Rashmika Mandanna Earning: ರಶ್ಮಿಕಾ ಮಂದಣ್ಣ ಒಂದು ದಿನದ ಗಳಿಕೆ ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ !

Rashmika Mandanna Earning: ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದು ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್ ಕ್ರಶ್ ಎಂದು ಫೇಮಸ್ ಆಗಿರುವ ರಶ್ಮಿಕಾ, ಸದ್ಯ ಸಕ್ಸಸ್ಗಳ ಅಲೆಯಲ್ಲಿ ತೇಲುತ್ತಿದ್ದಾರೆ. ಚಲೋ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಟ್ಟು, ತಮ್ಮ ಟ್ಯಾಲೆಂಟ್‌ ಮತ್ತು ಬ್ಯೂಟಿ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ.

 

ರಶ್ಮಿಕಾ ಮಂದಣ್ಣ ನಟಿ ಏನೇ ಮಾತಾಡಿದ್ರೂ ಸುದ್ದಿಯಾಗುತ್ತೆ, ಸನ್ನೆ ಮಾಡಿದ್ರೆ ವಿವಾದವೇ ಸೃಷ್ಟಿಯಾಗುತ್ತೆ. ಅಷ್ಟೇ ಯಾಕೆ ಆಗಾಗ ಜನರ ಬಾಯಿಯಲ್ಲಿ ಚುಯಿಂಗಮ್ ಆಗಿ ಟ್ರೊಲ್ ಆಗುವುದರಲ್ಲಿ ಟಾಪ್ ಲಿಸ್ಟ್ನಲ್ಲಿ ಕೂಡ ಇದ್ದಾರೆ. 2020ರಲ್ಲಿ ಗೂಗಲ್‌ ಇಂಡಿಯಾ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡ ಬೆಡಗಿಗೆ ಸಿನಿಮಾ ಆಫರ್ ಗಳು ಒಂದರ ಮೇಲೊಂದು ಬರುತ್ತಿದ್ದು, ಟಾಲಿವುಡ್, ಕಾಲಿವುಡ್, ಬಾಲಿವುಡ್ನಲ್ಲಿ ತನ್ನ ನಟನೆಯ ಖದರ್ ಮೂಲಕ ಸಖತ್ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗಿದ್ದು ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಹಾಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಆದಾಯ (Rashmika Mandanna Earning) ಎಷ್ಟು ಗೊತ್ತಾ?

Rashmika Mandanna Earning
Image source: indiatvnews. com

 

ಚೆಲುವೆ ರಶ್ಮಿಕಾ ಮಂದಣ್ಣ ಪುಷ್ಪ ಚಿತ್ರದ ಮೂಲಕ ದೊಡ್ಡ ನೇಮ್ ಫೇಮ್ ಪಡೆದುಕೊಂಡ ಬಳಿಕ ಬಾಲಿವುಡ್ ಸಿನಿಮಾಗಳಲ್ಲಿ ಚಾನ್ಸ್ ದೊರೆತು ಅಲ್ಲಿಯೂ ಫುಲ್ ಬ್ಯುಸಿ ಆಗಿದ್ದಾರೆ. ಸ್ಯಾಂಡಲ್​ವುಡ್ ಮೂಲಕ ಸಿನಿಮಾ ವೃತ್ತಿ ಗೆ ಎಂಟ್ರಿ ಕೊಟ್ಟು ನಟನೆಯಲ್ಲಿ ಸೈ ಎನಿಸಿಕೊಂಡು ರಾತ್ರೋ ರಾತ್ರಿ ಫುಲ್ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಗೀತಾ ಗೋವಿದಂ ಜೊತೆಗೆ ಅನೇಕ ತೆಲುಗು ಸಿನಿಮಾದಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ಶ್ರೀವಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸಿದ ಮೇಲೆ ಅದೃಷ್ಟ ಲಕ್ಷ್ಮಿ ಅರಸಿಕೊಂಡು ಬಂದು, ಬಾಲಿವುಡ್ ಗೂ ಕೂಡ ಹಾರಿ ಅಲ್ಲಿಯೂ ತನ್ನ ಛಾಪು ಮೂಡಿಸಲು ಅಣಿಯಾಗಿದ್ದಾರೆ.

ಸತತ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಒಂದು ಚಿತ್ರಕ್ಕೆ ರಶ್ಮಿಕಾ ಸರಿ ಸುಮಾರು 4 ಕೋಟಿ ಸಂಭಾವನೆ ಗಳಿಸುತ್ತಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಕೆಲ ವರದಿಯ ಅನುಸಾರ, ರಶ್ಮಿಕಾ ಅವರ ಆಸ್ತಿ ಮೌಲ್ಯ 64 ಕೋಟಿ ಇದೆ ಎನ್ನಲಾಗಿದೆ.

ನ್ಯಾಶನಲ್ ಕ್ರಷ್ ಒಂದು ಸಿನಿಮಾಕ್ಕೆ ಬರೋಬ್ಬರಿ 4ಕೋಟಿ ಸಂಭಾವನೆ ಪಡೆದರೆ ಒಂದು ವರ್ಷಕ್ಕೆ ಕಡಿಮೆ ಎಂದು ಪರಿಗಣಿಸಿದರು 4 ಸಿನಿಮಾ ಮಾಡೋದು ಪಕ್ಕಾ! ಹೀಗಿದ್ದಾಗ, ಅಂದಾಜಿಗೆ 4 ಸಿನಿಮಾಗೆ ಒಂದು ವರ್ಷಕ್ಕೆ 16ಕೋಟಿ ಪಡೆದ ಹಾಗಾಯಿತು! ಇನ್ನು ಒಂದು ತಿಂಗಳಿಗೆ ಲೆಕ್ಕಾಚಾರ ಮಾಡಿದರೆ, ಸರಿ ಸುಮಾರು 1.33 ಕೋಟಿ ಕೇವಲ ಸಿನಿಮಾ ಮೂಲಕ ಪಡೆಯುವ ಸಂಭಾವನೆ. ಇದನ್ನು ಹೊರತುಪಡಿಸಿ, ಇತ್ತೀಚಿನ ಅದೆಷ್ಟೋ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ , ಸೋಷಿಯಲ್ ಮೀಡಿಯಾದಲ್ಲಿ ಇನ್ಸ್ತ ಗ್ರಾಂ, ಟ್ವಿಟ್ಟರ್ ಇತ್ಯಾದಿಗಳ ಮೂಲಕ ಹೆಚ್ಚು ಗಳಿಕೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆಯೂ ಆಗಾಗ ಟ್ರೊಲ್ ಆಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಬೆಡಗಿ ಯಾರೇನೇ ಅಂದರೂ ನನಗೆ ಸಂಬಂಧಿಸಿದಲ್ಲ ಎಂಬಂತೆ ಟ್ರೊಲ್ ಮಾಡುವವರ ನಡುವೆ ಅದೆಷ್ಟೋ ಅಭಿಮಾನಿಗಳ ಪ್ರೀತಿಗೆ ಭಾಜನರಾಗಿ ಫುಲ್ ಖುಷ್ ಆಗಿ ದಿನ ಕಳೆಯುತ್ತಿದ್ದಾರೆ. ಇನ್ನು ಇವರ ಅಭಿಮಾನಿಗಳು ನಟಿಯ ಮುಂದಿನ ಸಿನಿಮಾ ನೋಡಲು ಕಾತುರರಾಗಿ ಎದುರು ನೋಡುತ್ತಿದ್ದಾರೆ.

 

ಇದನ್ನು ಓದಿ: Post Office Scheme: ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ! 

Leave A Reply

Your email address will not be published.