Hithesh: ಪ್ಯಾಂಕು ಪ್ಯಾಂಕು ಹಿತೇಶ್: ರಿಯಾಲಿಟಿ ಶೋ ದಲ್ಲಿ ನಿರೂಪಕನಾಗಿ ನಿಮ್ಮ ಮುಂದೆ ಬರಲಿದ್ದಾರೆ! ಇನ್ನೆರಡೇ ದಿವಸ ವೈಟ್ ಆಂಡ್ ಸೀ!
Hitesh will appear before you as a presenter in a reality show
Hithesh: ರಿಯಾಲಿಟಿ ಶೋ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ! ಕೆಲಸದ ನಡುವೆ ಸ್ವಲ್ಪ ರಿಲೀಫ್ ಸಿಗಲು ರಿಯಾಲಿಟಿ ಶೋ ಒಂದು ದೊಡ್ಡ ಎನರ್ಜಿ ಎಂದರೆ ತಪ್ಪಾಗಲಾರದು. ಇದೀಗ ನಿಮಗಾಗಿ ಸಿರಿಕನ್ನಡ ವಾಹಿನಿಯಲ್ಲಿ ಇದೇ 5ರಿಂದ ಎರಡು ಮೆಗಾ ಧಾರಾವಾಹಿಗಳು ರಂಜಿಸಲು ಬರುತ್ತಿವೆ. ಜೊತೆಗೆ ಹಾಸ್ಯ ನಟ ಹಿತೇಶ್ (Hithesh) ಮತ್ತು ಹೇಮಲತಾ ಸಖತ್ ಜೋಡಿ ಅನ್ನೋ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಡಲಿದ್ದಾರೆ.
ಹೌದು, ಜೂನ್ 5 ರಿಂದ ಊರ್ಮಿಳಾ, ಬ್ರಾಹ್ಮಿನ್ಸ್ ಕೆಫೆ ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ ಸಖತ್ ಜೋಡಿ ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ವಿಶೇಷ ಏನೆಂದರೆ, ಸಖತ್ ಜೋಡಿ ರಿಯಾಲಿಟಿ ಶೋ ಮೂಲಕ ಕಾಮಿಡಿ ಕಿಲಾಡಿಯ ಹಾಸ್ಯ ನಟ ಪ್ಯಾಕು ಪ್ಯಾಕು ಹಿತೇಶ್ ನಿರೂಪಕನಾಗಿ ಎಂಟ್ರಿಕೊಟ್ಟಿದ್ದಾರೆ.
ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಅವರು ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ಮೂಲಕ ಸಿರಿಕನ್ನಡ ಮೂಲಕ ಕನ್ನಡಿಗರ ಮನ ಗೆದ್ದಿದೆ.
ಇದೀಗ ಇವರ ನೇತೃತ್ವದಲ್ಲಿ ಜೂನ್ 5 ರಿಂದ ಊರ್ಮಿಳಾ ಹಾಗೂ ಬ್ರಾಹ್ಮಿನ್ಸ್ ಕೆಫೆ ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ ಸಖತ್ ಜೋಡಿ ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಶೋನಲ್ಲಿ ಭಾರಿ ಮೊತ್ತದ ಉಡುಗೊರೆಗಳು ಇವೆ. ಮುಂದೆ ನಮ್ಮ ವಾಹಿನಿಯ ವೀಕ್ಷಕರಿಗೆ ಅರ್ಧಗಂಟೆಗೊಮ್ಮೆ ಪ್ರಶ್ನೆ ಕೇಳುವುದು. ಗೆದ್ದವರಿಗೆ ವಿಶೇಷ ಬಹುಮಾನ ನೀಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ ಎಂದು ಮುಖ್ಯಸ್ಥ ರಾಜೇಶ್ ರಾಜಘಟ್ಟ ಗುಡ್ ನ್ಯೂಸ್ ನೀಡಿದ್ದಾರೆ.
ಪ್ರಮುಖವಾಗಿ ಪ್ಯಾಕು ಪ್ಯಾಕು ಹಿತೇಶ್ ನಿರೂಪಣೆ ಕಿರುತೆರೆಯಲ್ಲಿ ಗುರುತಿಸಿಕೊಂಡ ಹಾಸ್ಯ ನಟ ಹಿತೇಶ್ ಇದೀಗ ನಿರೂಪಕನಾಗಿ ಎಂಟ್ರಿಕೊಡುತ್ತಿದ್ದಾರೆ. ನನ್ನನ್ನು ಹಾಸ್ಯ ನಟನಾಗಿ ಗುರುತಿಸಿದ್ದೀರಿ. ಇದೀಗ ಸಖತ್ ಜೋಡಿ ಎಂಬ ಸಖತ್ ಕಾರ್ಯಕ್ರಮವನ್ನು ನಾನು ಹಾಗೂ ಹೇಮಲತಾ ನಿರೂಪಣೆ ಮಾಡುತ್ತಿದ್ದೇವೆ. ಈಗಾಗಲೇ ಮೂರು ಎಪಿಸೋಡ್ ಚಿತ್ರೀಕರಣವಾಗಿದೆ. ಸದ್ಯ ಜೂನ್ 5 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 6 ಗಂಟೆಗೆ ಸಖತ್ ಜೋಡಿ ಪ್ರಸಾರವಾಗಲಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ ಎಂದು ಹಿತೇಶ್ ಹೇಳಿದ್ದಾರೆ.
ಇನ್ನು ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಹಾಗೂ ರಶ್ಮಿತಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಊರ್ಮಿಳಾ ಧಾರಾವಾಹಿ ಇದೇ ಜೂನ್ 5 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
ಇನ್ನು ರವಿ ಆರ್ ಗರಣಿ ಕಥೆ ಬರೆದಿರುವ ಬ್ರಾಹ್ಮಿನ್ಸ್ ಕೆಫೆ ವಿಭಿನ್ನ ಕಥಾಹಂದರ ಹೊಂದಿದ್ದು, ಜೂನ್ 5ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಶಿವು ಎಂಬ ಹೊಸಹುಡುಗ ಈ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸುತ್ತಿದ್ದಾನೆ. ಗಾಯತ್ರಿ ಸೆಲ್ವಂ ಹಾಗೂ ಸೆಲ್ವಂ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಸಂಜೀವ್ ತಗಡೂರು ತಿಳಿಸಿದರು.