Relationship Tips: ಗಂಡ-ಹೆಂಡತಿ ತಿಂಗಳಿಗೆ ಎಷ್ಟು ಬಾರಿ ಕೂಡಿದ್ರೆ ಒಳ್ಳೆಯದು..! ಇದರ ಹಿಂದಿನ ಕಾರಣವೇನು?
Lifestyle relationship tips How to have more intimate sex what is the resom behind this
Relationship Tips: ದಾಂಪತ್ಯದಲ್ಲಿ ಲೈಂಗಿಕತೆಯನ್ನು ಹೊಂದುವುದು ಜೀವನದ ಅತ್ಯಂತ ಆರೋಗ್ಯಕರ ಭಾಗಗಳಲ್ಲಿ ಒಂದಾಗಿದೆ. ಪ್ರೀತಿ, ಉತ್ಸಾಹ ಮತ್ತು ಕಡುಬಯಕೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವ ಅತ್ಯಂತ ನೈಸರ್ಗಿಕ ಮಾನವ ಪ್ರಚೋದನೆಯಾಗಿದೆ.
ಆದರೆ ಲೈಂಗಿಕ ಶಿಕ್ಷಣದ (Relationship Tips) ಕೊರತೆ ಇಂದು ಹೆಚ್ಚಾಗುತ್ತಿದೆ. ಅದರಿಂದಾಗಿ ದಂಪತಿಗಳು ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ, ಅರಿಯದೇ ಮಾಡುವ ತಪ್ಪಿನಿಂದಾಗಿ ಮಲಗುವ ಕೋಣೆಯಲ್ಲಿ ಗಂಡ-ಹೆಂಡತಿ ನಡುವ ಮನಸ್ತಾಪಗಳು ಬರುತ್ತಿದೆ. ಇನ್ನು ಎಷ್ಟು ಬಾರಿ ಸಂಭೋಗಿಸುವುದು ಒಳ್ಳೆಯದು ಎಂಬ ಅರಿವು ಬಹುತೇಕರಿಗೆ ಇರುವುದಿಲ್ಲ.
ಲೈಂಗಿಕ ಕ್ರಿಯೆಯು ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ತರುವುದಲ್ಲದೆ ಪ್ರಯೋಜನಗಳನ್ನು ಸಹ ಸೃಷ್ಟಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುವುದು ಮತ್ತು ಒತ್ತಡವನ್ನು ಶಮನಗೊಳಿಸುತ್ತದೆ. ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಉತ್ತಮ ನಿದ್ರೆ ಮತ್ತು ಉತ್ತಮ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ನಮ್ಮ ವೈಯಕ್ತಿಕ ಜೀವನದಲ್ಲೂ ಒಳ್ಳೆಯ ಬದಲಾವಣೆಗಳನ್ನು ತರುತ್ತದೆ.
ಮಾಹಿತಿ ಪ್ರಕಾರ, ವಿವಾಹಿತರು ಹೆಚ್ಚು ದಿನ ಲೈಂಗಿಕತೆಯನ್ನು ಹೊಂದಿರುತ್ತಾರೆ ಎಂದು ಡೇಟಾ ತೋರಿಸುತ್ತದೆ. ಒಂದು ತಿಂಗಳಲ್ಲಿ ನೀವು ಎಷ್ಟು ಬಾರಿ ಲೈಂಗಿಕತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನೀವು ಯಾವಾಗ ಬೇಕಾದರೂ ಸಂಭೋಗಿಸಬಹುದು.
ಆದರೆ ಕೆಲವು ವೈದ್ಯರು ವಾರಕ್ಕೊಮ್ಮೆ ಲೈಂಗಿಕತೆಯನ್ನು ಶಿಫಾರಸು ಮಾಡುತ್ತಾರೆ. ಇದು ಸಂಗಾತಿ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.
ಅಧ್ಯಯನದ ಪ್ರಕಾರ, ಆಕ್ಸಿಟೋಸಿನ್ ಆತಂಕದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮನ್ನು ಸುಲಭವಾಗಿ ನಿದ್ರಿಸುವಂತೆ ಮಾಡುತ್ತದೆ. ಮನಸ್ಸು ಸಂತೋಷವಾಗಿರುವಂತೆ ನೋಡಿಕೊಳ್ಳಲು ಈ ಹಾರ್ಮೋನ್ ಸಹಾಯ ಮಾಡುತ್ತೆ.
ಇನ್ನು ಲೈಂಗಿಕತೆಯ ಪ್ರಯೋಜನಗಳ ಜೊತೆಗೆ ಅಡ್ಡ ಪರಿಣಾಮಗಳೂ ಇವೆ. ಒತ್ತಡವನ್ನು ನಿವಾರಿಸುವ ಅದೇ ಲೈಂಗಿಕತೆಯು ಕೆಲವೊಮ್ಮೆ ಒತ್ತಡಕ್ಕೆ ಸಿಲುಕಿಸುತ್ತದೆ. ಇದು ಕೆಲವೊಮ್ಮೆ ಬೆನ್ನುನೋವಿಗೆ ಕಾರಣವಾಗುತ್ತದೆ. ಪುರುಷರು ಆಗಾಗ್ಗೆ ಸ್ಖಲನದಂತಹ ಸಮಸ್ಯೆಗಳನ್ನು ಅನುಭವಿಸಬಹುದು ಮತ್ತು ಮಹಿಳೆಯರು ಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಚಾಣಕ್ಯನ ನೀತಿಯ ಈ ಪವರ್ ಫುಲ್ ಮಂತ್ರಗಳನ್ನು ಅಳವಡಿಸಿ, ಸಕ್ಸಸ್ ನಿಮ್ಮ ಕಾಲ ಬುಡದ ಬುಡದಲ್ಲಿ!!!