PU department Karnataka: ‘ ಪದವಿ ಪೂರ್ವ ಇಲಾಖೆ ‘ ಇನ್ಮುಂದೆ ಇರೋದಿಲ್ಲ- ಏನೀ ಸರ್ಕಾರದ ಹೊಸ ಆದೇಶ !!

Latest news Karnataka education Government order to change the new name of PU department immediately

PU department Karnataka: 2023 ಜೂನ್ 28 ರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನದಲ್ಲಿ ಬರಲಿದೆ. ಹೀಗಾಗಿ, ಪದವಿ ಪೂರ್ವ ಶಿಕ್ಷಣ (PU department Karnataka) ಇಲಾಖೆಯ ನಿರ್ದೇಶಕರು ಹಾಗೂ ಪದವಿ ಪೂರ್ವ ಹಂತ ಶಿಕ್ಷಣದ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಮತ್ತು ಎಲ್ಲ ಪಿಯು ಕಾಲೇಜುಗಳನ್ನು ಮರು’ಪದನಾಮೀಕರಣ’ಗೊಳಿಸುವಂತೆ ತಿಳಿಸಿದ್ದಾರೆ.

ಅದರಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಪದವಿ ಪೂರ್ವ ಹಂತದ ಜಿಲ್ಲಾ ಉಪ ನಿದೇರ್ಶಶಕರ ಕಚೇರಿಯನ್ನು ‘ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)’ ಎಂದು ಹಾಗೂ ಪಿಯು ಕಾಲೇಜುಗಳನ್ನು ‘ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು)’ ಎಂದು ಮರುನಾಮಕರಣ ಮಾಡುವಂತೆ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿ / ಪಿಯು ಕಾಲೇಜುಗಳ ನಾಮಫಲಕದಲ್ಲಿ ತಕ್ಷಣವೇ ಬದಲಾಯಿಸುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಹಾಗೂ ಎಲ್ಲ ಪ್ರಾಂಶುಪಾಲರಿಗೆ ಇಲಾಖೆ ನಿರ್ದೇಶಕಿ ಸಿಂಧೂ ಬಿ, ರೂಪೇಶ್ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.

ಈ ಹಿಂದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಬರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಕಛೇರಿಗಳು ಹಾಗೂ ಶಾಲೆಗಳ ಹಂತದಲ್ಲಿ ಪದನಾಮವನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕರ್ನಾಟಕ ಸರ್ಕಾರದ ನಿಯಮಗಳು 1977 ಅನುಸೂಚಿ -V ಸಾರ್ವಜನಿಕ ಶಿಕ್ಷಣ ಇಲಾಖೆ ಎಂಬ ಶೀರ್ಷಿಕೆಗೆ ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ ಎಂಬ ಶೀರ್ಷಿಕೆ ನೀಡಿ ತಿದ್ದುಪಡಿ ಮಾಡಲಾಗಿದೆ.

ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಕಛೇರಿಗಳು ಹಾಗೂ ರಾಜ್ಯದ ಎಲ್ಲಾ, ಕ್ಲಸ್ಟರ್ ಶಾಲೆಗಳು ಮತ್ತು ಕಛೇರಿಗಳ ನಾಮಫಲಕಗಳನ್ನು’ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ ಎಂಬ ನೂತನ ಪದನಾಮಕ್ಕೆ ಸರಿಹೊಂದುವಂತೆ ಬದಲಾಯಿಸಲು ಸರ್ಕಾರ ನಿರ್ಣಯಿಸಿ ಆದೇಶಿಸಿದೆ.

ಸದ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ಈವರೆಗೆ ಕರೆಯಲ್ಪಡುವ ಇಲಾಖೆಯನ್ನು ‘ಶಾಲಾ ಶಿಕ್ಷಣ ಇಲಾಖೆ’ ಎಂದು ಪದನಾಮೀಕರಿಸಿದೆ. ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ‘ಶಾಲಾ ಶಿಕ್ಷಣ’ ಎಂದು ಪದನಾಮೀಕರಿಸಿದೆ.

 

ಇದನ್ನು ಓದಿ: Manipur riots: 3 ತಿಂಗಳಾದರೂ ಮಣಿಪುರದ ಗಲಭೆ ನಿಲ್ಲುತ್ತಿಲ್ಲವೇಕೆ? ಸರ್ಕಾರಗಳು ಕೈಕಟ್ಟಿ ಕುಳಿತದ್ದಾರ್ರೂ ಏಕೆ? ಇಲ್ಲಿದೆ ನೋಡಿ ಹಲವು ರೋಚಕ ಕಾರಣಗಳು !! 

Leave A Reply

Your email address will not be published.