Bank Job: ಗ್ರಾಮೀಣ ಬ್ಯಾಂಕುಗಳಲ್ಲಿ ಭರ್ಜರಿ ಉದ್ಯೋಗವಕಾಶ, 800 ಹುದ್ದೆಗಳ ಭರ್ತಿ ಕಾರ್ಯ ಶುರು!

Education news Job news career latest news RRB exam Rural banks job recruitment 806 posts filling up

Bank job: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್‌) ದೇಶದಾದ್ಯಂತ 43 ಗ್ರಾಮೀಣ ಬ್ಯಾಂಕ್‌ಗಳಲ್ಲಿ (ಆರ್‌ಆರ್‌ಬಿ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ರಾಜ್ಯದ ಬಳ್ಳಾರಿಯ (ballari) ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆಗಳು (Bank job) ಖಾಲಿ ಇದ್ದು, ಭರ್ತಿ ಕಾರ್ಯ ಶುರುವಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:
ಹುದ್ದೆಯ‌ ಹೆಸರು- ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್), ಆಫೀಸರ್ ಹುದ್ದೆ
ಹುದ್ದೆಯ‌ ಸಂಖ್ಯೆ- 806

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 01/06/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/06/2023

ವಿದ್ಯಾರ್ಹತೆ ಮತ್ತು ಅನುಭವ:
• ಆಫೀಸ್ ಅಸಿಸ್ಟೆಂಟ್‌ – ಪದವಿ ಪೂರ್ಣಗೊಳಿಸಿರಬೇಕು. ಸ್ಥಳೀಯ ಭಾಷೆ ತಿಳಿದಿರಬೇಕು. ಕಂಪ್ಯೂಟರ್‌ ಜ್ಞಾನ ಇರಬೇಕು.
• ಆಫೀಸರ್ ಸ್ಕೇಲ್-I – ಸ್ಥಳೀಯ ಭಾಷೆ ತಿಳಿದಿರಬೇಕು. ಕಂಪ್ಯೂಟರ್‌ ಜ್ಞಾನ ಇರಬೇಕು. ಪದವಿ ಪೂರ್ಣಗೊಳಿಸಿರಬೇಕು. ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಅಥವಾ ಲೆಕ್ಕಶಾಸ್ತ್ರದಲ್ಲಿ ಪದವಿ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ.

• ಸ್ಕೇಲ್‌–II ಅಧಿಕಾರಿಗಳ ಹುದ್ದೆ: ಸ್ಕೇಲ್‌–II ಅಧಿಕಾರಿಗಳಿಗೆ (ವ್ಯವಸ್ಥಾಪಕರು), ಅಗ್ರಿಕಲ್ಚರ್ ಆಫೀಸರ್ /ಲಾ ಆಫೀಸರ್‌ಗಳಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಸೇವೆ/ ಸ್ಪೆಷಲ್‌ಆಫೀಸರ್ಸ್‌ ಗಳು/ಚಾರ್ಟೆಡ್‌ ಅಕೌಂಟೆಂಟ್ /ಟ್ರಶರಿ ಆಫೀಸರ್/ ಮಾರ್ಕೆಟಿಂಗ್ ಆಫೀಸರ್/ಗೆ ಒಂದು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.

ಸ್ಪೆಷಲ್‌ ಆಫೀಸರ್ಸ್‌: ಇನ್ ಫಾರ್ಮೇಷನ್ ಟೆಕ್ನಾಲಜಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಶೇ 50 ಅಂಕಗಳೊಂದಿಗೆ ಎಲೆಕ್ಟ್ರಾನಿಕ್ಸ್ / ಕಮ್ಯುನಿಕೇಶನ್ / ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು. ಇದರ ಜೊತೆಗೆ, ASP, PHP, C++, Java, VB, VC, OCP ಸಾಫ್ಟ್‌ವೇರ್‌ ಕಲಿಕೆಯ ಪ್ರಮಾಣಪತ್ರ.
ವ್ಯವಸ್ಥಾಪಕರು: ಶೇ 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ಬ್ಯಾಂಕಿಂಗ್, ಹಣಕಾಸು, ಮಾರುಕಟ್ಟೆ, ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.

ಚಾರ್ಟೆಡ್‌ ಅಕೌಂಟೆಂಟ್: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಸರ್ಟಿಫೈಡ್ ಅಸೋಸಿಯೇಟ್ (CA) ಪದವಿ ಪಡೆದಿರುವುದು ಕಡ್ಡಾಯ.
ಅಗ್ರಿಕಲ್ಚರ್ ಆಫೀಸರ್: ಈ ಹುದ್ದೆಗಳಿಗೆ ಕೃಷಿ/ತೋಟಗಾರಿಕೆ/ಹೈನುಗಾರಿಕೆ/ ಪಶುಸಂಗೋಪನೆ/ ಅರಣ್ಯಶಾಸ್ತ್ರ /ಪಶುವೈದ್ಯಕೀಯ ವಿಜ್ಞಾನ/ಕೃಷಿ ಎಂಜಿನಿಯರಿಂಗ್/ಮೀನುಗಾರಿಕೆ ವಿಷಯದಲ್ಲಿ ಶೇ 50 ಅಂಕಗಳೊಂದಿಗೆ ಪದವಿ ಪಡೆದಿರಬೇಕು.
ಟ್ರಶರಿ ಆಫೀಸರ್: ಹಣಕಾಸು ವಿಷಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಎಂಬಿಎ ಪದವಿ ಪಡೆದಿರಬೇಕು.
ಮಾರ್ಕೆಟಿಂಗ್ ಆಫೀಸರ್: ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಹೊಂದಿರಬೇಕು.
ಲಾ ಆಫೀಸರ್: ಶೇ 50 ಅಂಕಗಳೊಂದಿಗೆ ಕಾನೂನು ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು.ಅಥವಾ ಎರಡು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕು.

ಹಿರಿಯ ವ್ಯವಸ್ಥಾಪಕ(ಸ್ಕೇಲ್-III): ಶೇ 50 ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಬ್ಯಾಂಕಿಂಗ್, ಹಣಕಾಸು, ಮಾರುಕಟ್ಟೆ, ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನು ಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಅಕೌಂಟೆನ್ಸಿಯಲ್ಲಿ ಪದವಿ/ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ. ಜೊತೆಗೆ ಬ್ಯಾಂಕ್‌ಅಥವಾ ವಿತ್ತೀಯ ಸಂಸ್ಥೆಗಳಲ್ಲಿ ಐದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.

ಕ್ರೆಡಿಟ್ ಇತಿಹಾಸ: (i) ಅಭ್ಯರ್ಥಿಯು ಬ್ಯಾಂಕ್‌ಖಾತೆ ಹೊಂದಿದ್ದರೆ, ಅವರು CIBIL ಸ್ಕೋರ್ ಚೆನ್ನಾಗಿರಬೇಕು ಮತ್ತು ಬ್ಯಾಂಕ್ ಹುದ್ದೆಗೆ ನೇಮಕವಾಗುವ ಸಮಯದಲ್ಲಿ ಕನಿಷ್ಠ CIBIL ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತಪಡಿಸಿ ಕೊಳ್ಳಬೇಕು.
(ii) ಸೇರುವ ದಿನಾಂಕದ ಮೊದಲು CIBIL ಸ್ಥಿತಿಯನ್ನು ನವೀಕರಿಸದಿದ್ದರೆ, ಮೊದಲು ನವೀಕರಿಸಬೇಕು ಅಥವಾ CIBIL ವರದಿ ಪ್ರತಿಕೂಲವಾಗಿದ್ದಲ್ಲಿ ಆ ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಬ್ಯಾಂಕಿನಿಂದ ನಿರಾಪೇಕ್ಷಣಾ ಪತ್ರ (NOC) ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ / ರದ್ದುಗೊಳಿಸಲಾಗುತ್ತದೆ.

ವಯೋಮಿತಿ:
ಆಫೀಸ್‌ ಅಸಿಸ್ಟೆಂಟ್ (ಮಲ್ಟಿಪರ್ಪಸ್) : 18 -28 ವರ್ಷ.
ಆಫೀಸರ್ ಸ್ಕೇಲ್-I : 18 – 30 ವರ್ಷ.
ಆಫೀಸರ್ ಸ್ಟೇಲ್- II : 21- 32 ವರ್ಷ
ಆಫೀಸರ್ ಸ್ಟೇಲ್ – III : 21 – 40 ವರ್ಷ.

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
ಎಸ್‌.ಸಿ ಮತ್ತು ಎಸ್‌.ಟಿ ಅಭ್ಯರ್ಥಿಗಳು- 5 ವರ್ಷ
ಅಂಗವಿಕಲ ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ :
• ಎಸ್‌ಸಿ/ಎಸ್‌ಟಿ/ ಅಂಗವಿಕಲರು/ಮಾಜಿ ಸೈನಿಕ ಅಭ್ಯರ್ಥಿಗೆ -₹175
• ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗೆ -₹ 850
• ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

ಅರ್ಜಿ ಸಲ್ಲಿಕೆಯ ಬಗೆಗಿನ ಮಾಹಿತಿ :
• ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದು.
• ಅಭ್ಯರ್ಥಿಯು ತನ್ನ ಕೈ ಬರಹದ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಅಪ್ ಲೋಡ್ ಮಾಡಬೇಕು.
• ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಬರೆದ ಡಿಕ್ಲರೇಷನ್ ಮತ್ತು ಸಹಿ ಪರಿಗಣಿಸುವುದಿಲ್ಲ.

ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಗೆ ಭೇಟಿ ನೀಡಿ : www.ibps.in/

ಇದನ್ನೂ ಓದಿ: ATM ಇಲ್ಲದಿದ್ರೂ, ಕೈ ಬೀಸಿಕೊಂಡು ಹೋಗಿ ‘ಆಧಾರ್ ಪಾವತಿ ವ್ಯವಸ್ಥೆ ‘ ಮೂಲಕ ಬ್ಯಾಂಕಿಂಗ್ ಮಾಡಬಹುದು, ಹೇಗೆ ಅಂತೀರಾ ?

2 Comments
  1. Clorinda Landon says

    Wow that was strange. I just wrote an incredibly long comment but after I clicked submit my comment didn’t appear. Grrrr… well I’m not writing all that over again. Anyway, just wanted to say superb blog!

  2. liputan live online says

    Pretty nice post. I just stumbled upon your blog and wished to say that I have really enjoyed browsing your blog posts. In any case I’ll be subscribing to your feed and I hope you write again soon!

Leave A Reply

Your email address will not be published.