Dr Rajkumar: ಶಿವರಾಜ್ ಕುಮಾರ್-ಗೀತಾ ಮದುವೆಗೆ ಅಣ್ಣಾವ್ರು ಒಪ್ಪಿರಲಿಲ್ಲ, ಹಾಗಾದ್ರೆ ಮದ್ವೆ ಮಾಡಿದ್ದು ಯಾರು ?!

Dr Rajkumar: ದೊಡ್ಮನೆಯ ಸಂಸಾರ ಒಂದು ಆನಂದ ಸಾಗರ ಎಂದರೆ ತಪ್ಪಾಗಲಾರದು. ಒಬ್ಬರಿಗೊಬ್ಬರು ಹೆಗಲು ನೀಡಿ ಆತ್ಮೀಯ ಭಾವನೆ ಇರಿಸಿಕೊಂಡವರಾಗಿದ್ದಾರೆ. ಸದ್ಯ ಶಿವರಾಜ್​ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಜೋಡಿಯ ಮದುವೆ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಒಂದು ಇಲ್ಲಿದೆ.

 

ಶಿವರಾಜ್​ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಒಬ್ಬರೊನ್ನೊಬ್ಬರು ಬೆಂಬಲಿಸಿಕೊಂಡು ಬಹುವರ್ಷಗಳಿಂದಲೂ ದಾಂಪತ್ಯ ಸಾಗಿಸಿಕೊಂಡು ಬರುತ್ತಿದ್ದಾರೆ. ಆದರೆ ಶಿವರಾಜ್ ಕುಮಾರ್ ಅವರು ಗೀತಾ ಅವರನ್ನು ವಿವಾಹವಾಗುವುದು ಡಾ ರಾಜ್​ಕುಮಾರ್ (Dr Rajkumar) ಅವರಿಗೆ ಇಷ್ಟವಿರಲಿಲ್ಲವಂತೆ, ಕಾರಣ ಏನಿರಬಹುದು ಎಂಬ ದೊಡ್ಡ ಪ್ರಶ್ನೆ ನಿಮ್ಮಲ್ಲಿ ಇರಬಹುದು.

ದೊಡ್ಮನೆಯ ಆಪ್ತ ಬಂಧು, ಪಾರ್ವತಮ್ಮ ರಾಜ್​ಕುಮಾರ್ ಅವರ ಸಹೋದರ, ನಿರ್ಮಾಪಕ ಚಿನ್ನೇಗೌಡರು ಪ್ರಕಾರ ” ಗೀತಾ ಅವರನ್ನು ಶಿವರಾಜ್ ಕುಮಾರ್ ಅವರಿಗೆ ತಂದುಕೋಬೇಕು ಎಂದು ಮೊದಲು ಸಲಹೆ ಕೊಟ್ಟಿದ್ದು ನಾನೇ, ಆದರೆ ಭಾವ (ಡಾ ರಾಜ್​ಕುಮಾರ್) ಚಿನ್ನಪ್ಪ ಯಾಕಪ್ಪ ನಮಗೆ ರಾಜಕೀಯದವರ ಸಹವಾಸ, ಬೇಡ ಎಂದು ಬಿಟ್ಟರು.

ಆದರೆ ಒಂದು ಕಾಲದಲ್ಲಿ ನಾನು ಅಕ್ಕ (ಪಾರ್ವತಮ್ಮ ರಾಜ್​ಕುಮಾರ್) ಕಲಾವಿದರ ಸಂಘ ಕಟ್ಟಲು ಬಂಗಾರಪ್ಪನವರ ಮನೆಗೆ ಹೋಗಿ ಸಹಾಯ ಪಡೆದಿದ್ದೆವು. ಆಗ ಅಕ್ಕನ ಬಳಿಯೂ ಪೀಠಿಕೆ ಹಾಕಿ, ಬಂಗಾರಪ್ಪನವರ ಮಡದಿ ಶಾಕುಂತಲಮ್ಮ ಅವರು ಸಾಧ್ವಿ ಅವರ ಕೈಯಲ್ಲಿ ಬೆಳೆದ ಮಗಳು ಗೀತಾ ಅವರನ್ನು ಸೊಸೆ ಮಾಡಿಕೊಳ್ಳೋಣ ಎಂದೆ ಸರಿ ಎಂದಿದ್ದರು. ಆದರೆ ಆಗಲೂ ಭಾವ ಒಪ್ಪಿರಲಿಲ್ಲ” ಎಂದು ಚಿನ್ನೇಗೌಡರು ಹಳೆಯ ಸಂಗತಿ ಮೆಲುಕು ಹಾಕಿದರು.

ಗೀತಾ ಶಿವರಾಜ್ ಕುಮಾರ್ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರ ಪುತ್ರಿಯಾಗಿದ್ದಾರೆ. ಇಲ್ಲಿದೆ ನೋಡಿ ಟ್ವಿಸ್ಟ್! ಹೌದು, ಯಾವುದೋ ಕಾರ್ಯಕ್ರಮದ ನಿಮಿತ್ತ, ಬಂಗಾರಪ್ಪನವರು ರಾಜ್​ಕುಮಾರ್ ಅವರನ್ನು ಮನೆಗೆ ಆಹ್ವಾನಿಸಿದರು.

ಆ ಸಮಯದಲ್ಲಿ ಬೆಂಗಳೂರಿಗೆ ಶಿಫ್ಟ್ ಆಗಿದ್ದ ನಾವೆಲ್ಲ ಅಂದರೆ, ನಾನು, ಭಾವ, ಅಕ್ಕ, ವರದ ಮಾಮ ಎಲ್ಲರೂ ಊಟಕ್ಕೆ ಹೋದೆವು. ಅಲ್ಲಿ ಶಾಕುಂತಲಮ್ಮನವರನ್ನು ಕಂಡು ಭಾವನವರು ಬಹಳ ಪ್ರಭಾವಿತರಾದರು. ಅವರ ಗುಣ, ಮಾತು ಕೇಳಿ ಭಾವನವರಿಗೆ ಬಹಳ ಮೆಚ್ಚುಗೆಯಾಯ್ತು, ರಾಜಕಾರಣಿಗಳ ಮಡದಿಯೇನಾ ಇವರು ಎನಿಸಿತ್ತು, ಅಲ್ಲಿಯೇ ರಾಜ್​ಕುಮಾರ್ ಅವರು ಮೊದಲಿಗೆ ಗೀತಾ ಅವರನ್ನು ಕಂಡಿದ್ದರು.

ಆ ಭೇಟಿ ಬಳಿಕ ಮತ್ತೆ ನಾನು ಗೀತಾ ಅವರನ್ನು ಶಿವರಾಜ್ ಕುಮಾರ್ ಅವರಿಗೆ ತಂದುಕೊಳ್ಳುವ ಪ್ರಸ್ತಾಪ ಮಾಡಿದೆ. ಶಾಕುಂತಲಮ್ಮನವರಂಥಹಾ ಗೃಹಿಣಿ ಕೈಯಲ್ಲಿ ಬೆಳೆದ ಮಕ್ಕಳು, ಇವರೂ ಸಹ ಅವರಂತೆಯೇ ಎಂದು ಹೇಳಿದೆ ಆಗ ರಾಜ್​ಕುಮಾರ್ ಅವರು ಒಪ್ಪಿ, ಸರಿ ಹಾಗಿದ್ದರೆ ಮದುವೆ ಮಾಡಿಸೋಣ ಎಂದರು.

ಅಂತೆಯೇ ಮದುವೆ ಮಾತುಕತೆ ಆಗಿ ಎರಡೂ ಕುಟುಂಬವರು ಒಪ್ಪಿ ಅದ್ಧೂರಿಯಾಗಿ ಅರಮನೆ ಮೈದಾನದಲ್ಲಿ ಮದುವೆ ಆಯಿತು, ಆದರೆ ಅಷ್ಟು ಜನರನ್ನು ನಾನು ಎಂದೂ ನೋಡಿರಲಿಲ್ಲ. ಬಂಗಾರಪ್ಪನವರ ಅಭಿಮಾನಿಗಳು, ರಾಜ್​ಕುಮಾರ್ ಅವರ ಅಭಿಮಾನಿಗಳು ಒಟ್ಟಾಗಿ ಮದುವೆಗೆ ಬಂದಿದ್ದರು. ಒಟ್ಟಿನಲ್ಲಿ ರಾಜ್​ಕುಮಾರ್ ಹಾಗೂ ಬಂಗಾರಪ್ಪನವರು ಬೀಗರಾದರು.

ಆದರೆ ಬಂಗಾರಪ್ಪನವರು ರಾಜ್​ಕುಮಾರ್ ಅವರ ಬಳಿ ರಾಜಕೀಯ ಮಾತನಾಡುತ್ತಿರಲಿಲ್ಲ, ರಾಜ್​ಕುಮಾರ್ ಅವರಿಗೆ ಅದು ಇಷ್ಟವಿಲ್ಲ ಎಂದು ಅವರಿಗೆ ಗೊತ್ತಿತ್ತು, ಮಾತ್ರವಲ್ಲ ರಾಜ್​ಕುಮಾರ್ ಅವರನ್ನು ಎಂದಿಗೂ ರಾಜಕೀಯಕ್ಕೆ ಬಂಗಾರಪ್ಪನವರು ಆಹ್ವಾನಿಸಲೂ ಇಲ್ಲ ಎಂದು ಚಿನ್ನೇಗೌಡರು ಹಲವಾರು ವರ್ಷಗಳ ಹಿಂದಿನ ದೊಡ್ಮನೆ ಕುಟುಂಬದ ಸ್ವಾರಸ್ಯಕರ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Daily Horoscope 30/04/2023: ಇಂದು ಈ ರಾಶಿಯವರಿಗೆ ಆಕಸ್ಮಿಕ ಹಣದ ಪ್ರಾಪ್ತಿಯಾಗಲಿದೆ!

Leave A Reply

Your email address will not be published.