SBI Customers Alert: ‘ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ’ ಎಂಬ ಸಂದೇಶ ನಿಮಗೂ ಬಂದಿದೆಯಾ? ಹಾಗಾದ್ರೆ ಎಚ್ಚರ!! ಸೈಬರ್ ವಂಚನೆಯ ಸಂದೇಶಕ್ಕೆ ಏನು ಮಾಡಬೇಕು?
SBI Customers alert what to do if you get scam message
SBI Customers Alert: ಇತ್ತೀಚೆಗೆ ಸೈಬರ್ ವಂಚನೆಯ (Cyber Crime) ಪ್ರಕರಣಗಳು ಹೆಚ್ಚಾಗಿವೆ. ವಂಚಕರು ಎಲ್ಲಾ ರೀತಿಯಲ್ಲೂ ಹಣ ಕಬಳಿಸಲು ಸಂಚು ಹೂಡುತ್ತಿದ್ದಾರೆ. ಅದಕ್ಕೆಂದೇ ಸೋಷಿಯಲ್ ಮೀಡಿಯಾವನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿವಿಧ ರೀತಿಯಲ್ಲಿ ಜನರಿಗೆ ಮೋಸಮಾಡಿ, ಹಣ (money) ಕಬಳಿಸುತ್ತಿದ್ದಾರೆ. ಇನ್ನು ಬ್ಯಾಂಕ್ (bank) ಹೆಸರಿನಲ್ಲಿ ವಂಚಿಸುವವರ ಸಂಖ್ಯೆಯೇನು ಕಮ್ಮಿಯಿಲ್ಲ. ಹ್ಯಾಕರ್ ಗಳು ಜನಸಾಮಾನ್ಯರಿಂದ ಹಣ ದೋಚಲು ಫಿಶಿಂಗ್ ಎಸ್ಎಮ್ಎಸ್ (sms) ಮಾಡುತ್ತಾರೆ. ಈ ರೀತಿ ಜನರನ್ನು ವಂಚಿಸಿ, ಅವರ ಖಾತೆಯಿಂದ ಲಕ್ಷಾಂತರ ಹಣ ಖಾಲಿ ಮಾಡುತ್ತಾರೆ.
ಸದ್ಯ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ನಕಲಿ ಮೆಸೇಜ್’ಗಳು ಬರುತ್ತಿವೆ. ‘ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ.’ ಎಂಬ ಸಂದೇಶ ನಿಮಗೂ ಬರುತ್ತಿದ್ದರೆ ಎಚ್ಚರವಾಗಿರಿ. ಹೌದು, ಈ ಸಂದೇಶ ಎಸ್‌ಬಿಐ (SBI) ಗ್ರಾಹಕರಿಗೆ ಬರುತ್ತಿದೆ (SBI Customers Alert). ಇದು ನಿಜವಲ್ಲ ಸುಳ್ಳು ಸಂದೇಶ. ನಿಮ್ಮ ಖಾತೆಯಿಂದ ಹಣ ಕಬಳಿಸಲು ವಂಚಕರ ಪ್ರಯತ್ನ (.
“ಸಂಶಯಾಸ್ಪದ ಚಟುವಟಿಕೆಯಿಂದಾಗಿ ಸ್ವೀಕರಿಸುವವರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ ಎಂದು ಎಸ್‌ಬಿಐ ಹೆಸರಿನಲ್ಲಿ ನಕಲಿ ಸಂದೇಶವು ಹೇಳುತ್ತದೆ. ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಲು ಕೇಳುವ ಇಮೇಲ್‌ಗಳು/SMS ಗೆ ಎಂದಿಗೂ ಪ್ರತಿಕ್ರಿಯಿಸಬೇಡಿ. ಅಂತಹ ಸಂದೇಶಗಳನ್ನು ತಕ್ಷಣವೇ report.phishing@sbi.co.in ನಲ್ಲಿ ವರದಿ ಮಾಡಿ” ಎಂದು PIB ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ.
ಒಂದು ವೇಳೆ ನೀವು ನಕಲಿ ಲಿಂಕ್ ಗೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆಯ ಹಣ ಖಾಲಿಯಾಗುತ್ತದೆ. ನಿಮ್ಮ ಬ್ಯಾಂಕ್ ವಿವರಗಳು ವಂಚಕರ ಪಾಲಾಗುತ್ತದೆ. ನೀವು ಅಂತಹ ನಕಲಿ ಸಂದೇಶವನ್ನು ಸ್ವೀಕರಿಸಿದರೆ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಲು ಕೇಳುವ ಯಾವುದೇ ಇಮೇಲ್/SMS/Whatsapp ಗೆ ಎಂದಿಗೂ ಪ್ರತಿಕ್ರಿಯಿಸಬೇಡಿ. ಹಾಗೂ ಇಂತಹ ಸಂದೇಶಗಳನ್ನು ತಕ್ಷಣವೇ report.phishing@sbi.co.in ನಲ್ಲಿ ವರದಿ ಮಾಡಿ. ಅಥವಾ ನೀವು 1930 ಗೆ ಕರೆ ಮಾಡಬಹುದು.