Education department: ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಇನ್ನು ಜೀನ್ಸ್ ಮತ್ತು ಟಿ-ಶರ್ಟ್ ಧರಿಸುವಂತಿಲ್ಲ ! ತಕ್ಷಣದಿಂದಲೇ ಆದೇಶ !
latest news Education news Ban on wearing jeans and t-shirt in education department offices
Education Department: ಸರ್ಕಾರವು ರಾಜ್ಯ ಶಿಕ್ಷಣ ಇಲಾಖೆಯಲ್ಲಿನ ತನ್ನ ಉದ್ಯೋಗಿಗಳಿಗೆ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ ಕಚೇರಿಗೆ ಬರದಂತೆ ನಿಷೇಧ ಹೇರಿದೆ. ಅಂತಹ ಉಡುಗೆ ತೊಡುಗೆಗಳು ಕೆಲಸದ ವಾತಾವರಣದ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಇಲಾಖೆ ವಾದ ಹೂಡಿದೆ. ಶಿಕ್ಷಣ ಇಲಾಖೆ ನಿರ್ದೇಶಕರು ಬುಧವಾರ ಹೊರಡಿಸಿದ ಆದೇಶದಲ್ಲಿ, ನೌಕರರು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿ ಕಚೇರಿಗೆ ಬರಲು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಬಿಹಾರ ಸರ್ಕಾರ ಇಂತಹದೊಂದು ಡ್ರೆಸ್ ಕೋಡ್ ಕಡಿವಾಣಕ್ಕೆ (Education Department) ಹೊರಟಿದೆ.
‘ಸರ್ಕಾರದ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಕಚೇರಿ ಸಂಸ್ಕೃತಿಗೆ ವಿರುದ್ಧವಾದ ವೇಷಭೂಷಣ ಧರಿಸಿ ಕಚೇರಿಗೆ ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಮತ್ತು ಇತರೆ ನೌಕರರು ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ ಕಚೇರಿಗೆ ಬರುವುದು ಕಾರ್ಯ ಸಂಸ್ಕೃತಿಗೆ ವಿರುದ್ಧವಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಿಟಿಐ ಸುದ್ದಿ ಸಂಸ್ಥೆ ವರದಿಯ ಪ್ರಕಾರ, ” ಇನ್ನು ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಔಪಚಾರಿಕ ಉಡುಗೆಯಲ್ಲಿ ಮಾತ್ರ ಬರಬೇಕು. ಎಲ್ಲಾ ಅಧಿಕಾರಿಗಳು ಮತ್ತು ನೌಕರರು ‘ಔಪಚಾರಿಕ’ ಅನ್ನಿಸಿರುವ ಬಟ್ಟೆಗಳನ್ನು ಧರಿಸಿ ಶಿಕ್ಷಣ ಇಲಾಖೆ ಕಚೇರಿಗಳಿಗೆ ಬರಬೇಕು. ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಯಾವುದೇ ‘ಸಾಂದರ್ಭಿಕ’ ಅನ್ನಿಸಿರುವ ಉಡುಪನ್ನು, ಮುಖ್ಯವಾಗಿ ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.” ಎಂದು ಆದೇಶ ವಿವರಿಸಿದೆ.
ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ, ಏಪ್ರಿಲ್‌ನಲ್ಲಿ, ಸರನ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ನೌಕರರು ಜೀನ್ಸ್ ಮತ್ತು ಟೀ-ಶರ್ಟ್‌ಗಳನ್ನು ಧರಿಸುವುದನ್ನು ನಿಷೇಧಿಸಿದ್ದರು. ಅಲ್ಲಿ 2019 ರಲ್ಲಿ ಬಿಹಾರ ಸರ್ಕಾರವು ಕೆಲಸದ ಸ್ಥಳದ ಮಹತ್ವವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸಚಿವಾಲಯದಲ್ಲಿ ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಧರಿಸುವುದನ್ನು ನಿಷೇಧಿಸಿತ್ತು. ರಾಜ್ಯ ಸಚಿವಾಲಯದ ಸರ್ಕಾರಿ ನೌಕರರು ಕಚೇರಿಗೆ ಸರಳವಾಗಿದ್ದು,ಆರಾಮದಾಯಕವಾಗಿರುವ, ಜತೆಗೆ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂದು ಸೂಚಿಸಲಾಗಿತ್ತು. ಅದು ವಿವಾದವನ್ನು ಕೂಡಾ ಉಂಟು ಮಾಡಿತ್ತು.