Mangaluru: ಕರ್ನಾಟಕ ಪಾಲಿಟೆಕ್ನಿಕ್‍ನಲ್ಲಿ ಕೋರ್ಸ್ ಗೆ ಅರ್ಜಿ ಆಹ್ವಾನ ; ಆಸಕ್ತರು ಅರ್ಜಿ ಸಲ್ಲಿಸಿ, ಸೀಟು ಪಡೆದುಕೊಳ್ಳಿ!!!

Mangalore application for engineering and diploma courses

Mangalore application : ವಿದ್ಯಾರ್ಥಿಗಳಿಗೆ (Students) ಮುಖ್ಯ ಮಾಹಿತಿ ಇಲ್ಲಿದೆ. ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್‍ನಲ್ಲಿ 2023-24ನೇ ಸಾಲಿನಲ್ಲಿ 3 ವರ್ಷಗಳ ಪೂರ್ಣಾವಧಿ ಕೋರ್ಸ್’ಗಳಿಗೆ ಮೆರಿಟ್ ಆಧಾರಿತ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಸೆಮಿಸ್ಟರ್ ಇಂಜಿನಿಯರಿಂಗ್ ಹಾಗೂ ನಾನ್ – ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್’ಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ನೀವು ಕೋರ್ಸ್ ಮಾಡಲು ಬಯಸಿದ್ದರೆ, ತಕ್ಷಣ ಈ ಕೋರ್ಸ್​ಗೆ (Mangalore application) ಅರ್ಜಿ ಹಾಕಿ. ಸೀಟು ಪಡೆದುಕೊಳ್ಳಿ.

ಪ್ರಮುಖ ದಿನಾಂಕಗಳು:
ಮೇ 19- ಮೆರಿಟ್ ಪಟ್ಟಿ ಪ್ರಕಟಣೆ
ಮೇ 20- ಸೀಟು ಹಂಚಿಕೆಯ ಪ್ರಕಟಣೆ
ಮೇ 21- ಸೀಟು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಪ್ರವೇಶ ಹಾಗೂ ಕೊನೆಯ ದಿನ 23ರಂದು ಆಗಿದೆ.

ಅರ್ಜಿ ಸಲ್ಲಿಕೆ:
• ಇಲಾಖೆಯ ಅಧಿಕೃತ ವೆಬ್‍ಸೈಟ್‍ https://dtek.karnataka.gov.in/ ಗೆ ಭೇಟಿ ನೀಡಿ.
• ಅರ್ಜಿ ಭರ್ತಿ ಮಾಡಿ, ಅರ್ಜಿ ಡೌನ್‍ಲೋಡ್ ಮಾಡಿ.
• ಅರ್ಜಿಯನ್ನು ಮೇ 18 ರೊಳಗೆ ಸಂಸ್ಥೆಯ ಸಂಬಂಧಪಟ್ಟ ಪಾಲಿಟೆಕ್ನಿಕ್‌ ಪ್ರಾಂಶುಪಾಲರಿಗೆ ಸಲ್ಲಿಸಬೇಕು.

ಅಭ್ಯರ್ಥಿಗಳು ನೀಡಿರುವ ಆದ್ಯತೆ, ಮೆರಿಟ್ ಹಾಗೂ ರೋಷ್ಟರ್​ಗೆ ಅನುಗುಣವಾಗಿ ಆನ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಸೀಟುಗಳು ಭರ್ತಿಯಾಗದೇ ಉಳಿದರೆ ಆ ಸೀಟುಗಳನ್ನು ಮೊದಲು ಬಂದವರಿಗೆ ನೀಡಲಾಗುತ್ತದೆ. ಮೊದಲ ಆದ್ಯತೆಯ ಮೇಲೆ ಪ್ರಾಂಶುಪಾಲರ ಹಂತದಲ್ಲಿಯೇ ಮೇ.31ರೊಳಗೆ ಆಫ್-ಲೈನ್ ಮೂಲಕ ಹಂಚಿಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‍ಸೈಟ್ www.dtek.kar.nic.in ಗೆ ಭೇಟಿ ನೀಡಿ. ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರು ಕಚೇರಿಯ ದೂರವಾಣಿ ಸಂಖ್ಯೆ: 0824-2211636, 3500437 ಅನ್ನು ಕೂಡ ಸಂಪರ್ಕಿಸಬಹುದು.

ಇದನ್ನೂ ಓದಿ:Prakash Raj: ಕಾಂಗ್ರೆಸ್‌ಗೆ ಗೆಲುವು, ಬಿಜೆಪಿಗೆ ಸೋಲು-ಕರ್ನಾಟಕ ಚುನಾವಣಾ ಫಲಿತಾಂಶಕ್ಕೆ ಪ್ರಕಾಶ್​ ರೈ ಖುಷಿ!!!

Leave A Reply

Your email address will not be published.