Actor Upendra new house: ಉಪೇಂದ್ರರ ಹೊಸ ಅರಮನೆ ಎಲ್ಲಿದೆ, ಒಳಗೆ ಇರೋ ವೈಭವ ನೋಡಿದ್ರೆ ನೀವ್ ಪಕ್ಕಾ ಶಾಕ್ !

Actor Upendra New House: ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕಬ್ಜ ಸಿನಿಮಾದ ಮೂಲಕ ಸದ್ದು ಮಾಡಿದ್ದು ಗೊತ್ತೇ ಇದೆ. ಇದೀಗ, ಹೊಸ ಮನೆ ಖರೀದಿ ಮಾಡಿರುವ ನಟ ಉಪೇಂದ್ರ(Actor Upendra New House)ರಿಚ್ ಪೀಪಲ್ ಏರಿಯಾ ಎಂಬ ಖ್ಯಾತಿ ಪಡೆದಿರುವ ಹಲವು ಸಿನಿಮಾ ಸ್ಟಾರ್​ಗಳು ಹಾಗೂ ರಾಜಕಾರಣಿಗಳು ವಾಸವಾಗಿರುವ ಬೆಂಗಳೂರಿನ ಸದಾಶಿವನಗರದಲ್ಲಿ (Sadashivanagar)ಮನೆ ಖರೀದಿಸಿದ್ದಾರೆ. ಸ್ಟಾರ್ ನಟರ ಮನೆ ಹೇಗಿದೆ? ಎಷ್ಟು ಬೆಲೆ ಬಾಳುತ್ತವೆ? ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಹಾಗೇ ಜನಸಾಮಾನ್ಯರಿಗೆ ಇರುವುದು ಸಹಜ. ಸದ್ಯ, ರಿಯಲ್ ಸ್ಟಾರ್ ಉಪೇಂದ್ರ (Real Star Upendra)ಅವರ ಹೊಸ ಮನೆಯ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

 

Actor Upendra new house

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಅಂದರೆ, 2003ರಲ್ಲಿ ಉಪೇಂದ್ರ ಕತ್ರಿಗುಪ್ಪೆಯಲ್ಲಿ ಮನೆ ನಿರ್ಮಿಸಿದ್ದರಂತೆ. ಇದೇ ಮನೆಯನ್ನು ಉಪೇಂದ್ರ ಅವರು ಆಫೀಸ್ ಹಾಗೂ ಜಿಮ್ ಎರಡನ್ನೂ ಮಾಡಿಕೊಂಡಿದ್ದರು. ತಂದೆ ತಾಯಿಯೊಂದಿಗೆ ಸಕುಟುಂಬ ಸಮೇತರಾಗಿ ವಾಸವಿದ್ದ ಉಪೇಂದ್ರ ಇದೀಗ ಬರೊಬ್ಬರಿ 20 ವರ್ಷಗಳ ಬಳಿಕ ಹೊಸ ಮನೆಗೆ ಎಂಟ್ರಿ ಕೊಡಲು ಮುಂದಾಗಿದ್ದಾರೆ.

Actor Upendra new house

 

ಕಬ್ಬಾ ಸಿನಿಮಾದ ಯಶಸ್ಸಿನ ನಡುವೆ ಉಪ್ಪಿ ಫ್ಯಾಮಿಲಿಗೆ ಡಬಲ್ ಖುಷಿ. ಉಪೇಂದ್ರ ಅವರ ಹೊಸ ಮನೆಯ ಇಂಟೀರಿಯರ್ ಡಿಸೈನ್ಗಳೆಲ್ಲವೂ ಪತ್ನಿ ಪ್ರಿಯಾಂಕ ಅವರ ಅಭಿರುಚಿಗೆ ತಕ್ಕಂತೆ ಮಾಡಿಸಲಾಗಿದೆಯಂತೆ. ಹಲವು ದಿನಗಳಿಂದ ಹೊಸ ಮನೆ ಖರೀದಿ ಮಾಡಬೇಕೆಂಬ ಪ್ಲಾನ್ ಹಾಕಿದ್ದ ಜೋಡಿಗೆ ಸದಾಶಿವ ನಗರದಲ್ಲಿ ಮನೆ ಮಾರಾಟಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಮನೆ ನೋಡಿ ಎಲ್ಲವೂ ಓಕೆ ಎಂದೆನಿಸಿ ಖರೀದಿ ಮಾಡಿದ್ದು, ಸದ್ಯ, ಉಪೇಂದ್ರ ಮನೆ ಖರೀದಿಸಿದ ಸಂಭ್ರಮದಲ್ಲಿದ್ದಾರೆ. ಈ ಮನೆಗೆ ಉಪೇಂದ್ರ ಅವರು ಬರೋಬ್ಬರಿ ಹದಿನಾರು ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Actor Upendra new house

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಉಪೇಂದ್ರ ಅವರ ಮನೆಯ ಗೃಹಪ್ರವೇಶದ ಫೋಟೋಗಳು ಹರಿದಾಡುತ್ತಿವೆ. ಮನೆಯ ಗೃಹಪ್ರವೇಶ ಕಾರ್ಯಕ್ಕೆ ಒಳ್ಳೆಯ ದಿನ ನಿಗದಿಯಾದ ಹಿನ್ನೆಲೆ (Housewarming) ದಂಪತಿಗಳಾದ ಉಪೇಂದ್ರ ಮತ್ತು ಪ್ರಿಯಾಂಕ (Priyanka Upendra) ತುಂಬಾ ಸರಳವಾಗಿ ಮನೆಯ ಗೃಹಪ್ರವೇಶ(Gruhapravesha) ಪೂಜಾ ಕಾರ್ಯ ಮಾಡಿದ್ದು, ಈ ಸಂದರ್ಭ ಕೆಲವೇ ಕೆಲವು ಆಪ್ತರು, ಉಪೇಂದ್ರ ಅವರ ಕುಟುಂಬ ಸದಸ್ಯರು ಗುರುಕಿರಣ್, ಮುರಳಿ ಶುಭ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಹೊಸ ಮನೆಯ ಕೆಲಸಗಳು ಇನ್ನೂ ಕೂಡ ಬಾಕಿಯಿರುವ ಹಿನ್ನೆಲೆ , ಕೆಲಸ ಪೂರ್ಣಗೊಂಡ ಬಳಿಕ ಉಪೇಂದ್ರ ಪರಿವಾರ ಸಮೇತ ಈ ಮನೆಗೆ ಶಿಫ್ಟ್ ಅಗಲಿದ್ದಾರೆ.

ಇದನ್ನು ಓದಿ: Sun tan: ಬಿಸಿಲಿನಲ್ಲಿ ನಿಮ್ಮ ಮುಖ ಕಪ್ಪಾಗಿದೆಯೇ? ಈ ಫೇಸ್ ಪ್ಯಾಕ್ ಗಳಲ್ಲಿ ಒಂದನ್ನು ಬಳಸಲು ಪ್ರಯತ್ನಿಸಿ. 

Leave A Reply

Your email address will not be published.