Home Breaking Entertainment News Kannada Rashmika Mandanna: ನಾನು ವೆಜ್‌ ಎಂದು ಬಡಾಯಿ ಕೊಚ್ಚಿದ್ದ ರಶ್ಮಿಕಾ ಮಂದಣ್ಣ! ಇಲ್ನೋಡಿ ರೆಡ್‌ಹ್ಯಾಂಡ್‌ ಆಗಿ...

Rashmika Mandanna: ನಾನು ವೆಜ್‌ ಎಂದು ಬಡಾಯಿ ಕೊಚ್ಚಿದ್ದ ರಶ್ಮಿಕಾ ಮಂದಣ್ಣ! ಇಲ್ನೋಡಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕೇ ಬಿಟ್ಟಳು!

Rashmika Mandanna
Image source: Gulte

Hindu neighbor gifts plot of land

Hindu neighbour gifts land to Muslim journalist

Rashmika mandanna: ಕಿರಿಕ್ ಪಾರ್ಟಿ (kirik party )ಚಿತ್ರದ(film )ಮೂಲಕ ಚಂದನವನ ಪ್ರವೇಶಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika mandanna )ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಫುಲ್ ಮಿಂಚುತ್ತಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ನಟಿ ಏನೇ ಮಾತಾಡಿದ್ರೂ ಸುದ್ದಿಯಾಗುತ್ತೆ, ಸನ್ನೆ ಮಾಡಿದ್ರೆ ವಿವಾದವೇ ಸೃಷ್ಟಿಯಾಗುತ್ತೆ. ಈಗಾಗಲೇ ಉರ್ಫಿ ಜಾವೇದ್ ಉಡುಪು(dress )ಸ್ಟೈಲ್ ಜೊತೆಗೆ ರಶ್ಮಿಕಾ ಪೈಪೋಟಿ ಇಳಿದಿರುವುದಾಗಿ ಎಲ್ಲೆಡೆ ಸುದ್ದಿಯಾಗಿತ್ತು.

ಇದೀಗ ರಶ್ಮಿಕಾ ಮಾಂಸಾಹಾರ ಬಿಟ್ಬಿದ್ದೇನೆಂದು ಮತ್ತೆ ನಾನ್ ವೆಜ್ ತಿನ್ನುವ ಮೂಲಕ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಹೌದು, ಚಿಕನ್​ ಬರ್ಗರ್​ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

‘ಬಾಲಿವುಡ್​ ಗರಿಮಾ ಕುಮಾ​ರ್​’ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ‘ರಶ್ಮಿಕಾ ಮಂದಣ್ಣ ಅವರು ಹೊಸ ಜಾಹೀರಾತಿನಲ್ಲಿ ನಾನ್​-ವೆಜ್​ ತಿನ್ನುತ್ತಿದ್ದಾರೆ. ಆದರೆ ತಮ್ಮನ್ನು ತಾವು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಜನರಿಗೆ ಇದು ಇಷ್ಟ ಆಗಿಲ್ಲ. ನಮ್ಮನ್ನು ಮೂರ್ಖರನ್ನಾಗಿಸೋದು ನಿಲ್ಲಿಸಿ ಅಂತ ಜನರು ಕಮೆಂಟ್ ಮಾಡಿದ್ದಾರೆ.

ರಶ್ಮಿಕಾ ಜಾಹೀರಾತಿನಲ್ಲಿ ಚಿಕನ್ ಬರ್ಗನ್ ತಿನ್ನುವುದೀಗ ನೆಟ್ಟಿಗರನ್ನು ಗೊಂದಲಕ್ಕೀಡುಮಾಡಿದೆ. ‘ಅವತ್ತು ಹಾಗೆ ಹೇಳಿ ಈಗ ಬರ್ಗರ್ ತಿಂದು ಸುಳ್ಳು ಹೇಳುತ್ತಿದ್ದೀರಾ’ ಎಂದು ಕೇಳುತ್ತಿದ್ದಾರೆ.

ಮತ್ತೋರ್ವ ಕಾಮೆಂಟ್ ಮಾಡಿ ‘ನಾವು ಕನ್ನಡಿಗರು ಅವಳನ್ನು ಏಕೆ ಇಷ್ಟಪಡುವುದಿಲ್ಲ ಎಂದು ಈಗ ಅರ್ಥ ಆಯ್ತಾ. ಅವಳು ತನ್ನ ಮಾತನ್ನು ಅನೇಕ ಬಾರಿ ಬದಲಾಯಿಸುತ್ತಾಳೆ’ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಕೆಲವರು ರಶ್ಮಿಕಾಗೆ ವಿರೋಧ ಮಾತಾಡಿದ್ದು, ಇನ್ನೂ ಕೆಲವರು ನಟಿಯ ಪರವಾಗಿ ವಾದ ಮಾಡಿದ್ದಾರೆ. ‘ಎಲ್ಲ ಸೆಲೆಬ್ರಿಟಿಗಳು ತಾವು ಪ್ರಚಾರ ಮಾಡುವ ವಸ್ತುಗಳನ್ನು ಬಳಸುವುದಿಲ್ಲ. ಅವರು ಕೇವಲ ಪ್ರಚಾರ ರಾಯಭಾರಿ ಮಾತ್ರ’ ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ:Kichcha Sudeep – Darshan: ದರ್ಶನ್ ಫೋಟೋ ಮೇಲೆ ಲವ್ ಯೂ ಎಂದು ಬರೆದ ಕಿಚ್ಚ ಸುದೀಪ್! ಬೆರಗಾದ ಫ್ಯಾನ್ಸ್!