ESIC Recruitment 2023: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗವಕಾಶ ; ನೇರ ಸಂದರ್ಶನ- ಕೂಡಲೇ ಅರ್ಜಿ ಸಲ್ಲಿಸಿ!!

ESIC recruitment 2023 apply for 136 posts

ESIC Recruitment 2023: ಇಂದಿನ ದಿನದಲ್ಲಿ ಕೆಲಸ (Job) ಸಿಗೋದು ತುಂಬಾನೆ ಕಷ್ಟ. ವಿದ್ಯಾವಂತರೇ ಕೆಲಸಕ್ಕಾಗಿ (Job vacancy) ಪರದಾಡುತ್ತಿದ್ದಾರೆ. ಇನ್ನು ಕೆಲಸ ಸಿಕ್ಕಿದರೂ ಬಯಸಿದ ಕೆಲಸ ಸಿಗೋದಿಲ್ಲ. ಬಯಸಿರುವ ಕೆಲಸ ಸಿಗೋದಕ್ಕೆ ಶತಪ್ರಯತ್ನವೇ ಬೇಕು ಎಂದರೆ ತಪ್ಪಾಗಲಾರದು. ಸದ್ಯ ನಿರುದ್ಯೋಗಿಗಳಿಗೆ ಸಿಹಿಸುದ್ದಿ ಇಲ್ಲಿದೆ.

 

ತೆಲಂಗಾಣ ಕಾರ್ಮಿಕರ ರಾಜ್ಯ ವಿಮಾ ನಿಗಮ ಘಟಕವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (ESIC Recruitment 2023). ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:

ಸೀನಿಯರ್ ರೆಸಿಡೆಂಟ್ ಮತ್ತು ಟ್ಯೂಟರ್ – 47

ಪ್ರೊಫೆಸರ್ -14

ಅಸೋಸಿಯೇಟ್‌ ಪ್ರೊಫೆಸರ್ – 37

ಅಸಿಸ್ಟಂಟ್ ಪ್ರೊಫೆಸರ್ ಮತ್ತು ಸ್ಟಾಟಿಸ್ಟೀಷಿಯನ್ -34

ಪಾರ್ಟ್‌ಟೈಮ್ ಸೂಪರ್ ಸ್ಪೆಷಲಿಸ್ಟ್‌ (ನಾನ್‌ ಟೀಚಿಂಗ್) -04

ವಿದ್ಯಾರ್ಹತೆ: ಎಂಬಿಬಿಎಸ್, ಡಿಎಂ, ಎಂಸಿಹೆಚ್, ಪಿಜಿ.

ವಯೋಮಿತಿ: ಗರಿಷ್ಟ 69 ವರ್ಷ.

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ : 16-05-2023

ನೇರ ಸಂದರ್ಶನ ದಿನಾಂಕ : 31-05-2023 ರಿಂದ 03-06-2023

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಹಾಜರಾಗುವಾಗ ಆಧಾರ್ ಕಾರ್ಡ್‌, ಅಂಕಪಟ್ಟಿ ಮತ್ತು ಕಾರ್ಯಾನುಭವದ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.

ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಲು ರೂ.500 ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಇನ್ನು ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್‌ ಮೂಲಕ ಪಾವತಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕರ ರಾಜ್ಯ ವಿಮಾ ನಿಗಮ ಅಧಿಕೃತ ವೆಬ್‌ಸೈಟ್‌ https://www.esic.gov.in/ ಗೆ ಭೇಟಿ ನೀಡಿ.

ಇದನ್ನೂ ಓದಿ: DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳ, ಕಡತ ಸಲ್ಲಿಕೆಯ 24 ಗಂಟೆಯೊಳಗೆ ಸಹಿ ಮಾಡಿದ ಸಿದ್ದರಾಮಯ್ಯ: ಸರ್ಕಾರಿ ನೌಕರರ ಸಂಘ ಅಭಿನಂದನೆ!!

Leave A Reply

Your email address will not be published.