Silk Saree: ಸಿಲ್ಕ್ ಸೀರೆ ವರ್ಷಾನುಗಟ್ಟಲೆ ತನ್ನ ಹೊಳಪು ಕಳೆದುಕೊಳ್ಳದಂತೆ ಮಾಡಲು ಇಲ್ಲಿದೆ ಸುಲಭ ಟ್ರಿಕ್ಸ್!
Silk Saree: ಹೆಂಗಸರಿಗೆ ಸೀರೆ (Saree), ಒಡವೆಗಳೆಂದರೆ (jewellery) ಭಾರೀ ಇಷ್ಟ. ಕೆಲವರಿಗೆ ಎಲ್ಲಾ ಬಣ್ಣದ ಸೀರೆಗಳನ್ನು ಕೊಳ್ಳುವ ಹವ್ಯಾಸ. ಸೀರೆ, ಬಟ್ಟೆ, ಒಡವೆಗಳನ್ನು ಎಷ್ಟು ಖರೀದಿಸಿದರೂ ಮಹಿಳೆಯರಿಗೆ (women) ಸಾಕು ಎನಿಸುವುದೇ ಇಲ್ಲ. ಜಗತ್ತು ಎಷ್ಟು ಆಧುನಿಕತೆಯತ್ತ ತಿರುಗಿದ್ರೂ ಹೆಣ್ಣು ಮಕ್ಕಳಿಗೆ ಸೀರೆಗಳ ವ್ಯಾಮೋಹ ಎಂದೂ ಕಡಿಮೆಯಾಗಲ್ಲ. ಸೀರೆ ಕೊಳ್ಳುವುದೇನೋ ಸುಲಭ ಆದರೆ, ಇದನ್ನು ಸಂರಕ್ಷಿಸೋದು ಹೇಗೆ? ಇದೇ ಚಿಂತೆ!!
ಹೌದು, ಅದೆಷ್ಟೋ ಜನರು ಸೀರೆಯ ವಿಷಯದಲ್ಲಿ ತಪ್ಪು ಮಾಡುತ್ತಾರೆ. ಉತ್ತಮ ಸೀರೆ ಖರೀದಿಸಿ, ಅದರ ಹೊಳಪು, ಸಂರಕ್ಷಿಸೋದರಲ್ಲಿ ಸೋತು ಹೋಗುತ್ತಾರೆ. ಸೀರೆಯನ್ನು ಉತ್ತಮ ರೀತಿಯಲ್ಲಿ ಜಾಗೃತವಹಿಸಬೇಕು. ಹಾಗಿದ್ದರೆ, ಸಿಲ್ಕ್ ಸೀರೆಗಳು (Silk Saree) ತನ್ನ ಹೊಳಪನ್ನು ಕಳೆದುಕೊಳ್ಳದಂತೆ ಕಾಪಾಡುವುದು ಹೇಗೆ? ಕಾಂಜೀವರಂ ಸೀರೆಯನ್ನು (Kanjivaram silk saree) ಯಾವ ರೀತಿ ಸಂರಕ್ಷಿಸುವುದು? ಸಲಹೆ ಇಲ್ಲಿದೆ.
ಕಾಂಜೀವರಂ ಸೀರೆಯನ್ನು ಉಟ್ಟ ನಂತರ ಅದರ ಹೊಳಪು ಮಾಸದಂತೆ ಕಾಪಾಡಲು ಟ್ರಿಕ್ಸ್ ಇಲ್ಲಿದೆ. ಹೆಚ್ಚಾಗಿ ಎಲ್ಲಾ ಸೀರೆಗಳನ್ನು ಒಗಿಯಬಾರದು. ಅಂತೆಯೇ ಕಾಂಜೀವರಂ ಸೀರೆಯನ್ನೂ ಉಟ್ಟ ಬಳಿಕ ಆಗಾಗ ವಾಶ್ ಮಾಡುತ್ತಿರಬೇಡಿ. ಬದಲಿಗೆ ಸೀರೆಯನ್ನು ಬಿಸಿಲಿಗೆ ಒಣಗಲು ಹಾಕಿ, ಒಣಗಿದ ನಂತರ ಜೋಪಾನವಾಗಿ ಮಡಚಿಡಿ.
ಮುಖ್ಯವಾಗಿ ಈ ಸೀರೆಯ ಮೇಲೆ ಯಾವುದೇ ಬಾಡಿ ಸ್ಪ್ರೇ ಹಾಕಬೇಡಿ. ಸೀರೆ ಹಾಳಾಗುತ್ತದೆ. ಹಾಗೇ ಈ ಸೀರೆಯನ್ನು ಎರಡು-ಮೂರು ಬಾರಿ ಬಳಸಿದ ನಂತರ ಡ್ರೈ ವಾಶ್ ಮಾಡಿಸಿ. ಮೈಲ್ಡ್ ಶ್ಯಾಂಪೂವಿನ ನೀರಿನಲ್ಲಿ ವಾಶ್ ಮಾಡಿದರೂ ಆಗುತ್ತದೆ. ಆದರೆ, ಜಾಸ್ತಿ ಉಜ್ಜಿ ತೊಳೆಯಬೇಡಿ, ವಾಶ್ ಮಾಡಿದ ನಂತರ ಮಡಚಿಡಿ. ಒಂದೇ ಫೋಲ್ಡರ್ ನಲ್ಲಿ ಮಡಚಿಟ್ಟಿದ್ದರೆ, ಆಗಾಗ ಬೇರೆ ವಿಧಾನದಲ್ಲಿ ಮಡಿಚಿಡುತ್ತಿರಿ. ಇಲ್ಲಾಂದ್ರೆ ಮಡಚಿದ ಜಾಗದಲ್ಲಿ ಗೆರೆ ಕಾಣಿಸಿ, ಸಮಯ ನಂತರ ಸೀರೆ ಹರಿದುಹೋಗುವ ಸಾಧ್ಯತೆ ಇರುತ್ತದೆ.
ಇನ್ನು ಸಿಲ್ಕ್ ಸೀರೆ ವರ್ಷಾನುಗಟ್ಟಲೆ ತನ್ನ ಹೊಳಪು ಕಳೆದುಕೊಳ್ಳದಂತೆ ಮಾಡಲು, ಸೀರೆಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿಡಿ. ಬಳಿಕ ಹ್ಯಾಂಗರ್ ನಲ್ಲಿ ತೂಗುಹಾಕಿರಿ. ಈ ಎಲ್ಲಾ ಸಲಹೆ ಪಾಲಿಸಿದರೆ ಸೀರೆ ಬೇಗನೆ ಹಳೆಯದಾಗದೆ ಹೊಳೆಯುತ್ತಿರುತ್ತದೆ.
ಇದನ್ನೂ ಓದಿ: Mobile: ಫೋನ್ ಕಳೆದುಹೋದ್ರೆ ಚಿಂತೆಬೇಡ, ಹೀಗೆ ಮಾಡಿದ್ರೆ ಕೆಲವೇ ಗಂಟೆಯಲ್ಲಿ ನಿಮ್ಮ ಫೋನ್ ಮರಳಿ ಸಿಗುತ್ತೆ!!