Diploma courses: ಕೆಇಎ’ಯಿಂದ ವಿವಿಧ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅರ್ಜಿ ವಿಧಾನ ಸೇರಿದಂತೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

latest news education KEA invites applications for admission to various diploma courses

Diploma Courses Admission: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ), 2023-24ನೇ ಸಾಲಿನ ಪ್ರವೇಶಾತಿಯನ್ನು ಆನ್‌ಲೈನ್ ಮೂಲಕ ಆರಂಭ ಮಾಡಿದ್ದು, ವಿವಿಧ ಡಿಪ್ಲೊಮ ಕೋರ್ಸ್‌ಗಳ ಪ್ರವೇಶಕ್ಕೆ (Diploma Courses Admission) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಎಸ್‌ಎಸ್‌ಎಲ್‌ಸಿ/ ತತ್ಸಮಾನ ತೇರ್ಗಡೆಯಾದ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರದಲ್ಲಿ ವಿವಿಧ ಡಿಪ್ಲೊಮ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಲಿಂಕ್ ಅನ್ನು ಓಪನ್ ಮಾಡಿದ್ದು, ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ರಾಜ್ಯದ್ಯಾಂತ 30 ಡಿಪ್ಲೊಮ ಕಾಲೇಜುಗಳನ್ನು ಹೊಂದಿದ್ದು ಈ ಎಲ್ಲಾ ಕಾಲೇಜುಗಳಲ್ಲಿ ಡಿಪ್ಲೊಮ, ಪೋಸ್ಟ್ ಡಿಪ್ಲೊಮ ಹಾಗೂ ಎಮ್‌.ಟೆಕ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.

ಇನ್ನು ಟೂಲ್‌ ಆಂಡ್ ಡೈ ಟೆಕ್ನಿಷನ್ ಮೇಕಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಲಾಗುತ್ತದೆ. ಮೆರಿಟ್‌ ಕಮ್‌ ರೋಸ್ಟರ್ ಪದ್ಧತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಇನ್ನು 20 ಸೀಟುಗಳು ವಿದ್ಯಾರ್ಥಿನಿಯರಿಗೆ ಮೀಸಲಾಗಿರುತ್ತವೆ.

ಕೋರ್ಸ್‌ಗಳ ವಿವರ ಮತ್ತು ವಿದ್ಯಾರ್ಹತೆ:
ಡಿಪ್ಲೊಮ ಇನ್ ಟೂಲ್ & ಡೈ ಮೇಕಿಂಗ್ (DTDM)- ಕೋರ್ಸ್ ಅವಧಿ 3+1- ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ.

ಡಿಪ್ಲೊಮ ಇನ್ ಪ್ರಿಶಿಯನ್ ಮ್ಯಾನುಫ್ಯಾಕ್ಚರಿಂಗ್ (DPM)- ಕೋರ್ಸ್ ಅವಧಿ 3+1- ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ.

ಡಿಪ್ಲೊಮ ಇನ್ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ (DEE) – ಕೋರ್ಸ್ ಅವಧಿ 3+1- ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ.

ಡಿಪ್ಲೊಮ ಇನ್ ಮೆಕ್ಕಾಟ್ರಾನಿಕ್ಸ್ (DMCH)- ಕೋರ್ಸ್ ಅವಧಿ 3+1- ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ.

ಡಿಪ್ಲೊಮ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಮೆಷಿನ್ ಲರ್ನಿಂಗ್ (DAI&ML)- ಕೋರ್ಸ್ ಅವಧಿ 3+1- ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ.

ಡಿಪ್ಲೊಮ ಇನ್ ಆಟೋಮೇಶನ್ ಆಂಡ್ ರೋಬೊಟಿಕ್ಸ್ (DAR) ಕೋರ್ಸ್ ಅವಧಿ 3+1- ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ.

ಡಿಪ್ಲೊಮ ಇನ್ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ (DEC) – ಕೋರ್ಸ್ ಅವಧಿ 3- ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ.

ಈ ಮೇಲಿನ ಕೋರ್ಸ್ ಅಧ್ಯಯನ ಮಾಡುವಾಗ ಕಡ್ಡಾಯ ಒಂದು ವರ್ಷದ ಇಂಟರ್ನ್‌ಶಿಪ್ ತರಬೇತಿ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳು ಕೈಗಾರಿಕಾ ವಾತಾವರಣಕ್ಕೆ ಹೊಂದಿಕೊಳ್ಳಲು ಸುಲಭವಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಹ ನೀಡಲಾಗುತ್ತದೆ.

ಆಯ್ಕೆ ಮಾಡಬಹುದಾದ ಜಿಟಿಟಿಸಿ ಡಿಪ್ಲೊಮ ಕಾಲೇಜುಗಳು:
ಹಾಸನ, ಹರಿಹರ, ಮಂಗಳೂರು, ಕಲಬುರಗಿ, ಬೆಳಗಾವಿ, ದಾಂಡೇಲಿ, ಹೊಸಪೇಟೆ, ಕೂಡಲಸಂಗಮ, ಕನಕಪುರ, ಲಿಂಗಸುಗೂರು, ಗುಂಡ್ಲಪೇಟೆ, ಕಡೂರು, ಹುಮ್ನಾಬಾದ್, ಕೋಲಾರ, ತುಮಕೂರು, ಶಿವಮೊಗ್ಗ, ಗೌರಿಬಿದನೂರು, ಚಿಕ್ಕೋಡಿ, ಗೋಕಾಕ್, ಉಡುಪಿ, ಯಾದಗಿರಿ, ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ದೇವನಹಳ್ಳಿ ಮತ್ತು ಮಾಗಡಿ.

ಇನ್ನು ಪರೀಕ್ಷಾ ಶುಲ್ಕ ಮತ್ತು ಬೋಧನಾ ಶುಲ್ಕ ಹಾಗು ಇತೆರೆ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ www.kea.kar.nic.in ಅಥವಾ ಹೆಲ್ಪಲೈನ್ ನಂಬರ್ 155267ಗೆ ಸಂಪರ್ಕಿಸಬಹುದು.

ಪ್ರಮುಖ ದಿನಾಂಕಗಳು:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 05-07-2023.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18-07-2023.
ದಾಖಲಾತಿ ಪರಿಶೀಲನೆ ಮತ್ತು ಕೋರ್ಸ್ & ಕಾಲೇಜು Option ಎಂಟ್ರಿ -20-07-2023 & 21-07-2023.
ಮೊದಲನೇ ಸುತ್ತಿನ ಕೌನ್ಸಲಿಂಗ್ ದಿನಾಂಕ – 24-07-2023.
ಎರಡನೇ ಸುತ್ತಿನ ಕೌನ್ಸಲಿಂಗ್ ದಿನಾಂಕ – 27-07-2023 ಆಗಿದೆ.

 

ಇದನ್ನು ಓದಿ: Adhar card- Ration card: ಆಧಾರ್-ರೇಷನ್ ಕಾರ್ಡ್ ಗೆ ಬಂತು ಹೊಸ ರೂಲ್ಸ್!! ಇದನ್ನು ಮಾಡ್ಲಿಲ್ಲ ಅಂದ್ರೆ ಸದ್ಯದಲ್ಲೇ ನಿಮ್ಮ ರೇಷನ್ ಕಾರ್ಡ್ ಆಗುತ್ತೆ ಕ್ಯಾನ್ಸಲ್!!

Leave A Reply

Your email address will not be published.