KARBWWB Recruitment 2023: ಕರ್ನಾಟಕ ಬಿಲ್ಡಿಂಗ್ ಅಂಡ್ ಅದರ್ ಕಂಸ್ಟ್ರಕ್ಷನ್ ವರ್ಕರ್ ವೆಲ್‌ಫೇರ್ ಬೋರ್ಡ್‌ ನಲ್ಲಿ ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ!

Karnataka building and other construction welfare worker board recruitment KARBWWB RECRUITMENT job notification 2023

KARBWWB Recruitment 2023: ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು, ಇಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಬಿಲ್ಡಿಂಗ್ ಅಂಡ್ ಅದರ್ ಕಂಸ್ಟ್ರಕ್ಷನ್ ವರ್ಕರ್ ವೆಲ್‌ಫೇರ್ ಬೋರ್ಡ್‌ ನಲ್ಲಿನ ವಿವಿಧ ಈ ಕೆಳಗಿನ ಫೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಲಿಂಕ್‌ ಬಿಡುಗಡೆ ಮಾಡಿದ್ದು, ಪಿಯುಸಿ ಹಾಗೂ ಪದವಿ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ವಿವರ ಕೆಳಗಿನಂತಿದೆ.

ಹುದ್ದೆಗಳ ವಿವರ (KARBWWB Recruitment 2023) :
ಕಲ್ಯಾಣ ಅಧಿಕಾರಿ : 12
ಕ್ಷೇತ್ರ ನಿರೀಕ್ಷಕರು : 60
ಪ್ರಥಮ ದರ್ಜೆ ಸಹಾಯಕರು: 12
ಆಪ್ತ ಸಹಾಯಕರು : 02
ದ್ವಿತೀಯ ದರ್ಜೆ ಸಹಾಯಕರು: 100.
ಒಟ್ಟು ಹುದ್ದೆಗಳು : 186
ಈ ಮೇಲಿನ ಎಲ್ಲ ಹುದ್ದೆಗಳು ಸಹ ಗ್ರೂಪ್ ಸಿ ಹುದ್ದೆಗಳಾಗಿವೆ.

ಹುದ್ದೆವಾರು ವೇತನ ಶ್ರೇಣಿ ವಿವರ
ಕಲ್ಯಾಣ ಅಧಿಕಾರಿ : Rs.37,900-70,850.
ಕ್ಷೇತ್ರ ನಿರೀಕ್ಷಕರು : Rs.33,450-62,600.
ಪ್ರಥಮ ದರ್ಜೆ ಸಹಾಯಕರು: Rs.27,650-52,650.
ಆಪ್ತ ಸಹಾಯಕರು : Rs.27,650-52,650.
ದ್ವಿತೀಯ ದರ್ಜೆ ಸಹಾಯಕರು: Rs.21,400-42000.

ವಿದ್ಯಾರ್ಹತೆ:
ಕಲ್ಯಾಣ ಅಧಿಕಾರಿ: ಪದವಿ ಪಾಸ್.
ಕ್ಷೇತ್ರ ನಿರೀಕ್ಷಕರು : ಪದವಿ ಪಾಸ್.
ಪ್ರಥಮ ದರ್ಜೆ ಸಹಾಯಕರು: ಪದವಿ ಪಾಸ್.

ಆಪ್ತ ಸಹಾಯಕರು: ಪದವಿ ಜತೆಗೆ, ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್‌ ಪಾಸ್‌ ಹಾಗೂ ಟೈಪಿಂಗ್ ಜ್ಞಾನ ಇರಬೇಕು.

ದ್ವಿತೀಯ ದರ್ಜೆ ಸಹಾಯಕರು: ದ್ವಿತೀಯ ಪಿಯುಸಿ ಪಾಸ್‌ ಅಥವಾ ತತ್ಸಮಾನ ಅರ್ಹತೆಗಳು.

ವಯಸ್ಸಿನ ಅರ್ಹತೆ:
ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ.
ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಶುಲ್ಕ ವಿವರ:
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.1000.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250.

ಆಯ್ಕೆ ವಿಧಾನ:
ಈ ಮೇಲಿನ ಪ್ರತಿ ಹುದ್ದೆಗೆ ಎರಡು ಪತ್ರಿಕೆಗಳ ಪರೀಕ್ಷೆ ನಡೆಸಲಿದ್ದು, ಒಂದು ಸಾಮಾನ್ಯ ಪತ್ರಿಕೆ ಇರುತ್ತದೆ. ಮತ್ತೊಂದು ಹುದ್ದೆಗೆ ಸಂಬಂಧಿತ ಪತ್ರಿಕೆ ಇರುತ್ತದೆ. ಪ್ರತಿ ಪ್ರಶ್ನೆ ಪತ್ರಿಕೆ 100 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಕೆಇಎ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ : 22-06-2023

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 23-06-2023

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-07-2023 ರ ಸಂಜೆ 05-30 ಗಂಟೆವರೆಗೆ.

ಇ-ಅಂಚೆ ಕಛೇರಿಗಳಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ : 25-07-2023

 

ಅಧಿಸೂಚನೆ ಲಿಂಕ್

ಮುಖ್ಯವಾಗಿ ಈ ಸದರಿ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರ್ಗಿ, ಬಿಜಾಪುರ, ಶಿವಮೊಗ್ಗ ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುವುದು.

ಇದನ್ನೂ ಓದಿ: Plastic Bottle: ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುವುದರಿಂದ ಏನಾಗುತ್ತದೆ ಎಂಬ ಅಸಡ್ಡೆ ಬೇಡ!

Leave A Reply

Your email address will not be published.