Bangalore City Police Commissioner: ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಬಿ ದಯಾನಂದ ನೇಮಕ

Bangalore City Police Commissioner Appointed as B. Dayananda

Bangalore City Police Commissioner: ಬೆಂಗಳೂರು : ನಗರದ ಪೊಲೀಸ್ ಕಮಿಷನರ್ (Bangalore City Police Commissioner) ಆಗಿ ಬಿ ದಯಾನಂದ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂದು ಸಂಜೆ ಬಿ ದಯಾನಂದ ಅವರಿಗೆ ಪ್ರತಾಪ್‌ ರೆಡ್ಡಿ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

 

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರದ ಬಿ ದಯಾನಂದ ಅವರು ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕನ್ನಡಿಗ ದಯಾನಂದ ಅವರಿಗೆ ಬೆಂಗಳೂರು ಕಮಿಷನರ್ ಹುದ್ದೆ ನೇಮಕ ಮಾಡಲಾಗಿದೆ.
ಇನ್ನೂ ಬೆಂಗಳೂರು ನಗರದ ‘ವಿಶೇಷ ಕಮಿಷನರ್’ (ಸಂಚಾರ) ಎಂಎ ಸಲೀಂ ಅವರನ್ನು ಸಿಐಡಿ ಡಿಜಿಯಾಗಿ ವರ್ಗಾವಣೆ ಮಾಡಿದ್ದು, ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

 

ಇದನ್ನು ಓದಿ: Right to Education: ಇನ್ನು ಫೀಸ್ ಕಟ್ಟದೆ ಇದ್ರೂ ಸ್ಕೂಲ್ ಗೆ ಹೋಗಲು ಅಡ್ಡಿಯಿಲ್ಲ, ಸಚಿವ ಮಹಾದೇವಪ್ಪ ಹೇಳಿಕೆ ! 

Leave A Reply

Your email address will not be published.