Gardening Tips: ಬೇಸಿಗೆಯಲ್ಲಿ ಗಿಡಗಳು ಬಾಡಿಹೋಗದಿರಲು ಈ ರೀತಿ ಆರೈಕೆ ಮಾಡಿ!!

Gardening Tips: ಬಿಸಿಲ ಬೇಗೆ ಹೆಚ್ಚಿದೆ. ಭೂಮಿ ಬಸಿಲ ತಾಪಕ್ಕೆ ಬರಡಾಗಿದೆ. ಹಾಗಿರಬೇಕಾದರೆ, ಸಸ್ಯಗಳ ಬಗ್ಗೆ ಹೇಳಬೇಕಿಲ್ಲ. ಎಲ್ಲದರ ಮುಖವೂ ಬಾಡಿ ಹೋಗಿದೆ. ಆದರೆ, ಇಂದು ಮಳೆರಾಯನ ಆಗಮನವಾಗಿದೆ. ಸಣ್ಣಗೆ ಭೂಮಿಗೆ ತಂಪೆರೆದಿದೆ. ಅದರಲ್ಲೂ ಬೇಸಿಗೆ, ಬಿಸಿಲ ಸಮಯದಲ್ಲಿ ತೋಟಗಾರಿಕೆ, ಗಿಡಗಳ ಆರೈಕೆ ಮಾಡುವವರಿಗೆ ಅವುಗಳದ್ದೇ ಚಿಂತೆ. ಬಿಸಿಲಿಗೆ ಸಸ್ಯಗಳು (plants) ಬಾಡಿಹೋಗುತ್ತವೆ ಎಂದು. ಬೇಸಿಗೆಯಲ್ಲಿ ಗಿಡ ಬಾಡಿ ಹೋಗಬಾರದು ಅಂದ್ರೆ ಏನು ಮಾಡ್ಬೇಕು ಗೊತ್ತಾ? ಇಲ್ಲಿದೆ ನೋಡಿ ಟಿಪ್ಸ್ (Gardening Tips).

 

ಬೇಸಿಗೆಯಲ್ಲಿ ತಾಪಮಾನ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಗಿಡಗಳಿಗೆ ನೀರಿನ (Water) ಅವಶ್ಯಕತೆ ಹೆಚ್ಚಿರುತ್ತದೆ. ಅವುಗಳಿಗೆ ಹೆಚ್ಚೆಚ್ಚು ನೀರು ಹಾಕಿ. ಹೆಚ್ಚುವರಿ ಶಾಖ ಇದ್ದರೆ, ದಿನಕ್ಕೆ ಎರಡು ಬಾರಿ ನೀರು ಹಾಕಬೇಕು. ಜೊತೆಗೆ ಗೊಬ್ಬರ ಮತ್ತು ಕ್ಯಾಲ್ಸಿಯಂ ಅನ್ನು ಸರಿಯಾದ ಪ್ರಮಾಣದಲ್ಲಿ ನೀಡಿ.

ಎಲ್ಲಾ ಗಿಡಗಳಿಗೆ ಒಂದೇ ರೀತಿ ನೀರುಣಿಸಲು ಸಾಧ್ಯವಿಲ್ಲ. ಯಾವುದಕ್ಕೆ ಎಷ್ಟು ಬೇಕು ಅಷ್ಟೇ ನೀರು ಹಾಕಿ. ಅಲೋವೆರಾ ಗಿಡಗಳಿಗೆ ಹೋಲಿಸಿದರೆ ಗುಲಾಬಿ ಗಿಡಗಳಿಗೆ ಹೆಚ್ಚು ನೀರು ಬೇಕಾಗುತ್ತದೆ. ಹಾಗಾಗಿ ಗಿಡಗಳ ಬಗ್ಗೆ ತಿಳಿದುಕೊಂಡು ನೀರು ಹಾಕುವುದು ಉತ್ತಮ. ಇಲ್ಲವೇ ನೀರು ಹೆಚ್ಚಾಗಿಯೇ ಗಿಡಗಳಿಗೆ ದುಷ್ಪರಿಣಾಮಗಳು ಆಗುತ್ತವೆ.

ಅಲ್ಲದೆ, ನೀರು ಹಾಕುವಾಗ ಸಮಯವೂ ಮುಖ್ಯವಾಗುತ್ತದೆ. ಎಲ್ಲಾ ಸಮಯದಲ್ಲೂ ನೀರು ಹಾಕಬಾರದು. ಈ ಬೇಸಿಗೆಯಲ್ಲಿ ಸಸ್ಯಗಳಿಗೆ ನೀರು ಹಾಕಲು ಬೆಳಿಗ್ಗೆ ಅಥವಾ ಸಂಜೆ ಒಳ್ಳೆಯ ಸಮಯವಾಗಿದೆ.
ಇವುಗಳ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

ಇದನ್ನೂ ಓದಿ: Malaika Arora: ಪೋಸ್ಟ್ ಕೇವಲ ನೆಪ, ಮೈ ತೋರಿಸೋದೆ ಅನುಕ್ಷಣದ ಜಪ !

Leave A Reply

Your email address will not be published.