Chandan-Niveditha: ಸಮುದ್ರದಾಳದಲ್ಲಿ ನಿವೇದಿತಾ-ಚಂದನ್ ಶೆಟ್ಟಿ ಕಿಸ್ಸಿಂಗ್ ; ವಿಡಿಯೋ ವೈರಲ್!

Niveditha and Chandan Shetty Kissing Photos

Chandan-Niveditha: ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ (biggboss) ಸ್ಪರ್ಧಿ ನಿವೇದಿತಾ ಗೌಡ (Niveditha Gowda) ಹಾಗೂ ಸಿಂಗರ್ ಚಂದನ್ ಶೆಟ್ಟಿ (Chandan shetty) ಮದುವೆ ಆದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದು, ಆಗಾಗ ಸುದ್ಧಿಯಲ್ಲಿರುತ್ತಾರೆ. ಅಂತೆಯೇ ಇದೀಗ ಮತ್ತೊಂದು ವಿಚಾರಕ್ಕೆ ಈ ಜೋಡಿ ಸಖತ್ ವೈರಲ್ ಆಗಿದೆ. ಹೌದು, ನಿವಿ-ಚಂದನ್ (Chandan-Niveditha) ಸಮುದ್ರದಾಳದಲ್ಲಿ ಲಿಪ್’ಕಿಸ್ ಮಾಡಿದ್ದು, ಸಖತ್ ಟ್ರೋಲ್ ಆಗಿದ್ದಾರೆ.

 

ನಿವೇದಿತಾ ಗೌಡ (niveditha gowda) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಹವಾ ಹೆಚ್ಚಿ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಚಂದನ್ ಶೆಟ್ಟಿ ಅವರ ಜೊತೆಗೆ ಹಸೆಮಣೆ ಏರಿ ಸುಖಿ ಜೀವನ ನಡೆಸುತ್ತಿರುವ ಈ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಒಂದಿಲ್ಲೊಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಪಾಸಿಟಿವ್-ನೆಗೆಟಿವ್ ಕಾಮೆಂಟ್ಸ್ ಇದ್ದೇ ಇರುತ್ತದೆ.

ಇದೀಗ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಂಡರ್ ವಾಟರ್ ನಲ್ಲಿ ಲಿಪ್’ಲಾಕ್ ಮಾಡಿರುವ ವಿಡಿಯೋ ನಿವಿ ಶೇರ್ ಮಾಡಿದ್ದಾರೆ. ಈ ಜೋಡಿ ಹಾರ್ಟ್ ಸಿಂಬಲ್ ತೋರಿಸಿ ಮುತ್ತಿಡುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿವಿಧ ಫೋಟೋಗಳನ್ನು ಶೇರ್ ಮಾಡಿದ್ದು , ಅದಕ್ಕೆ ತಕ್ಕಂತೆ ವಿವಿಧ ಕಾಮೆಂಟ್ ಗಳು ಬಂದಿವೆ.

ಕೆಲವರು “ಮೇಡ್‌ ಪಾರ್‌ ಈಚ್‌ ಅದರ್‌” ಎಂದು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಟ್ರೋಲ್ ಮಾಡಿದ್ದು,“ ಏನಾಗಿದೆ ಈ ಪಟ್ಟಣಕ್ಕೆ? ಬನ್ನಿ ತಜ್ಞರ ಅಭಿಪ್ರಾಯ ಪಡೆಯೋಣ” ,“ಈ ರೀತಿ ವರ್ತನೆ ಮನೆಯಲ್ಲಿರಲಿ, ಪಬ್ಲಿಕ್’ನಲ್ಲಿ ಅಲ್ಲ” ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಸದ್ಯ ನೆಗೆಟಿವ್ ಕಾಮೆಂಟ್’ಗೆ ತಲೆಕೆಡಿಸಿಕೊಳ್ಳದ ಈ ಜೋಡಿ ಸಿನಿಮಾ, ಸಿಂಗಿಂಗ್, ಶೋ ಗಳಲ್ಲಿ ಬ್ಯುಸಿಯಾಗಿದ್ದಾರೆ.

https://www.instagram.com/reel/Cs5-HEdrCgt/?igshid=NTc4MTIwNjQ2YQ==

 

ಇದನ್ನು ಓದಿ:  Dayanand police commissioner: “ಕಾಲ ಬದಲಾಗಿದೆ, ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಒಂದೇ” -ನೂತನ ಆಯುಕ್ತರು ಬಿ ದಯಾನಂದ್ 

Leave A Reply

Your email address will not be published.