Upasana Ram Charan: ಮೆಗಾ ಸ್ಟಾರ್‌ ಸೊಸೆ ತನ್ನ ಬೇಬಿ ಶವರ್‌ ಪಾರ್ಟಿಯಲ್ಲಿ ತೊಟ್ಟ ಡ್ರೆಸ್‌ ಬೆಲೆ ಕೇಳಿದರೆ ಖಂಡಿತಾ ಶಾಕ್‌ ಆಗ್ತೀರ!

Share the Article

Upasana-Ram Charan: ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, 10 ವರ್ಷಗಳ ಬಳಿಕ ಟಾಲಿವುಡ್ ದಂಪತಿ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ (Upasana-Ram Charan) ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಜೊತೆಗೆ ಆಸ್ಕರ್ ಗೆದ್ದಿರುವ ಸಡಗರ ಕೂಡಾ ರಾಮ್ ಚರಣ್‌ ಮನೆಯಲ್ಲಿ ಸಂಭ್ರಮ ದುಪ್ಪಟ್ಟಾಗಿಸಿದೆ.

ಇನ್ನು ಕೆಲವೇ ತಿಂಗಳಲ್ಲಿ ಉಪಾಸನಾ ಅವರಿಗೆ ಹೆರಿಗೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮೆಗಾ ಫ್ಯಾಮಿಲಿ ಉಪಾಸನಾ ಸೀಮಂತ ಕಾರ್ಯವನ್ನು ಅದ್ಧೂರಿಯಾಗಿ ಆಚರಿಸಿದೆ. ಸದ್ಯ ಹೈದ್ರಾಬಾದ್‌ನಲ್ಲಿ ನಡೆದ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮದಲ್ಲಿ ಉಪಾಸನಾ ಪಿಂಕ್‌ ಬಣ್ಣದ ಡ್ರೆಸ್‌ ಧರಿಸಿ ಮುದ್ದಾಗಿ ಕಾಣುತ್ತಿದ್ದರು.

ಉಪಾಸನಾ ಬೇಬಿ ಶವರ್ ಪಾರ್ಟಿಯಲ್ಲಿ ಜನಪ್ರಿಯ ಗಾಯಕಿ ಕನಿಕಾ ಕಪೂರ್, ಸಾನಿಯಾ ಮಿರ್ಜಾ ಮತ್ತು ನಟ ಅಲ್ಲು ಅರ್ಜುನ್ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಚಿರಂಜೀವಿ ಪುತ್ರಿಯರು, ಮೊಮ್ಮಕ್ಕಳು ಹಾಗೂ ರಾಮ್ ಚರಣ್ ಭಾಗವಹಿಸಿದ್ದರು.

ಈಗಾಗಲೇ ಟಾಲಿವುಡ್ ನಟ ರಾಮ್ ಚರಣ್ ಪತ್ನಿ ಉಪಾಸನಾ ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳಾಗಿ ತನ್ನದೆ ಹೆಸರು ಮಾಡಿದ್ದಾರೆ. ಈ ಮೆಗಾ ಸ್ಟಾರ್ ಸೊಸೆ ಉಪಾಸನಾ ಸಾಮಾಜಿಕ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ.

ವಿಶೇಷವೆಂದರೆ ಇದೀಗ ಉಪಾಸನಾ ಧರಿಸಿರುವ ಪಿಂಕ್‌ ಬಣ್ಣದ ಡ್ರೆಸ್‌ ಬೆಲೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು, ಉಪಾಸನಾ ಕಾಮಿನೇನಿಯವರ ಗುಲಾಬಿ ಮಾದರಿಯ ಉಡುಗೆಯು ಆಳವಾದ ವಿ-ಕುತ್ತಿಗೆ ಮತ್ತು ಸಣ್ಣ ಆರಾಮದಾಯಕವಾದ ತೋಳುಗಳ ಜೊತೆಗೆ ಕನಿಷ್ಠ ಅಲಂಕಾರಗಳನ್ನು ಒಳಗೊಂಡಿತ್ತು. ಕೆಲವು ಸಂಶೋಧನೆಗಳನ್ನು ಮಾಡಿದ ನಂತರ, ಉಡುಗೆ ಬ್ರ್ಯಾಂಡ್, ಸೂಜಿ ಮತ್ತು ಥ್ರೆಡ್‌ನಿಂದ ಬಂದಿದೆ ಮತ್ತು ಉಡುಗೆಯ ಬೆಲೆ USD, 1102, ಇದು ಭಾರತೀಯ ಕರೆನ್ಸಿಗೆ ಪರಿವರ್ತಿಸಿದ ನಂತರ ಮತ್ತು ಆಮದು ಸುಂಕಗಳನ್ನು ಸೇರಿಸಿದ ನಂತರ ರೂ. 90,471 ರೂ ಆಗಿದೆ.

 

ಇದನ್ನು ಓದಿ: Weekend With Ramesh:ಈ ವಾರ ಸಾಧಕರ ಸೀಟನ್ನು ಅಲಂಕರಿಸಲು ಬರಲಿದ್ದಾರೆ ಈ ಗ್ರೇಟ್ ಅತಿಥಿಗಳು! 

Leave A Reply