ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮೇ. 23 ರಿಂದ: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

Second PUC Supplementary Exam From may 23rd

Second PUC Supplementary Exam: ಮೇ, ಜೂನ್ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ದಿನಾಂಕ 22-05-2023ರಿಂದ 02-06-2023ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ (Second PUC Supplementary Exam) ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಈಗಾಗಲೇ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದರು.

ಆದರೆ ಸಿಇಟಿ ಮೂಲಕ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 22-05-202ರಂದು ನಡೆಸುತ್ತಿರುವುದರಿಂದ, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿ ದಿನಾಂಕ 23-05-2023ರಿಂದ 03-06-2023ರವರೆಗೆ ನಡೆಸಲು ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಷ್ಕೃತ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ;

ದಿನಾಂಕ 23-05-2023, ಮಂಗಳವಾರ – ಕನ್ನಡ, ಅರೇಬಿಕ್
ದಿನಾಂಕ 24-05-2023, ಬುಧವಾರ ಲ- ಐಚ್ಛಿಕ ಕನ್ನಡ, ರಾಸಾಯನಶಾಸ್ತ್ರ, ಮೂಲ ಗಣಿತ
ದಿನಾಂಕ 25-05-2023, ಗುರುವಾರ – ಇಂಗ್ಲೀಷ್
ದಿನಾಂಕ 26-05-2023, ಶುಕ್ರವಾರ – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ದಿನಾಂಕ 27-05-2023, ಶನಿವಾರ – ಇತಿಹಾಸ, ಸಂಖ್ಯಾಶಾಸ್ತ್ರ
ದಿನಾಂಕ 29-05-2023, ಸೋಮವಾರ – ಹಿಂದಿ
ದಿನಾಂಕ 30-05-2023, ಮಂಗಳವಾರ – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
ದಿನಾಂಕ 31-05-2023, ಬುಧವಾರ – ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
ದಿನಾಂಕ 01-06-2023, ಗುರುವಾರ – ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ
ದಿನಾಂಕ 02-06-2023, ಶುಕ್ರವಾರ – ತರ್ಕ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ
ದಿನಾಂಕ 03-06-2023, ಶನಿವಾರ – ಅರ್ಥಶಾಸ್ತ್ರ, ಜೀವಶಾಸ್ತ್ರ

ಇದನ್ನೂ ಓದಿ:Congress 5 Guarantee: ದಾರಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡಲಾಗುತ್ತ – ಡಿಕೆಶಿ ಪ್ರಶ್ನೆ | ದಾರೀಲಿ ಹೋಗುವವರು ಕನ್ನಡಿಗರಲ್ಲವೇ -ಬಿಜೆಪಿ ಪ್ರತಿ ಪ್ರಶ್ನೆ !

Leave A Reply

Your email address will not be published.