Health Benefits of Hugging: ತಬ್ಬಿಕೊಂಡರೆ ಬಾಂಧವ್ಯ ಗಟ್ಟಿಗೊಳ್ಳುವುದರ ಜೊತೆಗೆ ಸಿಗುತ್ತೆ ಅನೇಕ ರೋಗಗಳಿಗೆ ಮದ್ದು!!

Hugging Benefits : ವಿಶೇಷ ಸಂಗತಿಯೆಂದರೆ ಆತ್ಮೀಯ ಅಪ್ಪುಗೆ ಅನೇಕ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಬಲ್ಲದು (Hugging Benefits) ಎಂಬುದನ್ನು ನೀವು ಬಲ್ಲಿರಾ? ಹೌದು, ಯಾವುದೇ ವ್ಯಕ್ತಿ ಭಾವನಾತ್ಮಕ ಬೆಂಬಲ ಪಡೆಯಲು ಬಯಸುತ್ತಾನೆ. ಅಂತಹ ಭಾವನಾತ್ಮಕ ಬೆಂಬಲಗಳಲ್ಲಿ ಆತ್ಮವಿಶ್ವಾಸ ಹುಟ್ಟಿಸುವ ಅಪ್ಪುಗೆ ಒಂದಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸುವ ರೀತಿಯೇ ಅಪ್ಪುಗೆ ಆಗಿದೆ. ಸಂಶೋಧನೆಯಲ್ಲೂ ಸಹ ಅಪ್ಪುಗೆಯಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಅನ್ನೋದು ಸಾಬೀತಾಗಿದೆ.

ಯಾರಾದರೂ ಒಬ್ಬರನ್ನೊಬ್ಬರು ತಬ್ಬಿಕೊಂಡರೆ, ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಪ್ಪಿಕೊಳ್ಳುವುದರಿಂದ ಮೆದುಳಿನ ಕಾರ್ಯ ಹೆಚ್ಚುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಪರಿಣಾಮವು ನಮ್ಮ ಮೇಲಾಗುತ್ತದೆ.

ಅದಲ್ಲದೆ ಅಪ್ಪುಗೆಯಿಂದ ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಅಪ್ಪುಗೆಯು ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ಸಹ ಕೊನೆಗೊಳಿಸುತ್ತದೆ. ಮೆದುಳಿನ ಭಾಗವು ಅಪ್ಪುಗೆಯ ನಂತರ ಹೈಪರ್ ಆ್ಯಕ್ಟಿವ್ ಆಗುತ್ತದೆ. ಇದು ಒತ್ತಡದ ಭಾವನೆಗಳನ್ನು ಸಂತೋಷದ ಭಾವನೆಗಳಾಗಿ ಪರಿವರ್ತಿಸುತ್ತದೆ.

ಜರ್ನಲ್ ಆಫ್ ಸೈಕಲಾಜಿಕಲ್ ಸೈನ್ಸ್ 400 ಜನರನ್ನು ಅಧ್ಯಯನಕ್ಕೆ ಒಳಪಡಿಸಿ ದೈನಂದಿನ ಅಪ್ಪುಗೆಗಳು ರೋಗಗಳ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ ಎಂಬುದು ಸಾಬೀತು ಮಾಡಿದೆ.

ಅಪ್ಪುಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಪ್ಪುಗೆಯಿಂದ ಹೃದಯ ಬಡಿತ ನಿಯಂತ್ರಣ ಸಾಧ್ಯ. ಕೇವಲ 20 ಸೆಕೆಂಡುಗಳ ಕಾಲ ಅಪ್ಪಿಕೊಳ್ಳುವುದರಿಂದ ರಕ್ತದೊತ್ತಡ ಸರಿಯಾದ ಮಟ್ಟಕ್ಕೆ ಬರುತ್ತದೆ ಎಂಬುದು ಸಾಬೀತಾಗಿದೆ. ಈ ಕಾರಣದಿಂದಾಗಿ ಹೃದಯದ ಆರೋಗ್ಯವು ಸುಧಾರಿಸುತ್ತದೆ.

ಅಪ್ಪುಗೆಯಿಂದ ದೇಹದಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಕಡಿಮೆಗೊಳಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡದ ಹಾರ್ಮೋನುಗಳ ಪ್ರಮಾಣ ಕಡಿಮೆಯಾಗಲು ಆಕ್ಸಿಟೋಸಿನ್ ಹಾರ್ಮೋನ್ ನೆರವಾಗುತ್ತದೆ. ಅಲ್ಲದೇ, ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಡೋಪಮೈನ್ ಒಂದು ರಾಸಾಯನಿಕ ಸಂದೇಶವಾಹಕವಾಗಿದ್ದು ಅದು ಮೆದುಳನ್ನು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಹೆಚ್ಚಿನ ಸಂಖ್ಯೆಯ ಡೋಪಮೈನ್ ರಾಸಾಯನಿಕವನ್ನು ಬಲವಂತವಾಗಿ ಬಿಡುಗಡೆ ಮಾಡಿದಾಗ, ಸಂತೋಷ ಮತ್ತು ವಿಶ್ರಾಂತಿಯಂತಹ ಅನೇಕ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಇದು ವ್ಯಕ್ತಿಗೆ ಆತ್ಮ ತೃಪ್ತಿಯನ್ನು ನೀಡುತ್ತದೆ.

ಅಪ್ಪುಗೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ಕೇಂದ್ರ ನರ ಮಂಡಲ ವ್ಯವಸ್ಥೆಯಲ್ಲಿ ಅಪ್ಪುಗೆ ಪ್ರಕ್ರಿಯೆಯಾಗುವುದರಿಂದ ಮಾನವನ ಮನಸ್ಸಿನ ಮೇಲೆ ನೇರ ಪರಿಣಾಮ ಬೀರಿ , ಸಂತೋಷವನ್ನುಂಟು ಮಾಡುತ್ತದೆ.

ಮುಖ್ಯವಾಗಿ ನಿಮಗೆ ಸಾಕಷ್ಟು ಆತ್ಮವಿಶ್ವಾಸದ ಅಗತ್ಯವಿರುವಾಗ ಮತ್ತು ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತಿರುವ ಸಮಯದಲ್ಲಿ, ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳಬೇಕು, ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ: KSRTC And BMTC Bus Service : BMTC, KSRTC ಬಸ್ ಸೇವೆ 9 ದಿನಗಳ ಕಾಲ ವ್ಯತ್ಯಯ ಸಾಧ್ಯತೆ!

Leave A Reply

Your email address will not be published.