Vijay -Rashmika: ಕೊನೆಗೂ ವಿಜಯ್ ನನ್ನ ‘ಲೈಫ್’ ಎಂದೇ ಬಿಟ್ಟಳು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ!

Actress Rashmika has said that Vijay is my life

Vijay -Rashmika: ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದು ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್ ಕ್ರಶ್ ಎಂದು ಫೇಮಸ್ ಆಗಿರುವ ರಶ್ಮಿಕಾ, ಸದ್ಯ ಸಕ್ಸಸ್ಗಳ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಏನೇ ಮಾತಾಡಿದ್ರೂ ಸುದ್ದಿಯಾಗುತ್ತೆ, ಸನ್ನೆ ಮಾಡಿದ್ರೆ ವಿವಾದವೇ ಸೃಷ್ಟಿಯಾಗುತ್ತೆ. ಅಷ್ಟೇ ಯಾಕೆ ಆಗಾಗ ಜನರ ಬಾಯಿಯಲ್ಲಿ ಚುಯಿಂಗಮ್ ಆಗಿ ಟ್ರೊಲ್ ಆಗುವುದರಲ್ಲಿ ಟಾಪ್ ಲಿಸ್ಟ್ನಲ್ಲಿ ಕೂಡ ಇದ್ದಾರೆ. ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ನಟಿ ವಿಜಯ್ (Vijay -Rashmika) ನನ್ನ ‘ಲೈಫ್’ ಎಂದು ಹೇಳಿ ಸಖತ್ ವೈರಲ್ ಆಗಿದ್ದಾರೆ.

 

Vijay -Rashmika
Image source: Yo vizag

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾಳಿಗೆ ಸಂದರ್ಶಕಿ ಪ್ರಶ್ನೆಗಳನ್ನು ಕೇಳಿದ್ದು, ಅದರಲ್ಲಿ ಒಂದು ಪ್ರಶ್ನೆಗೆ ನಟಿ ನೀಡಿದ ಉತ್ತರ ಇದೀಗ ಭಾರೀ ವೈರಲ್ ಆಗಿದೆ. ‘ದಳಪತಿ ವಿಜಯ್ ಅಥವಾ ವಿಜಯ್ ದೇವರಕೊಂಡ (Vijay Devarakonda), ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ’ ಎಂದು ಸಂದರ್ಶಕಿ ಪ್ರಶ್ನೆ ಕೇಳಿದ್ದು, ನಟಿ ರಶ್ಮೀಕಾಳಿಗೆ ಈ ಪ್ರಶ್ನೆಗೆ ಉತ್ತರಿಸೋದು ಕೊಂಚ ಕಷ್ಟವಾಗಿದೆ. ಯಾಕೆಂದರೆ, ಆಕೆಗೆ ಇಬ್ಬರೂ ಆತ್ಮೀಯರು. ಆದರೆ, ನಟಿ ಏನು ಉತ್ತರ ನೀಡಿದರು ಗೊತ್ತಾ?!.

ರಶ್ಮಿಕಾ – ವಿಜಯ್ ದೇವರಕೊಂಡ (Rashmika – Vijay Devarakonda) ಲವ್ ಸ್ಟೋರಿ ಬಗ್ಗೆ ಗೊತ್ತೇ ಇದೆ. ‘ಗೀತಾ ಗೋವಿಂದಂ’ (Geetha Govindam) ಸಿನಿಮಾದ ನಂತರ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಈ ಸುದ್ದಿ ಎಲ್ಲೆಡೆ ಹಬ್ಬಿತ್ತು. ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಫುಲ್ ಖುಷಿಯಾಗಿತ್ತು. ಆದರೆ, ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿದ್ದರೂ ಇದನ್ನು ಅವರು ಒಪ್ಪಿಕೊಂಡಿಲ್ಲ. ಇನ್ನು, ದಳಪತಿ ವಿಜಯ್ ಮೇಲೆ ರಶ್ಮಿಕಾಗೆ ಎಲ್ಲಿಲ್ಲದ ಗೌರವ. ರಶ್ಮಿಕಾ ಚಿಕ್ಕ ವಯಸ್ಸಿನಿಂದ ಅವರ ಸಿನಿಮಾ ನೋಡಿ ಬೆಳೆದವರು . ಹೀಗಾಗಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡೋದು ರಶ್ಮಿಕಾಗೆ ಕಷ್ಟವಾಗಿತ್ತು. ಆದರೆ ಅವರು ಇಬ್ಬರಿಗೂ ಬೇಸರವಾಗಿದೆ ಹಾಗೆ ಜಾಣ್ಮೆಯಿಂದ ಉತ್ತರಿಸಿದರು.

“ನಾನು ದಳಪತಿ ವಿಜಯ್ (actor Vijay) ಅವರನ್ನು ನೋಡುತ್ತಾ ಬೆಳೆದವಳು. ಹೀಗಾಗಿ, ಅವರು ನನ್ನ ಲೈಫ್​. ವಿಜಯ್ ದೇವರಕೊಂಡ ಒಳ್ಳೆಯ ಗೆಳೆಯ. ಹೀಗಾಗಿ ನೀವು ಲೈಫ್ ಮತ್ತು ಗೆಳೆತನದ ಬಗ್ಗೆ ಮಾತನಾಡುತ್ತಿದ್ದೀರಿ. ಯಾರನ್ನು ಆಯ್ಕೆ ಮಾಡುತ್ತೀರಿ ಅನ್ನೋದು ನಿಮಗೆ ಬಿಟ್ಟಿದ್ದು” ಎಂದು ರಶ್ಮಿಕಾ ಹೇಳಿದರು. ಸದ್ಯ ಈ ವಿಚಾರ ಸಖತ್ ವೈರಲ್ ಆಗಿದೆ.

ಸದ್ಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆಗಿನ ‘ಮಿಷನ್ ಮಜ್ನು’ (Mission Majnu) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ರಣಬೀರ್ ಕಪೂರ್ ಗೆ (ranbir kapoor) ನಾಯಕಿಯಾಗಿ ‘ಅನಿಮಲ್’ (animal) ಚಿತ್ರದಲ್ಲಿ, ಅಲ್ಲದೆ, ಅಲ್ಲು ಅರ್ಜುನ್ (allu arjun) ‘ಪುಷ್ಪ 2’ (pushpa-2) ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಿತಿನ್​ (Nithin) -ರಶ್ಮಿಕಾ ಕಾಂಬಿನೇಷನ್​ನ ಹೊಸ ಸಿನಿಮಾ ಕೂಡ ಮೂಡಿಬರುತ್ತಿದೆ.

ಇದನ್ನೂ ಓದಿ: ಪತ್ನಿಯನ್ನು ಪರಪುರುಷನೊಂದಿಗೆ ಹಂಚಿಕೊಳ್ಳುವ ಫ್ಯಾಂಟಸಿ ಬಯಕೆ ಹೊಂದಿದ ಪತಿ! ನಂತರ ಏನಾಯ್ತು? ಕುತೂಹಲ ಮಾಹಿತಿ ಇಲ್ಲಿದೆ

Leave A Reply

Your email address will not be published.