Dakshina Kannada: SDM ಹಳೆ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಯುವ ವಾಲಿಬಾಲ್ ಆಟಗಾರ್ತಿ ಹೃದಯಾಘಾತಕ್ಕೆ ಬಲಿ!

Dakshina Kannada SDM alumini death due to heart attack

Dakshina Kannada: SDM ಹಳೆ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಯುವ ವಾಲಿಬಾಲ್ ಆಟಗಾರ್ತಿ ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಮೃತ ಯುವತಿಯನ್ನು ಸಾಲಿಯತ್ (24) ಎಂದು ಹೇಳಲಾಗಿದೆ. ಹೃದಯಾಘಾತದಿಂದ ಅತಿ ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

ಮೃತ ಯುವತಿ ಪಡಂಗಡಿ (Dakshina Kannada) ಪೊಯ್ಕೆಗುಡ್ಡೆ ನಿವಾಸಿಯಾಗಿದ್ದು, ಈಕೆ ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿ ಎನ್ನಲಾಗಿದೆ. ಸಾಲಿಯತ್ ವಿವಾಹವಾಗಿ ಒಂದು ವರ್ಷವಾಗಿದ್ದು, ಕಳೆದ ದಿನಗಳಲ್ಲಿ ಈಕೆಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮೆ.31 (ಇಂದು) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಈಕೆ ಪಡಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದು ನಂತರ 9 ತರಗತಿವರೆಗೆ ಎಸ್.ಡಿ.ಎಂ. ಅನುದಾನಿತ ಪ್ರೌಢ ಶಾಲೆ ಉಜಿರೆಯಲ್ಲಿ ಓದಿದರು. 10 ನೇ ತರಗತಿ ಶಿಕ್ಷಣವನ್ನು ಮುಂಡಾಜೆಯಲ್ಲಿ ಪೂರ್ಣಗೊಳಿಸಿದರು. ಮತ್ತೆ ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನ ಶಿಕ್ಷಣದ ವೇಳೆ ಈಕೆ ಕ್ರೀಡಾ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆ ಮಾಡಿದ್ದಾರೆ. ಈಕೆಯ ಸಾಧನೆಗೆ ಉಜಿರೆ ಎಸ್.ಡಿ.ಎಂ. ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಅವರು ಬೆನ್ನೆಲುಬಾಗಿದ್ದರು. ತರಬೇತುದಾರರಾಗಿ ಈಕೆಯ ಸಾಧನೆಗೆ ಅಪಾರ ಶ್ರಮ ವಹಿಸಿದ್ದಾರೆ. ಮೃತ‌ ಯುವತಿ ರಾಷ್ಟ್ರದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಶಂಸಿ ಗೌರವಿಸಿದ್ದರು.

ಕ್ರೀಡೆಯ ತರಬೇತಿಯನ್ನು ಹಲವರಿಂದ ಪಡೆದ ಇವರು ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿಯನ್ನು ಪಡೆದರು. ನಂತರ ಮುಂಡಾಜೆಯ ಶಿಕ್ಷಣದ ವೇಳೆ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್. ಅವರ ಸಾರಥ್ಯದಲ್ಲಿ ಕ್ರೀಡೆ ಕಲಿತರು. ಇವೆಲ್ಲದರ ಫಲವಾಗಿ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನ ತಂದು ಯಶಸ್ವಿ ಕ್ರೀಡಾಪಟುವಾಗಿ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: Akanksha Dubey Death Case: ನಟಿ ಆಕಾಂಕ್ಷ ಸಾವು ಪ್ರಕರಣ, ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ! ಚುರುಕುಗೊಂಡ ತನಿಖೆ!

Leave A Reply

Your email address will not be published.