Primary-secondary Schools Opening: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸೋಮವಾರದಿಂದಲೇ ಪ್ರಾರಂಭ, ಆದರೂ ಗೊಂದಲದಲ್ಲಿ ಪೋಷಕರು ಮತ್ತು ಶಿಕ್ಷಕರು !
Primary and secondary schools opening date
Primary-secondary Schools Opening : ಇನ್ನೇನು ರಜಾ ದಿನಗಳು ಮುಗಿಯುತ್ತ ಬಂದಿವೆ. ಅಜ್ಜಿ ಮನೆಗೆ ಆಟಕ್ಕೆ ಮರಳಿದ ಮಕ್ಕಳು ಈಗ ಮನ್ ತಮ್ಮ ತಮ್ಮ ಮನೆಯ ಕಡೆಗೆ ಹೊರಳುವ ಸಮಯ. ಈಗಾಗಲೇ ವರದಿಯಾದಂತೆ ಬರುವ ಸೋಮವಾರದಂದು ಒಂದರಿಂದ ಹತ್ತನೆಯ ತರಗತಿಯವರೆಗೆ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿಗಳು ಆರಂಭವಾಗಲಿವೆ(Primary-secondary Schools Opening). ಸುದ್ದಿ ಮಾಧ್ಯಮಗಳು ಈ ರೀತಿ ವರದಿ ಮಾಡಿದ್ದರು ಈವರೆಗೆ ಶಿಕ್ಷಣ ಇಲಾಖೆ ಖಚಿತವಾಗಿ ಶಾಲಾ ದಿನಾಂಕವನ್ನು ಪ್ರಕಟಿಸಿಲ್ಲ.
ಶಾಲಾ ಶುರುವಾಗುವ ದಿನಾಂಕದಲ್ಲಿ ಪೋಷಕರಾ ಜೊತೆಗೆ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳಿಗೂ ಗೊಂದಲಗಳಿವೆ. ಜೂನ್ ಒಂದನೆಯ ತಾರೀಕು ಶಾಲೆ ಸ್ಟಾರ್ಟ್ ಆಗುತ್ತೆ ಅನ್ನುವುದು ಕೇವಲ ಅವರ ಅನಿಸಿಕೆ ಮತ್ತೆ ಕೆಲವರು ನೀರಿನ ಅಭಾವದ ಕಾರಣ ಮಳೆಗಾಲ ಶುರುವಾಗುವ ಸಮಯದಲ್ಲಿ ಅಂದರೆ ಜೂನ್ 5ರ ಸುಮಾರಿಗೆ ಶುರುವಾಗಬಹುದು ಎನ್ನುತ್ತಿದ್ದಾರೆ. ಆದರೆ ಇಂದು ವರದಿಯಾದಂತೆ ಬರುವ ಸೋಮವಾರದಿಂದಲೇ ಒಂದರಿಂದ 10ನೇ ತರಗತಿಗಳು ಆರಂಭವಾಗಲಿವೆ.
ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ಈಗಾಗಲೇ ಶಾಲೆಗಳಿಗೆ ಭೇಟಿ ನೀಡಿದ್ದು ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಈಚೆಗೆ ಅಗತ್ಯ ಸಾಮಗ್ರಿ ಪೂರೈಕೆ ವಿಷಯದಲ್ಲಿ ಹೈಕೋರ್ಟಿನಿಂದ ಚೀಮಾರಿ ಹಾಕಿಸಿಕೊಂಡಿದ್ದ ಶಿಕ್ಷಣ ಇಲಾಖೆ ಈ ಬಾರಿ ಅದಕ್ಕೆ ಅವಕಾಶ ನೀಡಲು ನೀಡಬಾರದೆಂದು ತಯಾರಿ ನಡೆಸಿದೆ. ಆದರೆ ಕೆಲವು ನಿರ್ಧಾರಗಳು ಸರಕಾರದ ಮಟ್ಟದಿಂದ ಆಗಬೇಕಾಗಿದೆ. ಇದೀಗ ತಾನೇ ಸರಕಾರ ಬದಲಾಗಿ ಹೊಸ ಶಿಕ್ಷಣ ಮಂತ್ರಿಗಳು ಅಧಿಕಾರ ವಹಿಸಿಕೊಳ್ಳುವ ಕಾರಣ ಒಂದಷ್ಟು ಗೊಂದಲ ಉಂಟಾಗುತ್ತಿದೆ.
ಸುಮಾರು 6.3 ಕೋಟಿ ಪಠ್ಯ ಪುಸ್ತಕಗಳನ್ನು ಈಗಾಗಲೇ ವಿತರಿಸಲಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿ ಪಠ್ಯ ಪುಸ್ತಕ ಮುದ್ರಿಸಿ ಈಗ ವಿತರಣಾ ಹಂತದಲ್ಲಿರುವ ಪಠ್ಯಪುಸ್ತಕಗಳು ಮತ್ತೆ.ಮರು ಮುದ್ರಣಗೊಂಡರೆ ಮತ್ತೆ ಖಜಾನೆಗೆ ದೊಡ್ಡ ಮಟ್ಟದ ಕತ್ತರಿ ಬೀಳುವುದು ಖಚಿತ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದಿದ್ದರು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಹಾಗಾಗಿ ಈ ಮುಂಬರುವ ಪರಿಷ್ಕರಣೆ ಪರಿಣಾಮ ಏನು ? ಇದೇ ಶೈಕ್ಷಣಿಕ ವರ್ಷದಲ್ಲಿ ಪರಿಷ್ಕೃತ ಪಠ್ಯ ವಿದ್ಯಾರ್ಥಿಗಳನ್ನು ತಲುಪುತ್ತಾ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಈಗಾಗಲೇ ಐದು ಗ್ಯಾರಂಟಿಗಳನ್ನು ಜನರಿಗೆ ನೀಡಲು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಬೇಕಾದ ಕಾಂಗ್ರೆಸ್ ಸರ್ಕಾರ ಮತ್ತೊಂದು ಬಾರಿ ಪಠ್ಯಪುಸ್ತಕ ಪರಿಷ್ಕರಣೆ, ಅದೂ ಇದೇ ವರ್ಷದಲ್ಲಿ ಮಾಡಲು ಹೊರಡುವುದು ಅನುಮಾನ ಎನ್ನಲಾಗುತ್ತಿದೆ.
ಶಾಲೆ ಶುರುವಾಗುವ ಮೊದಲ ದಿನವೇ ಒಂದು ಜತೆ ಸಮವಸ್ತ್ರವನ್ನು ಮಕ್ಕಳಿಗೆ ನೀಡುವ ಸಂಕಲ್ಪ ಮಾಡಲಾಗಿದೆ. ಮತ್ತೊಂದು ಜತೆ ಸಮವಸ್ತ್ರ ವನ್ನು ಆಗಸ್ಟ್ ವೇಳೆಗೆ ನೀಡುವ ಚಿಂತನೆ ಇದೆ. 1ರಿಂದ 7ನೇ ತರಗತಿಯ ಬಾಲಕರಿಗೆ ಚಡ್ಡಿ ಹಾಫ್ ಪ್ಯಾಂಟ್ – ಶರ್ಟ್, ಬಾಲಕಿಯರಿಗೆ ಸ್ಕರ್ಟ್- ಶರ್ಟ್, 8ರಿಂದ 10ನೇ ತರಗತಿ ಬಾಲಕರಿಗೆ ಪ್ಯಾಂಟ್ -ಶರ್ಟ್, ಬಾಲಕಿಯರಿಗೆ ಚೂಡಿದಾರ್ ಬಟ್ಟೆ ಸಿಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: BBMP: ಪೌರಕಾರ್ಮಿಕರಿಗೆ ಸಿಹಿಸುದ್ದಿ ; ಸಿಗಲಿದೆ ಜೂ.1 ರಿಂದ 1500 ರೂ. ತಿಂಡಿ ಭತ್ಯೆ!