Dakshina Kannada: ಪಿಯುಸಿಯಲ್ಲಿ ಒಟ್ಟಿಗೇ ಪಾಸಾದ ಹೋಮ್ ಗಾರ್ಡ್ ತಾಯಿ- ಮಗಳು; ಅಕ್ಷರ ಬ್ರಹ್ಮರವಿ ಬೆಳಗೆರೆ ಜೀವನ ನೆನಪಿಸಿದ ಅಮ್ಮ ಮಗಳು !
Home Guard mother-daughter : ಈ ಸಲದ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಹಾಗೂ ಪಕ್ಕದ ಕೊಡಗು ಜಿಲ್ಲೆ ತೃತೀಯ ಹೀಗೆ ಮಕ್ಕಳ ಬುದ್ದಿವಂತಿಕೆ ಮತ್ತು ಓದಿನ ಹಠ ಸಾಧನೆ ಮತ್ತು ಪ್ರವೃತ್ತಿಯಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಂಡಿದೆ. ಅದರ ಜತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪದ ಎರಡು ವಿದ್ಯಮಾನಗಳು ದ್ವಿತೀಯ ಪಿಯುಸಿ ಫಲಿತಾಂಶದ ನಂತರ ಬೆಳಕಿಗೆ ಬಂದಿದೆ.
ಒಂದೆಡೆ ಉಜಿರೆಯ SDM ಅವಳಿ ಹೆಣ್ಮಕ್ಕಳಿಬ್ಬರು ಮಾರ್ಕು ಪಡೆಯುವುದರಲ್ಲೂ ತಮ್ಮ ಅವಳಿ ಜವಳಿತನ ತೋರಿಸಿದ್ದಾರೆ. ಇಬ್ಬರೂ ಸಮಾನ ಅಂಕಗಳಿಸಿ (594/600) ರಾಜ್ಯದಲ್ಲಿ ಗಮನ ಸೆಳೆದರೆ ಈಗ ತಾಯಿ ಮಗಳಿಬ್ಬರು ಹೊಸದೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ತಾಯಿ ಮಗಳಿಬ್ಬರೂ (Home Guard mother-daughter )ಏಕಕಾಲದಲ್ಲಿ ಪಿಯುಸಿ ಪರೀಕ್ಷೆ ಬರೆದು ಇಬ್ಬರೂ ಉತ್ತೀರ್ಣರಾಗಿದ್ದಾರೆ.
ಸುಳ್ಯದ ಗೃಹ ರಕ್ಷದ ದಳದ ಸಿಬ್ಬಂದಿಯಾಗಿರುವ ಗೀತಾ ಸುಮಾರು 25 ವರ್ಷಗಳ ಬಳಿಕ ಓದುವತ್ತ ಮನಸ್ಸು ಮಾಡಿದ್ದಾರೆ. ಸುಳ್ಯದ ಜಯನಗರ ನಿವಾಸಿ ರಮೇಶ್ ಎಂಬವರ ಪತ್ನಿಯಾಗಿರುವ ಗೀತಾ ಸುಮಾರು 25 ವರ್ಷಗಳ ಹಿಂದೆ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ನಂತ್ರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕವಂತೂ ಓದು ಅನ್ನೋದು ಕನಸಿನ ಮಾತಾಗಿತ್ತು. ಆದರೆ ಈ ಬಾರಿ ತನ್ನ ಮಗಳು ಸುಳ್ಯದ ಜೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತ್ರಿಷಾ ಕೂಡಾ ಪರೀಕ್ಷೆ ಬರೆಯುವವಳಿದ್ದಾಗ ತನಗೂ ಓದಬೇಕೆಂಬ ಆಸೆ ಮತ್ತೆ ಚಿಗುರಿದ. ಹಾಗೆ ಆಕೆಯೊಂದಿಗೆ ಮತ್ತೆ ತಾನೂ ಓದು ಆರಂಭಿಸಿದ್ದರು ತೃಷಾಳ ಅಮ್ಮ ಗೀತಾ.
ಬಿಸಿಲ ಕಷ್ಟದ ದುಡಿಮೆ, ಮನೆಗೆ ಬಂದು ಅಡುಗೆ ಮನೆಕೆಲಸ, ಉಳಿದ ಸಮಯ ಬಿಡುವು ಮಾಡಿಕೊಂಡು ಪುಸ್ತಕ ಹಿಡಿದಿದ್ದಾರೆ ಗೀತಾ. ಹೀಗೆ ಓದು ನಡೆಸಿಕೊಂಡು ಬಂದಿದ್ದ ಗೀತಾ ಪ್ರಯತ್ನಕ್ಕೆ ಈಗ ಯಶಃ ಸಿಕ್ಕಿದೆ: ಖಾಸಗಿಯಾಗಿ ಪರೀಕ್ಷೆ ಬರೆಯುವ ಮೂಲಕ ತಾಯಿ ಮಗಳು ಇಬ್ಬರೂ ಪಾಸ್ ಆಗಿದ್ದು, ಇಡೀ ಜಿಲ್ಲೆಯಲ್ಲೇ ಈ ಘಟನೆ ಮೊದಲನೆಯದ್ದಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಹಿರಿಯ ಪತ್ರಕರ್ತ, ಅಕ್ಷರ ಬ್ರಹ್ಮ, ಮಾಂತ್ರಿಕ ಬರಹಗಾರ ಹಾಯ್ ಬೆಂಗಳೂರು ಸಂಪಾದಕ ದಿವಂಗತ ರವಿ ಬೆಳಗೆರೆಯವರ ಜೀವನದಲ್ಲೂ ಇಂತಹುದೇ ಘಟನೆ ನಡೆದಿತ್ತು. ತನ್ನ ತಾಯಿ ಪಾರ್ವತಮ್ಮರೊಂದಿಗೆ ರವಿ ಬೆಳಗೆರೆಯವರೂ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು. ದುರಾದೃಷ್ಟವಶಾತ್, ಅವತ್ತು ರವಿ ಬೆಳಗೆರೆ ಫೇಲ್ ಆಗಿದ್ದರು. ಅವರ ತಾಯಿ ಪಾರ್ವತಮ್ಮ ಪಾಸಾಗಿದ್ದರು. ಮುಂದೆ ಅದೇ ರವಿ ಬೆಳಗೆರೆಯವರ ತಾಯಿ ಓದು ಮುಂದುವರೆಸಿ ಡಿಗ್ರಿ ಮುಗಿಸಿದ್ದರು. ಕೊನೆಗೆ ಸಂಜೆ ಕಾಲೇಜ್ ಒಂದರ ಪ್ರಾಂಶುಪಾಲೆ ಕೂಡಾ ಆಗಿದ್ದರು. ಇದೇ ರೀತಿ, ನಮ್ಮ ಸುಳ್ಯದ ಗೀತಕ್ಕ ಪುಸ್ತಕ ಮಡಚದೆ ಇರಲಿ, ಅಕ್ಷರಗಳು ಆಕೆಗೆ ಮತ್ತು ಮಗಳು ತ್ರಿಷಾಗೆ ಹೊಸ ವಿಜಯ ದೊರಕಿಸಿ ಕೊಡಲಿ.
ಬೆಳ್ತಂಗಡಿ: ಪಿಯುಸಿಯಲ್ಲಿ ಸಮಾನ ಮಾರ್ಕು: SDM ಕಾಲೇಜಿನ ಈ ಅವಳಿ ಜವಳಿ ಸೋದರಿಯರ ಮಾರ್ಕು ಕೂಡಾ ಅವಳಿ ಜವಳಿ !