Malayalam Film Industry: ಮಾಲಿವುಡ್ ಚಿತ್ರರಂಗದಲ್ಲಿ ಡ್ರಗ್ಸ್ ಕರಿನೆರಳು! ಶೂಟಿಂಗ್ ಸ್ಥಳದಲ್ಲಿ ಪೊಲೀಸರ ನಿಯೋಜನೆ!

Drug use in Malayalam film industry has been reported

Malayalam Film Industry: ಸಿನಿಮಾರಂಗದಲ್ಲಿ ಡ್ರಗ್ (drug) ವಾಸನೆ ಇದ್ದೇ ಇರುತ್ತದೆ. ಈ ಹಿಂದೆಯೂ ಅದೆಷ್ಟೋ ನಟ, ನಟಿಯರು ಡ್ರಗ್ ದಂಧೆಗೆ ಇಳಿದು ಕೋರ್ಟ್ ಮೆಟ್ಟಿಲು ಹತ್ತಿದವರಿದ್ದಾರೆ. ಈ ಹಿಂದೆ ಎಲ್ಲಾ ಚಿತ್ರರಂಗದಲ್ಲೂ ಡ್ರಗ್ ಹೆಸರು ಕೇಳಿಬಂದಿದೆ. ಇದೀಗ ಮಲಯಾಳಂ ಚಿತ್ರರಂಗದಲ್ಲಿ (Malayalam Film Industry) ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ಶೂಟಿಂಗ್‌ ಸ್ಥಳದಲ್ಲಿ ಪೊಲೀಸ್ ಕಣ್ಗಾವಲು ಇದೆ.

ಇತ್ತೀಚೆಗೆ ಕೇರಳ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ನಟ ಟಿನಿ ಟಾಮ್‌ “ನನ್ನ ಮಗನಿಗೆ ಖ್ಯಾತ ನಟರೊಂದಿಗೆ ನಟಿಸುವ ಅವಕಾಶ ಬಂದಿತ್ತು. ಆದರೆ, ಚಿತ್ರೀಕರಣದ ವೇಳೆ ಡ್ರಗ್ಸ್ ಸೇವನೆ ಅತಿಯಾಗಿರುವ ಭಯದಿಂದ ಆಫರ್‌ ತಿರಸ್ಕರಿಸಿದೆ” ಎಂದು ಹೇಳಿದ್ದರು.

ಮಾಲಿವುಡ್‌ನಲ್ಲಿ ಡ್ರಗ್ಸ್ ಸೇವನೆ ಹೆಚ್ಚಾಗಿದೆ ಎಂದು ಚಿತ್ರರಂಗದ ಕೆಲವು ನಟರು ಹೇಳಿಕೆ ನೀಡಿದ್ದರು. ಹಾಗೂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಇದೆ ಎಂಬುದನ್ನು ಮಲಯಾಳಂ ಚಿತ್ರರಂಗ ಒಕ್ಕೂಟವೇ (ಅಮ್ಮಾ) ಒಪ್ಪಿಕೊಂಡಿದ್ದು, ಸೂಕ್ತ ತನಿಖೆ ಹಾಗೂ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಿನಿಮಾಗಳ ಚಿತ್ರೀಕರಣ ಸ್ಥಳಗಳಲ್ಲಿ ಮುಫ್ತಿಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.

“ಇನ್ನು ಚಿತ್ರೀಕರಣದ ವೇಳೆ ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟ ಕಂಡು ಬಂದರೆ ಕೂಡಲೇ ದಾಳಿ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಕೊಚ್ಚಿ ನಗರ ಪೊಲೀಸ್‌ ಆಯುಕ್ತ ಕೆ. ಸೇತು ರಾಮನ್‌ ತಿಳಿಸಿದ್ದಾರೆ.

ಅಲ್ಲದೆ, ಈ ಹಿಂದೆ ಮಲಯಾಳಂ (Malayalam Film Industry) ಸಿನಿಮಾದ ಇಬ್ಬರು ಯುವ ನಟರಾದ ಶ್ರೀನಾಥ್ ಬಾಸಿ (Sreenath Bhasi) ಮತ್ತು ಶೇನ್ ನಿಗಮ್ (Shane Nigam) ಅವರನ್ನು ಬ್ಯಾನ್ ಮಾಡಲಾಗಿತ್ತು. ಸೆಟ್ ನಲ್ಲಿ ಈ ನಟರಿಬ್ಬರು ಮಾದಕ ವ್ಯಸನದ ಗುಂಗಿನಲ್ಲಿರುತ್ತಿದ್ದರು. ಇದರಿಂದ ಚಿತ್ರತಂಡಕ್ಕೆ ಇತರರಿಗೆ ತೊಂದರೆಯಾಗುತ್ತಿತ್ತು ಎನ್ನಲಾಗಿದೆ.

 

ಇದನ್ನು ಓದಿ: Gemology: ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಈ ಒಂದು ರತ್ನ ಧರಿಸಿದ್ರೆ ಸಾಕು! 

Leave A Reply

Your email address will not be published.