಿಯೂ ಬೆಳೆಯಬಹುದು. ಆದರೆ ಮೊದಲ 2 ರಿಂದ 4 ವಾರಗಳಲ್ಲಿ ಗಿಡದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು.
ಇನ್ನು ಸಸ್ಯದ ಮೇಲೆ ಹೂವುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ಸಾಕಷ್ಟು ನೀರು ಹಾಕಬೇಕು. ಯಾಕೆಂದರೆ ನೀರಿನ ಕೊರತೆಯು ಮರದ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಇನ್ನು ದಾಳಿಂಬೆ ಗಿಡದಲ್ಲಿ ಹಣ್ಣು ಕೊರೆಯುವ ಹುಳು, ಕಾಯಿಕೊರಕ ರೋಗ ಮತ್ತು ಹೃದಯ ಕೊಳೆ ರೋಗ ಇತ್ಯಾದಿ ರೋಗಗಳು ಬರುತ್ತವೆ. ಅಂತಹ ರೋಗಲಕ್ಷಣಗಳನ್ನು ಕಂಡಾಗ, ಸಸ್ಯಗಳಿಗೆ ಸಾವಯವನಾಶಕ, ಕೀಟನಾಶಕ ಮತ್ತು ಬೇವಿನ ದ್ರಾವಣವನ್ನು ಬಳಸಿ. ಇನ್ನು ಗಿಡ ತುಂಬಾ ಎತ್ತರ ಅಥವಾ ಅಗಲವಾಗದಂತೆ ನೋಡಿಕೊಳ್ಳುವುದು ಅವಶ್ಯಕಆಗಿದೆ.
ದಾಳಿಂಬೆ ಹೂಬಿಟ್ಟ 6 ರಿಂದ 7 ತಿಂಗಳ ನಂತರ ಹಣ್ಣುಗಳು ಪಕ್ವವಾಗಲು ಪ್ರಾರಂಭಿಸುತ್ತದೆ. ಹಣ್ಣಿನ ಹೊರ ಕವಚ ಗಾಢ ಗುಲಾಬಿ ಬಣ್ಣಕ್ಕೆ ತಿರುಗಿದಾಗ, ನಂತರ ಮಾತ್ರ ಅದನ್ನು ಕಿತ್ತುಕೊಳ್ಳಿ.
ಇದನ್ನೂ ಓದಿ: ಕೆಂಬಾಳೆ ತಿನ್ನಿ, ಈ ಎಂಟು ಆರೋಗ್ಯ ಪ್ರಯೋಜನ ಪಡೆಯಿರಿ!!!