Home Breaking Entertainment News Kannada Fathima Babu: ಯಾವ ಕಾಂಡೋಮ್ ಬಳಸ್ತೇನೆ ಅಂತಾನೂ ಕೇಳ್ತೀರಾ? ನಟಿ ಫಾತಿಮಾ ಬಾಬುಗೆ ಕೇಳಿದ...

Fathima Babu: ಯಾವ ಕಾಂಡೋಮ್ ಬಳಸ್ತೇನೆ ಅಂತಾನೂ ಕೇಳ್ತೀರಾ? ನಟಿ ಫಾತಿಮಾ ಬಾಬುಗೆ ಕೇಳಿದ ಪ್ರಶ್ನೆಗೆ ತಿರುಗೇಟು!

Fathima Babu
Image source: Tamil movies

Hindu neighbor gifts plot of land

Hindu neighbour gifts land to Muslim journalist

Fathima Babu: ಫಾತಿಮಾ ಬಾಬು (Fathima Babu) ದಕ್ಷಿಣ ಭಾರತದ ನಟಿಯಾಗಿದ್ದು, ಅವರು ಪ್ರಧಾನವಾಗಿ ತಮಿಳು, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ. ಫಾತಿಮಾ ಬಾಬು ಅವರು ಮಲಯಾಳಂ ಮುಸ್ಲಿಂ ಕುಟುಂಬದಲ್ಲಿ ಪುದುಚೇರಿಯಲ್ಲಿ ಜನಿಸಿದರು. ನಟಿಯಾಗುವ ಮೊದಲು, ಫಾತಿಮಾ ಬಾಬು ದೂರದರ್ಶನದ ತಮಿಳು ಆವೃತ್ತಿಯಾದ ಡಿಡಿ ಪೊಧಿಗೈಗೆ ಸುದ್ದಿ ವಾಚಕರಾಗಿದ್ದರು. ಅವರು ತಮಿಳು ಚಲನಚಿತ್ರ, ಕಲ್ಕಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಆ ನಂತರ ಹಲವು ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಆ ನಂತರ ಫಾತಿಮಾ, ಬಾಬು ಅವರನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

ಇದೀಗ ಪರ್ಸನಲ್ ಲೈಫ್ ಬಗ್ಗೆ ಪ್ರಶ್ನೆ ಕೇಳಿದ ಅಭಿಮಾನಿಗೆ ಮಾಜಿ ಸುದ್ದಿ ನಿರೂಪಕಿ ಮತ್ತು ನಟಿ ಫಾತಿಮಾ ಬಾಬು ಮುಟ್ಟಿ ನೋಡುವಂತೆ ಉತ್ತರ ಕೊಟ್ಟಿದ್ದಾರೆ. ಹೌದು, ನಟಿ ಫಾತಿಮಾ ಬಾಬು ಸಾಮಾಜಿಕ ಜಾಲತಾಣದಲ್ಲಿ ಕೆಣಕುವವರನ್ನು ಸುಮ್ಮನೇ ಬಿಡುವುದಿಲ್ಲ. ನೇರವಾಗಿ ತಿರುಗೇಟಿನ ಉತ್ತರವನ್ನು ಕೊಡುತ್ತಾರೆ. ಇತ್ತೀಚೆಗೆ ಅವರ ಫೇಸ್ ಪುಕ್ ಪೇಜ್ ನಲ್ಲಿ ಅನುಚಿತವಾಗಿ ಪ್ರಶ್ನಿಸಿದವರೊಬ್ಬರಿಗೆ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ.

ಅಭಿಮಾನಿಗಳು ಫಾತಿಮಾ ಬಾಬು ಅವರ ಫೇಸ್‌ಬುಕ್ ಫೋಟೋದ ಕಾಮೆಂಟ್‌ಗಳಲ್ಲಿ “ನಿಮ್ಮ ಪತಿ ಹಿಂದೂ. ನಿಮ್ಮ ಮಕ್ಕಳಿಗೆ ಹಿಂದೂ ಹೆಸರಿಲ್ಲ ಏಕೆ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಫಾತಿಮಾ, “ಇದರಿಂದ ನನ್ನ ಮಕ್ಕಳಿಗೇನು ತೊಂದರೆ ಇಲ್ಲ ನಿಮಗೇಕೆ ತೊಂದರೆ ಆಗುತ್ತಿದೆ?” ಎಂದು ಕೇಳಿದ್ದಾರೆ. ಮತ್ತೆ ಕಮೆಂಟ್ ಮುಂದುವರೆಸಿದ ಅಭಿಮಾನಿ “ನನಗೆ ಅನಿಸುವಂತೆ ನಾನು ಪ್ರಶ್ನೆಯನ್ನು ಕೇಳಿದೆ”

ಅದಕ್ಕೆ ಉತ್ತರಿಸಿದ ಫಾತಿಮಾ ಬಾಬು, “ನನ್ನ ಮದುವೆಯನ್ನು ಹಿಂದೂ ವ್ಯಕ್ತಿಯೊಂದಿಗೆ ಮಸೀದಿಯಲ್ಲಿ ಮಾಡಿಕೊಂಡಿದ್ದೇನೆ. ಮತ್ತು ನನ್ನ ಮಕ್ಕಳ ಹೆಸರುಗಳನ್ನು ಇಡಲಾಗಿದೆ.
ಇದು ನಿಮಗೆ ಏಕೆ ದೊಡ್ಡ ವಿಷಯವಾಗಿದೆ?” ಮೇಲೆ ಇದಕ್ಕೆ ಅಭಿಮಾನಿ “ಇದು ಸಾರ್ವಜನಿಕ ವೇದಿಕೆ, ನಾನು ಅನುಚಿತವಾಗಿ ಏನನ್ನೂ ಕೇಳಿಲ್ಲ” ಎಂದು ಹೇಳಿದರು. ಅದಕ್ಕೆ ಫಾತಿಮಾ “ಯಾವ ಸಾರ್ವಜನಿಕ ವೇದಿಕೆ? ಇದು ಸಾರ್ವಜನಿಕ ವೇದಿಕೆ ಎಂಬ ಕಾರಣಕ್ಕೆ ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಇದೀಗ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಕೇರಳ ಸ್ಟೋರಿ ಚಲನಚಿತ್ರವು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಉಂಟುಮಾಡುತ್ತಿರುವ ಸಮಯದಲ್ಲಿ ಈ ಪ್ರಶ್ನೆ ಬಂದಿರುವ ಕಾರಣ ಈ ವಿಷಯ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿ ತಂಡದವರಿಗೆ ಅಪಘಾತ! ನಟಿ ಅದಾ ಶರ್ಮಾಗೆ ಪೆಟ್ಟು