Supreme Court : ಪತಿ-ಪತ್ನಿಯ ನಡುವೆ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ : ಸುಪ್ರೀಂಕೋರ್ಟ್

Supreme Court: ಇತ್ತೀಚೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವ ಗಂಡ ಹೆಂಡತಿಯ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಪೈಕಿ ಹಲವು ಪ್ರಕರಣಗಳಲ್ಲಿ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಇದರಿಂದ, ಹಲವು ವರ್ಷಗಳ ಕಾಲ ವಿಚ್ಛೇದನ ಪ್ರಕರಣಗಳು ಕೋರ್ಟ್‌ನಲ್ಲಿ ಇತ್ಯರ್ಥವಾಗದೇ ಇರಬಹುದು . ಆದರೆ, ಪತಿ – ಪತ್ನಿ ಇಬ್ಬರೂ ಪರಸ್ಪರರ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಇಂತಹ ಪ್ರಕರಣಗಳನ್ನು ಕೋರ್ಟ್ ಬೇಗ ವಿಚ್ಛೇದನವನ್ನು ಮಾನ್ಯ ಮಾಡುತ್ತದೆ.

ಹೌದು, ಇನ್ನೂ ಮುಂದೆ ವಿಚ್ಛೇದನ ಪಡೆಯಲು ಬಯಸುವ ಯಾವುದೇ ವ್ಯಕ್ತಿಯು ಒಟ್ಟಾಗಿ ಬದಕಲು ಸಾಧ್ಯವಿಲ್ಲ ಎಂದಾಗ ಒತ್ತಾಯ ಪೂರಕವಾಗಿ ಕಾನೂನಿನ ನಿಯಮದ ಪ್ರಕಾರ 6 ತಿಂಗಳು ಒಟ್ಟಿಗೆ ಇರಬೇಕು ಎಂಬ ಕಡ್ಡಾಯ ನಿಯಮವಿಲ್ಲ.

ಒಪ್ಪಿಗೆ ಕಾನೂನು ನಿಯಮದ ಪ್ರಕಾರ ವಿಚ್ಛೇದನ ನೀಡಬಹುದು ಎಂದು ಹೇಳಿದೆ. ಸುಪ್ರೀಂ ಪರಿಚ್ಛೇದ 142ರ ಅಡಿಯಲ್ಲಿ ಅಧಿಕಾರವನ್ನು ಹೊಂದಿದೆ ಎಂದು ಹೇಳಿದೆ. ಈ ಮೂಲಕ ವಿಚ್ಛೇದನ ಪಡೆಯುವ ದಂಪತಿಗಳು ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್ (Supreme Court)​ ಒಂದು ಮಹತ್ವದ ತೀರ್ಪುನ್ನು ನೀಡಿದೆ.

2014ರಲ್ಲಿ ಶಿಲ್ಪಾ ಸೈಲೇಶ್ ಸಲ್ಲಿಸಿದ್ದ ಪ್ರಮುಖ ಅರ್ಜಿ ಸೇರಿದಂತೆ ಐದು ಅರ್ಜಿಗಳ ತೀರ್ಪನ್ನು 2022ರ ಸೆಪ್ಟೆಂಬರ್ 29ರಂದು ಪೀಠ ಕಾಯ್ದಿರಿಸಿತ್ತು. ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸುವಾಗ, ಸಾಮಾಜಿಕ ಬದಲಾವಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಕಾನೂನು ತರುವುದು ಸುಲಭ, ಆದರೆ ಅದರೊಂದಿಗೆ ಸಮಾಜವನ್ನು ಬದಲಾಯಿಸಲು ಮನವೊಲಿಸುವುದು ಕಷ್ಟ ಎಂದು ಹೇಳಿತ್ತು.

ಈ ಹಿಂದಿನ ಕಾನೂನು ಪ್ರಕಾರ ವಿಚ್ಛೇದನ ಪಡೆಯುವ ದಂಪತಿಗಳು, ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದಂತೆ 6 ತಿಂಗಳು ಜತೆಗೆಯಾಗಿ ಒಂದೇ ಮನೆಯಲ್ಲಿ ಜೀವನ ನಡೆಸಬೇಕಿತ್ತು. ಇದು ಕಾನೂನಿನ ನಿಮಯದ ಜತೆಗೆ ಇಬ್ಬರ ನಡುವೆ ಒಂದು ಹೊಂದಾಣಿಕೆಯಾಗಿ ಜತೆಯಾಗಿ ಜೀವನ ನಡೆಸುತ್ತಾರೆ ಎನ್ನುವ ಕಾಳಜಿಗೆ ಈ ರೀತಿಯ ಕಾನೂನುಗಳನ್ನು ಮಾಡಿತ್ತು, ಆದರೆ ಈಗ ಒತ್ತಡದ ಆಧಾರದಲ್ಲಿ ಜೀವನ ನಡೆಸುವ ಅಗತ್ಯ ಇಲ್ಲ ಎಂದು ಆದೇಶವನ್ನು ಸುಪ್ರೀಂ ನೀಡಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುವ ಪತಿ ಮತ್ತು ಪತ್ನಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸದೆ ಪ್ರತ್ಯೇಕವಾಗಿ ವಾಸಿಸಲು ಅವಕಾಶ ನೀಡಬಹುದು ಎಂದು ನ್ಯಾಯಾಲಯ ಹೇಳಿದ್ದು, ಪರಸ್ಪರ ಒಪ್ಪಿಗೆ ಇದ್ದರೆ, ವಿಚ್ಛೇದನಕ್ಕೆ ಕಡ್ಡಾಯವಾಗಿ 6 ​​ತಿಂಗಳ ಕಾಯುವ ಅವಶ್ಯಕತೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನ ಪೀಠ ತಿಳಿಸಿದೆ.

ಇದನ್ನೂ ಓದಿ: ಬ್ರಹ್ಮಚಾರಿಯೊಂದಿಗೆ 10 ಮಕ್ಕಳ ತಾಯಿ ಪರಾರಿ! ಮಕ್ಕಳ ಮೋಹಕ್ಕೆ ವಾಪಸ್ ಬಂದಾಗ ಗ್ರಾಮದಲ್ಲಿ ನಡೆದಿತ್ತು ಅಚ್ಚರಿ !

Leave A Reply

Your email address will not be published.