Home Breaking Entertainment News Kannada The Kerala Story BO Collection: ವಿವಾದಗಳಿಂದಲೇ ಸದ್ದು ಮಾಡಿದ ʼದಿ ಕೇರಳ ಸ್ಟೋರಿʼಯ ಬಾಕ್ಸ್‌ಆಫೀಸ್‌...

The Kerala Story BO Collection: ವಿವಾದಗಳಿಂದಲೇ ಸದ್ದು ಮಾಡಿದ ʼದಿ ಕೇರಳ ಸ್ಟೋರಿʼಯ ಬಾಕ್ಸ್‌ಆಫೀಸ್‌ ಕಲೆಕ್ಷನ್‌ ಎಷ್ಟು ಗೊತ್ತೇ?

The Kerala Story BO Collection
Image source: India TV news

Hindu neighbor gifts plot of land

Hindu neighbour gifts land to Muslim journalist

The Kerala Story BO Collection: ‘ದಿ ಕೇರಳ ಸ್ಟೋರಿʼ ಇಂದಿಗೆ ಬಿಡುಗಡೆಯಾಗಿ ಮೂರನೇ ದಿನ. ಈ ಚಿತ್ರ ಬಿಡುಗಡೆಗೆ ಮೊದಲೇ ವಿವಾದ ಉಂಟು ಮಾಡಿತ್ತು. ಹಾಗೆನೇ ಹಲವಾರು ತಾರೆಯರು ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಕೂಡಾ ಆರಂಭಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ಇದೆ. ಇದರ ಮಧ್ಯೆ ಈಗ ಎಲ್ಲರ ಕಣ್ಣು ಈ ಚಿತ್ರದ ಕಲೆಕ್ಷನ್‌ (The Kerala Story BO Collection) ಮೇಲೆ ನೆಟ್ಟಿದೆ.

ಯಾವುದೇ ಒಂದು ಚಿತ್ರ ವಿವಾದಕ್ಕೆ ಗುರಿಯಾದಷ್ಟೂ ದೊಡ್ಡ ಹಿಟ್ ಆಗುವುದು ಬಾಲಿವುಡ್ ಇತಿಹಾಸದಲ್ಲಿ ಸಾಮಾನ್ಯ. ಇದಕ್ಕೆ ದೊಡ್ಡ ಉದಾಹರಣೆ ಎಂದರೆ ಶಾರುಖ್ ಖಾನ್ ಅವರ ಪಠಾಣ್. ಶಾರುಖ್ ಖಾನ್ ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಬಾಯ್ಕಾಟ್ ಪಠಾಣ್ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಇದಲ್ಲದೆ, ದೀಪಿಕಾ ಮತ್ತು ಶಾರುಖ್ ಅವರ ಪ್ರತಿಕೃತಿಗಳನ್ನು ಸಹ ವಿವಿಧೆಡೆ ದಹಿಸಲಾಯಿತು. ಆದರೆ ಪಠಾಣ್‌ ಸಿನಿಮಾದ ಹಿಟ್‌ ಎಲ್ಲರ ಕಣ್ಣಮುಂದೆ ಇದೆ. ಹೀಗಿರುವಾಗ ‘ದಿ ಕೇರಳ ಸ್ಟೋರಿ’ಗೂ ವಿವಾದ ಲಾಭ ಆಗಬಹುದೇ ಎಂದು ಅಂದಾಜಿಸಲಾಗಿದೆ.

ಈ ನಡುವೆ ಚಿತ್ರದ ಎರಡನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮುನ್ನೆಲೆಗೆ ಬಂದಿದೆ. ಕೇವಲ 40 ಕೋಟಿಯಲ್ಲಿ ತಯಾರಾದ ಈ ಚಿತ್ರದ ಗಳಿಕೆ ತುಂಬಾ ಚೆನ್ನಾಗಿದೆ ಎನ್ನಲಾಗುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 8 ಕೋಟಿ ಬ್ಯುಸಿನೆಸ್ ಮಾಡಿದೆ. ಮತ್ತೊಂದೆಡೆ, ಎರಡನೇ ದಿನದಲ್ಲಿ ಈ ಅಂಕಿ ಅಂಶಗಳಲ್ಲಿ ಏರಿಕೆ ಕಂಡುಬಂದಿದೆ. ಇದು ತಯಾರಕರಿಗೆ ತುಂಬಾ ಒಳ್ಳೆಯ ಸುದ್ದಿ. ಸಕ್ನಿಲ್ಕ್‌ನ ಆರಂಭಿಕ ವಹಿವಾಟಿನ ಪ್ರಕಾರ, ‘ದಿ ಕೇರಳ ಸ್ಟೋರಿ’ ಬಿಡುಗಡೆಯಾದ ಎರಡನೇ ದಿನ ಅಂದರೆ ಶನಿವಾರ 12.50 ಕೋಟಿ ಗಳಿಸಿದೆ.

ಮೊದಲ ದಿನಕ್ಕೆ ಹೋಲಿಸಿದರೆ ಇದು ದೊಡ್ಡ ಲಾಭ ಎಂದು ಹೇಳಲಾಗಿದೆ. ಮೇ 5 ರಂದು ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಇದೇ ವೇಗದಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದರೆ, ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ವಿಶೇಷವೇನೂ ಇಲ್ಲ. ಅದೇ ಹೊತ್ತಿಗೆ ಭಾನುವಾರದ ಕಲೆಕ್ಷನ್ ನಲ್ಲೂ ಹೆಚ್ಚಳ ಕಾಣಬಹುದೆಂಬ ನಂಬಿಕೆ ಇದೆ. ವಾರಾಂತ್ಯದಲ್ಲಿ ಚಿತ್ರವು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅದಲ್ಲದೆ ಸರ್ಕಾರ ಕೂಡಾ ಈ ಚಿತ್ರಕ್ಕೆ ಹಲವೆಡೆ ತೆರಿಗೆ ಮುಕ್ತ ಎಂದು ಘೋಷಿಸಿದೆ. ಹಾಗಾಗಿ ವೀಕ್ಷಕರು ಯಾವುದೇ ಹೆಚ್ಚುವರಿ ಪಾವತಿ ಇಲ್ಲದೆ ಈ ಸಿನಿಮಾವನ್ನು ಆನಂದಿಸಬಹುದು.

Rain Alert: ಆಲಿಕಲ್ಲು ಸಹಿತ ಭಾರೀ ಮಳೆಯ ಎಚ್ಚರಿಕೆ ನೀಡಿದ IMD! ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ? ಇಲ್ಲಿದೆ ಕಂಪ್ಲೀಟ್‌ ವಿವರ