Home Breaking Entertainment News Kannada Aishwarya Bhaskaran: ನಟಿ ಐಶ್ವರ್ಯಾ’ಗೆ ರಾತ್ರಿ ಮೆಸೇಜ್ ಮಾಡಿ, ‘ ಮನೆಗೆ ಬಾ, ರಾತ್ರಿ ಸಿಗ್ತೀಯಾ...

Aishwarya Bhaskaran: ನಟಿ ಐಶ್ವರ್ಯಾ’ಗೆ ರಾತ್ರಿ ಮೆಸೇಜ್ ಮಾಡಿ, ‘ ಮನೆಗೆ ಬಾ, ರಾತ್ರಿ ಸಿಗ್ತೀಯಾ ? ಸೋಪು ಮಾಡೋಣ ‘ ಅಂದದ್ದು ಯಾರು ?!

Aishwarya Bhaskaran
Image source: Public TV

Hindu neighbor gifts plot of land

Hindu neighbour gifts land to Muslim journalist

Aishwarya Bhaskaran: ಕನ್ನಡವೂ ಸೇರಿದಂತೆ ಹಿಂದಿ ಸೇರಿದಂತೆ ದಕ್ಷಿಣದ ನಾಲ್ಕೂ ಭಾಷೆಗಳ ಒಂದು ಕಾಲದ ಸ್ಟಾರ್ ನಟಿ ಜ್ಯೂಲಿ ಲಕ್ಷ್ಮಿ (Julie Lakshmi) ಪುತ್ರಿ ಐಶ್ವರ್ಯ ಭಾಸ್ಕರನ್ (Aishwarya Bhaskaran) ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಜ್ಯೂಲಿ ಲಕ್ಷ್ಮಿಯ ಮೊದಲ ಗಂಡ ಭಾಸ್ಕರನ್ ಗೆ ಹುಟ್ಟಿದ ಮಗಳು ಐಶ್ವರ್ಯಾ ಅತ್ತ ತೀರಾ ಬಡತನದಲ್ಲಿ ಬದುಕುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. (Julie Lakshmi living)

ಎಷ್ಟೇ ಬಡವಿನೇ ಆಗಿರಲಿ, ಎಂದೂ ತನ್ನ ತಾಯಿ ಲಕ್ಷ್ಮೀ ಹತ್ತಿರ ಸಹಾಯ ಕೇಳದರೆ ಸೋಪು ಮಾರಿಕೊಂಡು ಬದುಕುತ್ತಿದ್ದಾರೆ. ಹಾಗೆ ನೋಡಿದರೆ ಆಕೆಯೂ ನಟಿಯೇ. ಆದರೆ ಈಗ ಅವಕಾಶ ಸಿಗದ ಕಾರಣ ಈ ಚಿಲ್ಲರೆ ವ್ಯಾಪಾರ. ಮನೆಯಲ್ಲೇ ಕೂತು ಕೆಮಿಕಲ್ಸ್ ಕಲಕಿ ಸೋಪು ತಯಾರಿಸುತ್ತಿದ್ದಾರೆ. ಈ ಸಂಗತಿಯನ್ನು ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಆಕೆಯೇ ಹೇಳಿಕೊಂಡಿದ್ದಾರೆ. ಕೈಯಲ್ಲಿ ಸಿನಿಮಾಗಳು ಇಲ್ಲ, ಕೆಲಸವೂ ಸಿಗುತ್ತಿಲ್ಲ. ಹಾಗಾಗಿ ಸೋಪು ಮಾರಿಕೊಂಡು ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ ಒಂದು ಕಾಲದ 8 ಫಿಲಂ ಫೇರ್ ಪ್ರಶಸ್ತಿ ಪಡೆದ ನಾಯಕಿ ಜೂಲಿ ಲಕ್ಷ್ಮಿಯವರ ಮಗಳು.

ಐಶ್ವರ್ಯ ಭಾಸ್ಕರನ್ ತನ್ನ ಯೌವನದ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಕಿರುತೆರೆಯಲ್ಲೂ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತಮಗೆ ಅವಕಾಶ ಸಿಗುತ್ತಿಲ್ಲ. ಹಾಗಾಗಿ ತಮ್ಮದೇ ಯೂಟ್ಯೂಬ್ ಮಾಡಿಕೊಂಡಿದ್ದು, ಅಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಡುಗೆಯಲ್ಲಿ ಕೂಡಾ ಆಸಕ್ತಿ ಇರುವ ಐಶ್ವರ್ಯ ಹೊಸ ಹೊಸ ಅಡುಗೆಗಳ ವಿಡಿಯೋ ಕೂಡ ಹಾಕಿ ತಮ್ಮಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಆರ್ಥಿಕ ಕಷ್ಟದ ಪರಿಸ್ಥಿತಿಯಲ್ಲಿ ತಮಗೆ ಮಧ್ಯರಾತ್ರಿ ಕೆಟ್ಟದಾಗಿ. ಮೆಸೇಜು ಬರ್ತಿದೆ ಅಂತ ಐಶ್ವರ್ಯ ಕಿಡಿಕಾರಿದ್ದಾರೆ.

ಐಶ್ವರ್ಯಾಗೆ ಮದುವೆ ಆಗಿ ಈಗ ಡೈವೋರ್ಸ್ ಆಗಿದೆ. ತಾನು ಸಿಂಗಲ್ ಆಗಿರುವ ಕಾರಣದಿಂದಾಗಿಯೇ ಕೆಲವರು ಕೆಟ್ಟ ಕೆಟ್ಟ ಮೆಸೇಜ್’ಗಳನ್ನು ಕಳುಹಿಸುತ್ತಾರಂತೆ. ಇನ್ನೂ ಕೆಲವರು ಬೇರೆಯದೆ ಆಫರ್ ಮಾಡಿದ್ದಾರೆ. ” ನೀನು ನೋಡೋಕೆ ಚೆನ್ನಾಗಿ ಇದ್ದೀಯಾ, ರಾತ್ರಿ ಸಿಗ್ತೀಯಾ ” ಎಂದು ಒಬ್ಬ ನೇರವಾಗಿ ಕೇಳಿದ್ದ. ಇನ್ನೊಬ್ಬ ಮಧ್ಯರಾತ್ರಿ ಮೆಸೇಜ್ ಮಾಡಿ, ” ಇಬ್ಬರೂ ಸೋಪು ಮಾಡೋಣ ಬಾ ” ಎಂದು ಕರೆದಿದ್ದಾನಂತೆ. ಇಂತಹ ಕಹಿ ಘಟನೆಗಳ ಬಗ್ಗೆ ಬಹಿರಂಗವಾಗಿ ಅವರು ಹೇಳಿಕೊಂಡರೂ, ಪುಂಡರ ಕಾಟ ನಿಂತಿಲ್ಲ ಎನ್ನುವುದು ಅವರ ಮಾತಿನ ಸಾರಾಂಶ.

ಅಂತಹ ಕೆಟ್ಟ ಮೆಸೇಜ್ ಮಾಡಿದವರಿಗೆ ಈಕೆ ದಿಟ್ಟ ಉತ್ತರವನ್ನೇ ನೀಡಿದ್ದಾಳೆ. ಕೆಟ್ಟದ್ದಾಗಿ ಮೆಸೇಜ್ ಮಾಡಿರುವ ವ್ಯಕ್ತಿಗೆ ಆಕೆ ಉತ್ತರಿಸಿ, ‘ಸೋಪು ಮಾರಿಕೊಂಡು ಬದುಕುತ್ತೇನೆ, ಹೊರತು ನನ್ನನ್ನು ನಾನು ಮಾರಿಕೊಳ್ಳುವುದಿಲ್ಲ’ ಎಂದು ಖಾರದ ಸಂದೇಶವನ್ನು ಅವರು ನೀಡಿದ್ದಾರೆ. ಒಂದು ಕಾಲದ ಸೆಲೆಬ್ರಿಟಿ ಮಗಳು, ಮತ್ತು ಮಾಜಿ ನಟಿ ಐಶ್ವರ್ಯ ಅವರು ಸ್ವೋದ್ಯೋಗ ಮಾಡಿ ಸ್ವಾಭಿಮಾನಿ ಬದುಕು ನಡೆಸುತ್ತಿರುವುದು ಮಾದರಿಯೇ ಸೈ.

ಇದನ್ನೂ ಓದಿ: Suicide attack threat to Modi: ರಾಜೀವ್‌ ಗಾಂಧಿಯಂತೆ ನಿಮ್ಮನ್ನೂ ಹೊಡೆಯುತ್ತೇವೆ, ಆದೇ ಗತಿ ನಿಮಗೂ ಆಗುತ್ತೆ! ಪ್ರಧಾನಿ ಮೋದಿಗೆ ಆತ್ಮಾಹುತಿ ದಾಳಿ ಬೆದರಿಕೆ!