Home Breaking Entertainment News Kannada Actress Abhinaya: ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದಾರಾ ‘ ಅಭಿನಯ’!? ಏನಿದು ಹೊಸ ವಿಷಯ? ಇಲ್ಲಿದೆ...

Actress Abhinaya: ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದಾರಾ ‘ ಅಭಿನಯ’!? ಏನಿದು ಹೊಸ ವಿಷಯ? ಇಲ್ಲಿದೆ ಸಂಪೂರ್ಣ ಮಾಹಿತಿ

Actress Abhinaya
Inage source: Kannada news 18

Hindu neighbor gifts plot of land

Hindu neighbour gifts land to Muslim journalist

Actress Abhinaya: ‘ಅನುಭವ’ (Anubhava) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಅಭಿನಯಗೆ (Actress Abhinaya) ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಎರಡು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಸುದ್ಧಿ ಭಾರೀ ಸದ್ದು ಮಾಡಿತ್ತು. ಇದೀಗ ನಟಿ ಮತ್ತೆ ಕಿರುತೆರೆಗೆ ಕಂಬ್ಯಾಕ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

1998 ರಲ್ಲಿ ನಟಿ ಅಭಿನಯ ಅವರ ಸೋದರ ಶ್ರೀನಿವಾಸ ಅವರನ್ನು ಲಕ್ಷ್ಮೀದೇವಿ ವಿವಾಹವಾಗಿದ್ದರು. ಮದುವೆಯ ಜೊತೆಗೆ 250ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೆ ಅಭಿನಯ ಮನೆಯಿಂದ ಮತ್ತೆ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದರು. ಇನ್ನಷ್ಟು ಬೇಕು ಎಂದು ಪ್ರತಿದಿನ ಕಿರುಕುಳ ನೀಡಿ, ಕೊಡದಿದ್ದಾಗ
ಲಕ್ಷ್ಮೀದೇವಿಯವರನ್ನು ಅವರ ತಾಯಿ ಮನೆಯಲ್ಲೇ ಬಿಡಲಾಗಿತ್ತು.
ಈ ಬಗ್ಗೆ 2002 ರಲ್ಲಿ ಲಕ್ಷ್ಮೀದೇವಿ ಅಭಿನಯ ಅವರ ಕುಟುಂಬದ ವಿರುದ್ಧ ದೂರು ದಾಖಲು ಮಾಡಿದ್ದರು.

ನಟಿ ಅಭಿನಯ, ಅವರ ತಾಯಿ ಜಯಮ್ಮ ಹಾಗೂ ಚೆಲುವರಾಜು ಎಂಬುವರು ವರದಕ್ಷಿಣೆ ಕಿರುಕುಳ, ಕೊಲ್ಲಲು ಯತ್ನ ಪ್ರಕರಣದಲ್ಲಿ ಅಪರಾಧಿಗಳೆಂದು ನ್ಯಾಯಾಲಯ ಕೂಡ ತೀರ್ಪು ನೀಡಿದ್ದು, ನಟಿ ಅಭಿನಯಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ನಟಿಗೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು.

ನಟಿ ಜೈಲು ಪಾಲಾಗುವ ಮುನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ದಲ್ಲಿ (Hitler Kalyana) ನಟಿಸುತ್ತಿದ್ದರು. ಅದರಲ್ಲಿ ನಾಯಕಿಯ ತಾಯಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದು. ಆದರೆ, ಪ್ರಕರಣದ ಕಾರಣ ನಟಿ ಕಿರುತೆರೆಯಿಂದ ದೂರವಾಗಿದ್ದರು. ಆದರೆ, ಇದೀಗ ನಟಿ ಕಿರುತೆರೆಗೆ ಕಂಬ್ಯಾಕ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಅಂತಯೇ ಸುಳಿವೂ ಸಿಕ್ಕಿದೆ.

ನಟಿ ಅಭಿನಯ ಪ್ರಕರಣದಿಂದ ಹೊರಬಂದು, ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ (instagram) ರೀಲ್ಸ್ ಶೇರ್ ಮಾಡಿದ್ದು, ನೆಟ್ಟಿಗರು ನಟಿ ಮತ್ತೆ ‘ಹಿಟ್ಲರ್‌ ಕಲ್ಯಾಣ’ ಧಾರಾವಾಹಿಗೆ ಮರಳಲಿ ಎಂದು ಬಯಸುತ್ತಿದ್ದಾರೆ. ಈ ದಾರವಾಹಿಯಲ್ಲಿ ನಟಿ ಉತ್ತಮವಾಗಿ ಅಭಿನಯಿಸುತ್ತಿದ್ದು, ಜನರು ನಟನೆಗೆ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Saving Scheme : ಪ್ರತಿ ತಿಂಗಳು ಪತಿ ಪತ್ನಿ ಸೇರಿ ಪಡೆಯಬಹುದು ಭರ್ಜರಿ 41 ಸಾವಿರ ರೂಪಾಯಿ!