RBI: ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ! ಬದಲಾಗಲಿದೆ ಜೂನ್.1 ರಿಂದ ಈ ಎಲ್ಲಾ ನಿಯಮ!!!

RBI Bank New rules from June 1

RBI: ಬ್ಯಾಂಕ್ (bank) ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಜೂನ್ 1 ರಿಂದ ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ ಬೃಹತ್ ಬದಲಾವಣೆ ಆಗಲಿದೆ. ಈ ಬದಲಾವಣೆಯು ಕ್ಲೈಮ್ ಮಾಡದ ಠೇವಣಿಗಳಿಗೆ ಸಂಬಂಧಿಸಿದೆ. 100 ದಿನಗಳ ಒಳಗೆ ಬ್ಯಾಂಕುಗಳು ಈ ಠೇವಣಿಗಳನ್ನು ಇತ್ಯರ್ಥಪಡಿಸಬೇಕು.

 

ಇತ್ತೀಚೆಗೆ ಆರ್.ಬಿ.ಐ ,(RBI) ಹಲವು ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಠೇವಣಿಗಳನ್ನು ಪತ್ತೆ ಮಾಡಲು ವೆಬ್ ಪೋರ್ಟಲ್ ಅನ್ನು ರಚಿಸಿದೆ. ಆರ್.ಬಿ.ಐ ಈ ಹಕ್ಕು ಪಡೆಯದ ಠೇವಣಿಗಳನ್ನು ಕಂಡುಹಿಡಿಯಲು ‘100 ದಿನ್ 100 ಪೇ’ ಅಭಿಯಾನವನ್ನು ನಡೆಸುವ ಬಗ್ಗೆ ಘೋಷಣೆ‌ ಮಾಡಿತು. ಇದರ ಅಡಿಯಲ್ಲಿ, ದೇಶದ ಪ್ರತಿ ಜಿಲ್ಲೆಯ ಪ್ರತಿಯೊಂದೂ ಬ್ಯಾಂಕ್ 100 ಕ್ಲೈಮ್ ಮಾಡದ ಠೇವಣಿಗಳನ್ನು 100 ದಿನಗಳಲ್ಲಿ ಪಾವತಿಸಬೇಕಾಗುತ್ತದೆ.

ಜೂನ್ 1, 2023 ರಿಂದ ಈ ಅಭಿಯಾನವನ್ನು ಪ್ರಾರಂಭಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಮೊತ್ತವನ್ನು ಬ್ಯಾಂಕುಗಳು RBI ಅಡಿಯಲ್ಲಿ ರಚಿಸಲಾದ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ಕಳುಹಿಸುತ್ತದೆ. ಇಂತಹ ಕ್ಲೈಮ್ ಮಾಡದ ಠೇವಣಿಗಳನ್ನು ಕ್ಲೈಮ್ ಮಾಡಲು ಸಂಬಂಧಿಸಿದ ಬ್ಯಾಂಕ್‌ಗಳನ್ನು ಗುರುತಿಸಲು ಮತ್ತು ಸಂಪರ್ಕಿಸಲು ಆರ್‌ಬಿಐ ಜಾಗೃತಿ ಅಭಿಯಾನಗಳ ಮೂಲಕ ಸಂಪರ್ಕಿಸುತ್ತಿದೆ.

ಇದನ್ನೂ ಓದಿ:Karnataka budget : ಜುಲೈನಲ್ಲಿ ರಾಜ್ಯದ ಹೊಸ ಬಜೆಟ್ ಮಂಡನೆ: ನೂತನ ಸಿಎಂ ಸಿದ್ದರಾಮಯ್ಯ ಘೋಷಣೆ

Leave A Reply

Your email address will not be published.