ಕೋಟ್ಯಂತರ ರೂಪಾಯಿಗಳ SBI ಗೃಹ ಸಾಲ ಮನ್ನಾ !
SBI Home Loan waiver
SBI Home Loan: SBI ಬ್ಯಾಂಕ್ ದೇಶದ ಅತಿದೊಡ್ಡ ಬ್ಯಾಂಕ್ ಆಗಿದ್ದು ಈ ಬ್ಯಾಂಕ್ ಜನರಿಗೆ ಹಲವಾರು ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಎಲ್ಲಾ ಬ್ಯಾಂಕಿನಗಳಂತೆಯೇ ಆದಾಯದ ಮುಖ್ಯ ಮೂಲವೆಂದರೆ ಸಾಲ. ಈಗ ಕೋಟ್ಯಂತರ ರೂಪಾಯಿಗಳ SBI ಬ್ಯಾಂಕಿನ ಗೃಹಸಾಲ (SBI Home Loan) ಮನ್ನಾ ಆಗಿರುವ ಸುದ್ದಿ ಬಂದಿದೆ.
ಬ್ಯಾಂಕುಗಳು ಕಡಿಮೆ ಬಡ್ಡಿಗೆ ಠೇವಣಿಗಳನ್ನ ಸ್ವೀಕರಿಸಿ ಹೆಚ್ಚಿನ ಬಡ್ಡಿಗೆ ಗ್ರಾಹಕರಿಗೆ ನೀಡುತ್ತವೆ. ಸಾಲದ ಬಡ್ಡಿ ದರ ಹೆಚ್ಚಾಗಿದ್ದು ಠೇವಣಿಗಳ ಬಡ್ಡಿದರವು ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಈ ಎರಡು ಬಡ್ಡಿ ದರಗಳ ವ್ಯತ್ಯಾಸದ ಮೇಲೆ ಎಲ್ಲಾ ಬ್ಯಾಂಕುಗಳು ಮತ್ತು ಕಾರ್ಯ ನಿರ್ವಹಿಸುತ್ತಿರುವುದು. 1% ನಿಂದ 5 % ವರೆಗಿನ ಈ ವ್ಯತ್ಯಾಸ ಬ್ಯಾಂಕುಗಳು ನೀಡುವ ದೊಡ್ಡ ಮೊತ್ತಕ್ಕೆ ಕೋಟ್ಯಾಂತರ ಬಡ್ಡಿಯನ್ನು ಸಂಗ್ರಹಿಸುತ್ತವೆ. ಅದೇ ದುಡ್ಡಿನಲ್ಲಿ ಬ್ಯಾಂಕ್ ನೌಕರರ ಫ್ಯಾಟ್ ಅನ್ನಿಸುವ ದೊಡ್ಡ ಸಂಬಳ.ಮತ್ತು ಖರ್ಚುಗಳು ಹೋಗಿ ಕೂಡಾ ಇನ್ನಷ್ಟು ಹಣ ಮಿಗುತ್ತದೆ.
ಆದರೆ ಪ್ರತಿ ಬಾರಿ ಕೂಡ ಬಡ್ಡಿ ಮತ್ತು ಅಸಲು ಸಲೀಸಾಗಿ ವಸೂಲಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಸಾಲ ಪಡೆದವರ ಆರ್ಥಿಕ ಸ್ಥಿತಿ ಮತ್ತು ಆರ್ಥಿಕ ಶಿಸ್ತು ಆಧಾರದ ಮೇಲೆ ಎಷ್ಟೋ ಬಾರಿ ಸಾಲ ಮರು ಪಾವತಿಯಾಗದೆ ಹೋಗುತ್ತದೆ.
ಕಳೆದ ಹಣಕಾಸು ವರ್ಷ 2018-19 ರಿಂದ 2022-23 ರವರೆಗೆ ಎಸ್ ಬಿ ಐ ನಲ್ಲಿ ಸುಮಾರು 1,13,603 ಜನರು ತಮ್ಮ ಇಎಂಐ ಅನ್ನು ಸರಿಯಾಗಿ ಪಾವತಿಸಿಲ್ಲ ಎಂದು.ತಿಳಿದುಬಂದಿದೆ. ಬ್ಯಾಂಕ್ ಭಾಷೆಯಲ್ಲಿ 1,13,603 ಮಂದಿ ಡೀಫಾಲ್ಟರ್ ಆಗಿದ್ದಾರೆ. SBI ಒಂದಕ್ಕೇನೆ ಬಾಕಿ ಬರಬೇಕಾದ ಒಟ್ಟು ಮೌಲ್ಯ ಒಟ್ಟು ರೂ. 7655 ಕೋಟಿ. ಇದಕ್ಕೆ ಹಲವು ಕಾರಣಗಳು, ಕೊರೋನಾ ಕೂಡಾ.ಒಂದು ದೊಡ್ದ ಕಾರಣ ಎನ್ನಬಹುದು.
ಗೃಹಸಾಲ ಮನ್ನಾ ಮಾಡಿದ SBI
ಮೇಲಿನ ಅವಧಿಯಲ್ಲಿ ಸುಮಾರು 2,178 ಕೋಟಿ ಮೌಲ್ಯದ 45,168 ಗೃಹ ಸಾಲ ಖಾತೆಗಳನ್ನ ವಜಾ ಮಾಡಿದೆ. ಈ ವಿಚಾರವು ಆರ್ ಟಿ ಐ ಅರ್ಜಿಯಲ್ಲಿ ಬಹಿರಂಗವಾಗಿದೆ. ಆರ್‌ಟಿಐ ಕಾರ್ಯಕರ್ತರಾಗಿರುವ ಚಂದ್ರಶೇಖರ್ ಗೌರ್
RTI ಪ್ರಕಾರ, ಸ್ಟೇಟ್ ಬ್ಯಾಂಕ್ 2018-19ರಲ್ಲಿ 237 ಕೋಟಿ ಸಾಲ ಮನ್ನಾ ಮಾಡಿದೆ. 2019-20 ರಲ್ಲಿ 192 ಕೋಟಿ, 2020-21 ರಲ್ಲಿ 410 ಕೋಟಿ, 2021-22 ರಲ್ಲಿ 642 ಕೋಟಿ ಮತ್ತು 2022-23 ರಲ್ಲಿ 697 ಕೋಟಿ ಗೃಹ ಸಾಲ ಮನ್ನಾ ಮಾಡಿದೆ. ಆದರೆ ಈ ಮನ್ನಾ ಬ್ಯಾಂಕಿನ ಐಚ್ಚಿಕ ಮನ್ನಾ ಆಗಿರದೆ, ರೈಟ್ ಆಫ್ ಆಗಿದೆ. ಒಟ್ಟಾರೆ ಗೃಹ ಸಾಲದ ಖರೀದಿದಾರರು ಖುಷಿಯಾಗಿದ್ದಾರೆ.