Amazon Prime: ಓರ್ವ ನಟಿಯಿಂದ ದೈತ್ಯ ಅಮೆಜಾನ್ ಗೆ ಭಾರೀ ಹೊಡೆತ ? ಅಂತದ್ದೇನಾಗಿತ್ತು ಅವಳಿಂದ ?
Latest news Cinima news This web series flopped and was a huge loss to Amazon Prime
Amazon Prime: ಇತ್ತೀಚೆಗಷ್ಟೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿರುವ ಸಿಟಾಡೆಲ್ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ (Amazon Prime) ಬಿಡುಗಡೆ ಆಗಿತ್ತು. ಆದರೆ ಈ ವೆಬ್ ಸೀರೀಸ್ ದೊಡ್ಡ ಸೋಲನ್ನು ಕಂಡಿದೆ. ಸೀರಿಸ್ ಬಗ್ಗೆ ಸಾಕಷ್ಟು ನಿರೀಕ್ಷೆಯಿತ್ತಾದರೂ ಅದನ್ನು ನಿಜ ಮಾಡುವಲ್ಲಿ ಮುಗ್ಗರಿಸಿದೆ. ಇದೀಗ ಈ ವೆಬ್ ಸರಣಿ ಫ್ಲಾಪ್ ಆಗಿದ್ದು ಅಮೆಜಾನ್ ಪ್ರೈಂ ಗೆ ಭಾರಿ ಸಂಕಷ್ಟ ಎದುರಾಗಿದೆ.
ಅಮೆಜಾನ್ ಪ್ರೈಂ ನಿರ್ಮಾಣದ ಅತಿ ದೊಡ್ಡ ಬಜೆಟ್ನ ವೆಬ್ ಸರಣಿಗಳಲ್ಲಿ ಒಂದು ಎಂಬ ಖ್ಯಾತಿಗೆ ಸಿಟಾಡೆಲ್ ಪಾತ್ರವಾಗಿತ್ತು.ಆಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸೀರಿಸ್‌ನಲ್ಲಿ ಪ್ರಿಯಾಂಕಾ, ರಿಚರ್ಡ್ ಜತೆಯಲ್ಲಿ ರುಸ್ಸೋ ಬ್ರದರ್ಸ್ ಕೂಡ ಇದ್ದಾರೆ. ಅಂದ ಹಾಗೆ ಈ ಸೀರಿಸ್ ಗೆ ಬರೋಬ್ಬರಿ 2000 ಕೋಟಿ ರೂ. ಹಣವನ್ನು ಅಮೆಜಾನ್ ಪ್ರೈಂ ಸುರಿದಿತ್ತು.
ಮೊದಲಿಗೆ ಈ ಸೀರಿಸ್‌ನ ಒಂದೊಂದು ಎಪಿಸೋಡ್‌ಗೆ 20 ಮಿಲಿಯನ್ ಡಾಲರ್ ಅನ್ನು ಪ್ರೈಮ್ ನೀಡಲು ಅಂದಾಜು ಹಾಕಿತ್ತು. ಆದರೆ ಸೀರಿಸ್‌ನ ಒಟ್ಟಾರೆ ಖರ್ಚು 250 ಮಿಲಿಯನ್ ಡಾಲರ್‌ಗೆ ಏರಿಕೆಯಾಯಿತು. ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು ನಟಿಸಿರುವ ಈ ಸರಣಿಗೆ ಪ್ರಚಾರವನ್ನೂ ಜೋರಾಗಿಯೇ ಮಾಡಲಾಗಿತ್ತಾದರೂ ಪ್ರೇಕ್ಷಕರ ಮನದಿಂದ ಸಿಟಾಡೆಲ್ ತಿರಸ್ಕರಿಸಲ್ಪಟ್ಟಿದೆ.
ಸಿಟಾಡೆಲ್(Citadel) ದೊಡ್ಡಮಟ್ಟದ ಸೋಲಿನ ಬಳಿಕ ಇದರ ಬೆನ್ನಲ್ಲೆ ಅದರ ಶೋಗಳು ಸಹ ಒಂದರ ಮೇಲೊಂದು ಸೋಲುತ್ತಿರುವುದು ದೈತ್ಯ ಒಟಿಟಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಅಮೆಜಾನ್ ಸಿಇಒ ಆಂಡಿ ಜಸ್ಸಿ, ಸಿಟಾಡೆಲ್ ಸೇರಿದಂತೆ ಇನ್ನೂ ಕೆಲವು ಶೋಗಳ ಬಜೆಟ್ ನಿರ್ವಹಣೆಯ ಪರಿಪೂರ್ಣ ವರದಿಯನ್ನು ಕೇಳಿದ್ದಾರಂತೆ. ಸಿಟಾಡೆಲ್ ಮಾತ್ರವಲ್ಲದೆ ವಿಶ್ವದ ಅತಿ ದೊಡ್ಡ ಬಜೆಟ್ನ ವೆಬ್ ಸರಣಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಲಾರ್ಡ್ ಆಫ್ ದಿ ರಿಂಗ್ಸ್; ದಿ ರಿಂಗ್ಸ್ ಆಫ್ ಪವರ್ ವೆಬ್ ಸರಣಿಯೂ ಸಹ ಜನರ ನಿರೀಕ್ಷೆಯನ್ನು ಗಳಿಸುವಲ್ಲಿ ವಿಫಲವಾಯಿತು.
ಇನ್ನೊಂದತ್ತ ಈ ಸಿಟಾಡೆಲ್ ಸೀರಿಸ್ ಭಾರತದ ವರ್ಷನ್ ಅನ್ನೂ ತಯಾರಿಸಲಾಗುತ್ತಿದೆ. ಪ್ರಿಯಾಂಕಾ ನಟಿಸಿದ್ದ ಪಾತ್ರದಲ್ಲಿ ಇಲ್ಲಿ ಸಮಂತಾ ರುತ್ ಪ್ರಭು(Samantha Ruth Prabhu) ನಟಿಸುತ್ತಿದ್ದಾರೆ. ನಾಯಕನಾಗಿ ಬಾಲಿವುಡ್ ಸ್ಟಾರ್ ವರುಣ್ ಧವನ್(Varun Dhavan) ನಟಿಸಲಿದ್ದಾರೆ. ಪ್ರಿಯಾಂಕಾರ ಸಿಟಾಡೆಲ್ ಸೋಲು ಸಮಂತಾರ ಸಿಟಾಡೆಲ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನು ಓದಿ: Congress Government: ಬಿಜೆಪಿ ಸರ್ಕಾರದ ಬರೋಬ್ಬರಿ 17 ಯೋಜನೆಗಳಿಗೆ ಕೊಕ್ಕೆ ಮಡಗಿದ ಡಿಕೆ – ಸಿದ್ದು ಜೋಡಿ