Home Breaking Entertainment News Kannada Priyanka chopra: ಅಬ್ಬಬ್ಬಾ.. ಪ್ರಿಯಾಂಕ ಚೋಪ್ರಾ, ಯಾರೊಂದಿಗೆಲ್ಲಾ ಡೇಟ್ ಮಾಡಿದ್ರು ಗೊತ್ತಾ? ಮಾಜಿ ಪ್ರಿಯತಮರ...

Priyanka chopra: ಅಬ್ಬಬ್ಬಾ.. ಪ್ರಿಯಾಂಕ ಚೋಪ್ರಾ, ಯಾರೊಂದಿಗೆಲ್ಲಾ ಡೇಟ್ ಮಾಡಿದ್ರು ಗೊತ್ತಾ? ಮಾಜಿ ಪ್ರಿಯತಮರ ಭಯಾನಕ ಸತ್ಯ ಬಿಚ್ಚಿಟ್ಟ ಹಾಲಿವುಡ್ ಬ್ಯೂಟಿ!

Priyanka chopra
Image source- CNN

Hindu neighbor gifts plot of land

Hindu neighbour gifts land to Muslim journalist

Priyanka Chopra: ಬಾಲಿವುಡ್ (Bollywood) ಸುಂದರಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇದೀಗ ಹಾಲಿವುಡ್ (Hollywood) ನಟಿಯಾಗಿ ಸದ್ದು ಮಾಡ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಹಾಲಿವುಡ್ ರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಬ್ರೇಕಪ್‌ಗಳ ಬಗ್ಗೆ ನಟಿ ಮಾತನಾಡಿದ್ದಾರೆ.

ಹೌದು, ನಟಿ ಪ್ರಿಯಾಂಕಾ ಚೋಪ್ರಾ ನಿಕ್​ ಜೋನಸ್​(Nick Johan) ಅವರನ್ನು ವಿವಾಹವಾಗುವ ಮೊದಲು ಹಲವು ನಟರ ಜೊತೆ ಡೇಟಿಂಗ್​ ಮಾಡಿದ್ದರು. ಅದರ ಕುರಿತು ಅವರು ಈಗ ಮಾತನಾಡಿದ್ದಾರೆ. ಅದರಲ್ಲೂ ಕೂಡ ಈ ಕುರಿತಾಗಿ ಕೆಲವು ಅಚ್ಚರಿಯ ವಿಚಾರಗಳನ್ನು ಬಹಿರಂಗಗೊಳಿಸಿರೋ ಪ್ರಿಯಾಂಕ ಅವರು, ಮಾಜಿ ಬಾಯ್ ಫ್ರೆಂಡ್ಸ್ ಎಲ್ಲರೂ ನನ್ನನ್ನು ಕಾಲು ಒರೆಸೋ ಬಟ್ಟೆಯಂತೆ ಯೂಸ್ ಮಾಡಿದ್ರು ಎಂದು ಹೇಳಿದ್ದಾರೆ.

ನಾನು ಕೇರ್ ಟೇಕರ್ ರೀತಿ ವರ್ತಿಸುತ್ತಿದ್ದೆ. ನನ್ನ ಬಾಯ್‌ಫ್ರೆಂಡ್ ಬಗ್ಗೆ ಅತಿಯಾಗಿ ಕಾಳಜಿ ಮಾಡುವುದು, ಅವನು ಸದಾ ಕಂಫರ್ಟ್‌ನಲ್ಲಿರುವಂತೆ ನೋಡಿಕೊಳ್ಳುವುದು. ಅವನ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದೆ. ಇದರಿಂದಾಗಿ ನಾನು ನನ್ನತನವನ್ನೇ ಕಳೆದುಕೊಂಡಿದ್ದೆ. ಹಲವು ಅವಕಾಶಗಳನ್ನು ಕೈಬಿಟ್ಟೆ, ನನ್ನ ಮೇಲಿನ ಅಧಿಕಾರವನ್ನು ನಾನು ಅವನಿಗೆ ಕೊಟ್ಟುಬಿಟ್ಟಿದ್ದೆ ಎಂದು ನಟಿ ಮಾತನಾಡಿದ್ದಾರೆ.

ಅಲ್ಲದೆ ಅವನಿಗಾಗಿ ನನ್ನ ಖುಷಿಯನ್ನು ತ್ಯಾಗ ಮಾಡುವುದು ಕೆರಿಯರ್ ತ್ಯಾಗ ಮಾಡುವುದು, ಸ್ವಂತ ಇಚ್ಛೆಯನ್ನು ಕೊಂದು ಅವನ ಇಚ್ಛೆಯಂತೆ ಬದುಕುವುದು ನನ್ನ ಕರ್ತವ್ಯ ಎಂದೆಲ್ಲ ನನಗೆ ನಾನೇ ನಿರ್ಧರಿಸಿಬಿಟ್ಟಿದ್ದೆ. ಅದು ತಪ್ಪು ಎಂದು ನನಗೆ ಅನಿಸುತ್ತಲೇ ಇರಲಿಲ್ಲ. ನನ್ನ ಮೇಲಿನ ನಿಯಂತ್ರಣವನ್ನು ಬೇರೆ ವ್ಯಕ್ತಿಗೆ ನೀಡಿದಾಗ ಆತ ನನ್ನನ್ನು ಅವನಿಷ್ಟದಂತೆ ಬಳಸಿಕೊಳ್ಳಲು ಪ್ರಾರಂಭಿಸಿದ. ನನ್ನನ್ನು ಡೋರ್‌ಮ್ಯಾಟ್‌ನಂತೆ ಬಳಸಿಕೊಳ್ಳಲಾಯಿತು. ಮಹಿಳೆಯರಿಗೆ ಇದನ್ನೇ ಹೇಳಿಕೊಟ್ಟಿರುವುದಲ್ಲವೆ, ಕುಟುಂಬಕ್ಕಾಗಿ ತ್ಯಾಗ ಮಾಡಬೇಕು, ಪತಿ ಹೊರಗಿನಿಂದ ಬಂದಾಗ ಅವನನ್ನು ಸಂತೈಸಬೇಕು, ಅವನು ಕಂಫರ್ಟ್ ಆಗಿರುವಂತೆ ನೋಡಿಕೊಳ್ಳಬೇಕು ಎಂದೆಲ್ಲ ಎಂದಿದ್ದಾರೆ. ಒಂದು ಸಮಯದಲ್ಲಿ ನಾನು ಒಂದು ರಿಲೇಶನ್‌ಶಿಷ್‌ನಿಂದ ಮತ್ತೊಂದು ರಿಲೇಶನ್‌ಶಿಪ್‌ಗೆ ಹೀಗೆ ಹಾರುತ್ತಲೇ ಇದ್ದೆ. ನನಗಾಗಿ ನಾನು ಸಮಯವನ್ನೂ ನೀಡುತ್ತಿರಲಿಲ್ಲ ಎಂದು ಪ್ರಿಯಾಂಕಾ ಮಾತನಾಡಿದ್ದಾರೆ.

ಅಂದಹಾಗೆ ಪ್ರಿಯಾಂಕಾ ಅವರು ಶಾರುಖ್ ಖಾನ್ (Shah rukh Khan), ಶಾಹಿದ್ ಕಪೂರ್, ಹರ್ಮನ್ ಬವೇಜಾ ಅವರಂತಹ ಅನೇಕ ಬಾಲಿವುಡ್ ನಟರೊಂದಿಗೆ ಡೇಟಿಂಗ್​ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ದೇಸಿಗರ್ಲ್ ಬಾಲಿವುಡ್​ನಲ್ಲಿ ಅನೇಕ ಸೂಪರ್ ಸ್ಟಾರ್​ಗಳ ಜೊತೆ ನಟಿಸಿದ್ದಾರೆ. ಪ್ರಿಯಾಂಕಾ ಅವರ ಹೆಸರು ನಟರಾದ ಶಾಹಿದ್ ಕಪೂರ್ ಮತ್ತು ಹರ್ಮಾನ್ ಬಾವ್ಜೆ ಅವರೊಂದಿಗೆ ತಳುಕಿ ಹಾಕಿಕೊಂಡಿತ್ತು. ಹರ್ಮಾನ್ ಬಾವ್ಜಾ ಮತ್ತು ಪ್ರಿಯಾಂಕಾ ಮದುವೆಯಾಗಲು ಕೂಡ ಮುಂದಾಗಿದ್ದರು ಎನ್ನುವ ಸುದ್ದಿ ಕೂಡ ಹರಡಿತ್ತು. ಅಂದಹಾಗೆ, ಶಾಹಿದ್ ಕಪೂರ್ ಜೊತೆ ಕೂಡ ಮದುವೆಯ ಸುದ್ದಿ ಕೇಳಿಬಂದಿತ್ತು. ಆದರೆ ನಟನ ಜೊತೆ ಬ್ರೇಕಪ್ ಬಳಿಕ ಪ್ರಿಯಾಂಕಾ ನಿಕ್ ಜೋನಸ್ ಜೊತೆ ಡೇಟ್ ಮಾಡಲು ಶುರು ಮಾಡಿದ್ದರು.

ಈ ಕುರಿತು ಮಾತನಾಡಿದ ಪ್ರಿಯಾಂಕ “ನಾನು ಡೇಟಿಂಗ್ (Dating) ಮಾಡಿದವರು ನಿಜವಾಗಿಯೂ ಅದ್ಭುತವಾಗಿದ್ದಾರೆ. ಕೆಲವು ಸಂಬಂಧಗಳು ನಿಜವಾಗಿಯೂ ಕೆಟ್ಟದಾಗಿ ಕೊನೆಗೊಂಡಿರಬಹುದು, ಆದರೆ ನಾನು ಡೇಟಿಂಗ್​ ಮಾಡಿರುವ ವ್ಯಕ್ತಿಗಳೆಲ್ಲರೂ ಉತ್ತರಮರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಪಿಸಿ. ಸಂಬಂಧಗಳು (Relationships) ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ. ಹಾಗೆ ನನ್ನ ಜೀವನದಲ್ಲಿ ಬಂದ ಕೆಟ್ಟವರನೆಲ್ಲಾ ನಾನು ತಡೆಯಲು ಪ್ರಯತ್ನಿಸಿದೆ. ನನ್ನ ಎಲ್ಲಾ ಡೇಟಿಂಗ್ ಕೂಡ ಅದ್ಭುತವಾಗಿವೆ. ಆದರೆ ಅವರೊಂದಿಗಿನ ಸಂಬಂಧವು ಕೆಟ್ಟದಾಗಿ ಕೊನೆಗೊಂಡಿತು. ನಾನು ಈಗಲೂ ಕೂಡ ಮಾಜಿ ಗೆಳೆಯರನ್ನು ಇಷ್ಟಪಡುತ್ತೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ. ನನ್ನ ರೊಮ್ಯಾಂಟಿಕ್ ಟೈಮ್ (Romantic time) ಸುಂದರವಾಗಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ:D K Shivkumar: ಚುನಾವಣೆ ಫಲಿತಾಂಶಕ್ಕೂ ಮುನ್ನ ಗಡ್ಡ ಬೋಳಿಸಿದ ಡಿಕೆಶಿ! ಈಡೇರೇ ಬಿಟ್ಟಿತ ಕಾಂಗ್ರೆಸ್ ಅಧ್ಯಕ್ಷರ ಆ ಶಪಥ!