Abhishek Ambareesh: ಅಭಿಷೇಕ್ ಅಂಬರೀಶ್ ಮದ್ವೆಯಾದ ಅವಿವಾ ಮೊದಲ ಗಂಡ ಯಾರು, ಡಿವೋರ್ಸ್ ಆಗಿದ್ದು ಯಾಕೆ ಎಂಬ ಕುತೂಹಲ ನಿಮ್ಮಲ್ಲಿದ್ಯಾ?
Abhishek Ambareesh : ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದ್ದಪ್ಪ ಮದುವೆ ಜೂನ್ 5ರಂದು ನಡೆದಿದೆ. ಅಭಿಷೇಕ್ ಮತ್ತು ಅವಿವಾ ಇಬ್ಬರು ಸೆಲೆಬ್ರಿಟಿಗಳು ಅವರ ಕುಟುಂಬವೇ ಸೆಲೆಬ್ರಿಟಿ ಕುಟುಂಬವಾಗಿರುವ ಕಾರಣ ಮದುವೆ ಅದೇ ವೈಭವದಿಂದ ನಡೆದಿತ್ತು. ಈಗಾಗಲೇ ಮದುವೆಯಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ಹಾಗೂ ನಿಮಗಿಂತ ವಯಸ್ಸಿನಲ್ಲಿ ಹಿರಿಯೆ ಹುಡುಗಿಯನ್ನು ಯಾಕೆ ನೀವು ಮದುವೆ ಆಗುತ್ತಿದ್ದೀರಿ ಎಂದು ಅಭಿಷೇಕ್ ಗೆ ಸೋಷಿಯಲ್ ಮೀಡಿಯಾ ಪ್ರಶ್ನೆ ಕೇಳಿದ್ದಾರೆ. ಹೌದು, ಅವಿವಾ ಬಿದ್ದಪ್ಪ ಅವರಿಗೆ ಈಗಾಗಲೇ ಒಂದು ಮದುವೆಯಾಗಿದ್ದು ಆಕೆಗೆ ಡೈವೋರ್ಸ್ ಆಗಿದೆ. ಆನಂತರ ಕೆಲವು ವರ್ಷಗಳ ಬಳಿಕ ಈಗ ಅಭಿಷೇಕ್ ಅಂಬರೀಶ್ ಅವರನ್ನು ಅವಿವಾ ಬಿದ್ದಪ್ಪ ಮದುವೆಯಾಗುತ್ತಿದ್ದಾರೆ.
ಅವಿವಾ ಬಿದ್ದಪ್ಪ ಭಾರತದ ಫ್ಯಾಷನ್ ಗುರು ಎಂದೇ ಪ್ರಖ್ಯಾತಿ ಪಡೆದಿರುವ ಪ್ರಸಾದ್ ಬಿದ್ದಪ್ಪ ಅವರ ಮಗಳು. ಈಕೆ ಕೂಡ ಫ್ಯಾಷನ್ ಡಿಸೈನಿಂಗ್ ಓದಿ ಅಪ್ಪನ ಥರ ಫ್ಯಾಷನ್ ಲೋಕದಲ್ಲಿ ಉದ್ಯಮಿಯಾಗಿ ಮತ್ತು ಮಾಡೆಲ್ ಆಗಿ ಮಿಂಚಿದವರು. ಆಕೆ ಈ ಹಿಂದೆ ಉದ್ಯಮಿ ವಿಕ್ರಂ ಮೆಹ್ತಾ ಅವರನ್ನು ಮದುವೆಯಾಗಿದ್ದರು. ಆವೀವಾ ಹಲವಾರು ಭಾರತೀಯ ಚಿತ್ರಗಳಲ್ಲಿ ನಟಿಸಿದ್ದಾರೆ. Yeh Hai Mohabbatein and Love Ka Hai Intezaar ಮುಂತಾದ ಟೀವಿ ಪ್ರೋಗ್ರಾಂ ಗಳಲ್ಲಿ ನಟಿಸಿದ್ದು ಜೊತೆಗೆ ಹಲವು ಜಾಹಿರಾತುಗಳಲ್ಲಿ ಮತ್ತು ಫ್ಯಾಶನ್ ಇವೆಂಟ್ಗಳಲ್ಲಿ ಆಕೆ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಆಕೆಯ ಮೊದಲ ಗಂಡ ವಿಕ್ರಂ ಮೆಹ್ತಾ ಕೂಡಾ ದೊಡ್ಡ ಬ್ಯುಸಿನೆಸ್ ಮ್ಯಾನ್. Mpire ಎಂಬ ಭಾರತೀಯ ಮದುವೆಗಳನ್ನು ನಡೆಸಿಕೊಡುವ ಈ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಸಂಸ್ಥೆ. ಭಾರತೀಯ ಮದುವೆ ಗಳನ್ನು ಗ್ರಾಂಡ್ ಆಗಿ ಮತ್ತು ಸಂಪ್ರದಾಯ ಬದ್ಧವಾಗಿ ನಡೆಸಿಕೊಡುವ ಮ್ಯಾರೇಜ್ ಇವೆಂಟ್ ಸಂಸ್ಥೆಯ ಮುಖ್ಯಸ್ಥ ಅವಿವಾ ಬಿದ್ದಪ್ಪರನ್ನು ಮದುವೆಯಾಗಿದ್ದರು. ಆದರೆ ಆ ಮದುವೆಯೇ ಮುರಿದು ಬಿದ್ದಿದೆ. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯ ಆಗದೆ ಅವರಿಬ್ಬರೂ ಪರಸ್ಪರ ದೂರ ಆಗಿದ್ದರು. 2016 ರಲ್ಲಿ ಡಿವೋರ್ಸ್ ನೀಡಿ ಬೇರೆಯಾಗಿದ್ದರು. ಆದರೀಗ ಅಭಿಷೇಕ್ ಅಂಬರೀಶ್ ಅವರನ್ನುಎರಡನೇ ಮದುವೆಯಾಗಿದ್ದಾರೆ ಅವಿವಾ. ಆದರೆ ಅಭಿಷೇಕ್ ಅಂಬರೀಷ್ ಗೆ ಇದು ಮೊದಲನೇ ಸಂಬಂಧ.
ಅಭಿಷೇಕ್, ಅವಿವಾರನ್ನು ಪಾರ್ಟಿ ಒಂದರಲ್ಲಿ ನೋಡಿದ್ದರು. ಅಲ್ಲಿಂದ ಪರಿಚಯ, ನಂತರ ಸ್ನೇಹ ಬೆಳೆದು ಈಗ ಅವರಿಬ್ಬರೂ ಮದ್ವೆ ಆಗಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆಯು ಒಕ್ಕಲಿಗ ಗೌಡರ ಸಂಪ್ರದಾಯದಲ್ಲಿ ಜೂನ್ 5 ರಂದು ಅದ್ಧೂರಿಯಾಗಿ ನೆರವೇರಿದೆ. ಕೇವಲ ಆಪ್ತರು, ಕುಟುಂಬದವರಿಗೆ ಮಾತ್ರ ಆಹ್ವಾನ ಇತ್ತು, ಸಾರ್ವಜನಿಕರಿಗೆ ಆಹ್ವಾನ ಇರಲಿಲ್ಲ. ನಂತರಮದುವೆಗಿಂತಲೂ ಅದ್ಧೂರಿಯಾಗಿ ರಿಸೆಪ್ಷನ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಘಟಾನುಘಟಿ ನಟ ನಟಿ ರಾಜಕೀಯ ನಾಯಕರು ಆಗಮಿಸಿ ನವ ಜೋಡಿಗೆ ಶುಭಕೋರಿದ್ದಾರೆ. ಒಟ್ಟು 25 ಸಾವಿರ ಜನರಿಗೆ ಮೃಷ್ಟಾನ್ನ ಭೋಜನ ಸಿದ್ಧಪಡಿಸಿ ಬಡಿಸಲಾಗಿತ್ತು.
ಇದನ್ನೂ ಓದಿ :ಅಮ್ಮನ ಓವರ್ ಮೇಕಪ್ ಸೃಷ್ಟಿಸಿದ ಆವಾಂತರ!