Bank Customers: ಈ ಬ್ಯಾಂಕ್‌ನ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಸಲು ಎರಡು ಹೊಸ ಯೋಜನೆ ಪರಿಚಯಿಸಿದ ದೊಡ್ಡ ಬ್ಯಾಂಕ್‌!!!

Bank Customers: ಸಾರ್ವಜನಿಕ ವಲಯದ ಪಂಜಾಬ್ (Punjab National Bank) ಮತ್ತು ಸಿಂಧ್ ಬ್ಯಾಂಕ್ ಗ್ರಾಹಕರಿಗೆ (Bank Customers) ಸಿಹಿ ಸುದ್ದಿ ಇಲ್ಲಿದೆ. ಹೌದು, ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಸಲು ಈ ಬ್ಯಾಂಕ್ ಎರಡು ಹೊಸ ಎಫ್‌ಡಿ ಯೋಜನೆಗಳನ್ನು ಪರಿಚಯಿಸಿದೆ.

ಈ ಯೋಜನೆಗಳನ್ನು 400 ದಿನಗಳು ಮತ್ತು 601 ದಿನಗಳ ಅವಧಿಯೊಂದಿಗೆ ಪ್ರಾರಂಭಿಸಲಾಗಿದ್ದು, ಈ ಯೋಜನೆಗಳು ಸೀಮಿತ ಅವಧಿಗೆ ಮಾತ್ರ ಇದ್ದು, ಜೂನ್ 30 ರವರೆಗೆ ಲಭ್ಯವಿದೆ. ಹೊಸ ಬಡ್ಡಿದರಗಳು ಏಪ್ರಿಲ್ 20 ರಿಂದ ಜಾರಿಗೆ ಬಂದಿವೆ ಎನ್ನಲಾಗಿದ್ದು, ಬ್ಯಾಂಕ್ ಸ್ಥಿರ ಠೇವಣಿ ದರಗಳ ಬಗೆಗಿನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಬ್ಯಾಂಕ್ ಸ್ಥಿರ ಠೇವಣಿ ದರಗಳು (FD intrest rates):
• 7 ದಿನಗಳಿಂದ 30 ದಿನಗಳ ಸ್ಥಿರ ಠೇವಣಿಗಳ ಮೇಲೆ, ಬಡ್ಡಿ ದರವು 2.8 ಶೇಕಡಾ ಇದೆ.
• 31 ದಿನಗಳಿಂದ 45 ದಿನಗಳವರೆಗೆ FD ಗಳ ಮೇಲಿನ ಬಡ್ಡಿ ದರವು 3 ಶೇಕಡಾ ಇದೆ.
• 46 ದಿನಗಳಿಂದ 90 ದಿನಗಳವರೆಗೆ ದರ 4.6 ಶೇ. ಇರುತ್ತದೆ.
• 91 ದಿನಗಳಿಂದ 179 ದಿನಗಳ ಬಡ್ಡಿ ದರವು 4.75 ಶೇ.ಇದೆ.
• 180 ದಿನಗಳಿಂದ 364 ದಿನಗಳವರೆಗೆ 6 ಪ್ರತಿಶತ FD ಗಳ ಮೇಲಿನ ಬಡ್ಡಿದರ ಇರಲಿದೆ.
• 365ಯಿಂದ 399 ದಿನಗಳ ದರ 6.4 ಶೇಕಡಾ. ಆಗಿರಲಿದೆ.
• 400 ದಿನಗಳ ದರವು 7.1 ಶೇಕಡಾ. ಇರಲಿದೆ.
• 401 ದಿನಗಳಿಂದ 554 ದಿನಗಳವರೆಗೆ 6.4 ಪ್ರತಿಶತದಷ್ಟು.
• 555 ದಿನಗಳ ದರವು 7.35 ಶೇಕಡಾ.
• 556 ದಿನಗಳಿಂದ 600 ದಿನಗಳವರೆಗೆ ದರವು 6.4 ಶೇಕಡಾ. ಇರಲಿದೆ.
• 601 ದಿನಗಳ ಬಡ್ಡಿ ದರವು 7 ಶೇ.
• 602 ದಿನಗಳಿಂದ 2 ವರ್ಷಗಳ ಅವಧಿಯ FD ಗಳ ಮೇಲಿನ ಬಡ್ಡಿ ದರವು 6.4 ಇರಲಿದೆ.
• 2 ರಿಂದ 3 ವರ್ಷಗಳ ದರವು 6.25 ಪ್ರತಿಶತ.
• ಮೂರರಿಂದ ಐದು ವರ್ಷಗಳ ಹಾಗೂ ಐದರಿಂದ ಹತ್ತು ವರ್ಷಗಳ FD ಗಳ ಮೇಲಿನ ಬಡ್ಡಿ ದರವು 6.25 ಇರಲಿದೆ.

ಇದನ್ನೂ ಓದಿ: DELED Exam 2023 : ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆಗೆ ಅರ್ಜಿ ಆಹ್ವಾನ! ವೇಳಾಪಟ್ಟಿ ಸೇರಿ ಸಂಪೂರ್ಣ ವಿವರ ಇಲ್ಲಿದೆ

Leave A Reply

Your email address will not be published.