Actress Revathi: ವೀರ್ಯ ದಾನದ ಮೂಲಕ ಮಗು ಮಾಡಿಕೊಂಡ ಈ ಫೇಮಸ್ ನಟಿಯ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು !

Actress Revathi: ಬಹುಬಾಷಾ ನಟಿಯಾಗಿ ಗುರುತಿಸಿಕೊಂಡ ಖ್ಯಾತ ನಟಿ ರೇವತಿ ಬಣ್ಣದ ಲೋಕದಲ್ಲಿ ಮಿಂಚಿ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದವರು.ನಟಿ ರೇವತಿಯವರ(Revathi) ವೈಯಕ್ತಿಕ ಜೀವನ ಮಾತ್ರ ಕಲರ್ಫುಲ್ ಆಗಿರಲಿಲ್ಲ ಎನ್ನುವುದು ಸುಳಲ್ಲ. ನಟಿ ರೇವತಿ, 1986 ರಲ್ಲಿ ನಿಮಾಟೋಗ್ರಾಫರ್ ಸುರೇಶ್ ಚಂದ್ರ ಮೆನನ್ (Suresh Chandra Menon) ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಮೇಲೆ ಮಕ್ಕಳಾಗಿಲ್ಲವೆಂದು ಗಂಡನಿಂದ ದೂರವಾಗಿದ್ದು ಇವರಿಬ್ಬರ ವಿಚ್ಛೇದನದ ಹಿಂದಿರುವ ಕಾರಣವೇನು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಮೂಲತಃ ಕೇರಳದವರಾದ ರೇವತಿ 17 ವರ್ಷದವರಿದ್ದಾಗ ನಾಯಕಿಯಾಗಿ ತೆರೆ ಮೇಲೆ ಮಿಂಚಿದ್ದು, ಅವರು ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ತಮಿಳು ಸಿನಿಮಾ ಮೂಲಕ ಅದರಲ್ಲಿಯೂ ಮೊದಲ ಸಿನಿಮಾದಲ್ಲಿಯೇ ಫಿಲ್ಮ್ ಫೇರ್ ಅವಾರ್ಡ್ ಕೂಡ ಬಾಚಿಕೊಂಡ ಹಿರಿಮೆ ಅವರದ್ದು. ಕನ್ನಡದಲ್ಲಿ ಶಂಕರ್ ನಾಗ್ (Shankar Nag), ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರ ಜೊತೆಗೆ ನಟಿಸಿದ್ದಾರೆ. ನಟನೆಯ ಜೊತೆಗೆ ನಿರ್ದೇಶಕಿಯಾಗಿ ಖ್ಯಾತಿ ಪಡೆದ ರೇವತಿ ತಮಿಳು ಮತ್ತು ಮಲಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚ ಭಾಷಾ ತಾರೆ ಎನಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಜೊತೆಗಿನ ಅವರ ‘ಲವ್’ ಚಿತ್ರಫೇಮಸ್ ಕೂಡ ಆಗಿತ್ತು. ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ವಿವಿಧ ವಿಭಾಗಗಳಲ್ಲಿ ಆರು ಸೌತ್ ಫಿಲ್ಮ್ಫೇರ್ ಪ್ರಶಸ್ತಿಯಲ್ಲದೆ ಇನ್ನೂ ಹೆಚ್ಚು ಪ್ರಶಸ್ತಿಯ ಗರಿ ಪಡೆದಿರುವ ನಟಿಯ ಖಾಸಗಿ ಜೀವನ ಮಾತ್ರ ಅಂದುಕೊಂಡ ಹಾಗೆ ಇರಲಿಲ್ಲ. ನಟ-ನಿರ್ದೇಶಕ ಸುರೇಶ್ ಚಂದ್ರ ಮೆನನ್ ಅವರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರೇವತಿ ಪತಿಯ ಜೊತೆಗೂಡಿ ಹಲವು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಮದುವೆಯಾದ 16 ವರ್ಷಗಳ ಬಳಿಕ ವೈವಾಹಿಕ ಜೀವನ ಮುರಿದು ಬಿತ್ತು. ಇಬ್ಬರ ನಡುವೆ ಮನಸ್ತಾಪ ಉಂಟಾಗಿ ನಟಿ ಬಂಜೆ ಎಂಬ ಕಾರಣದಿಂದ ವಿಚ್ಛೇದನ ನಡೆಯಿತು ಎಂದು ಕೇಳಿ ಬರುತ್ತಿದ್ದ ಸುದ್ದಿ. ಮಕ್ಕಳಿಲ್ಲದಿರುವುದರಿಂದ ಅವರ ಸಂಬಂಧದಲ್ಲಿ ಒತ್ತಡ ಹೆಚ್ಚಾಯಿತಂತೆ. ಹೀಗಾಗಿ, 2013 ರಲ್ಲಿ ಅವರ ಅಧಿಕೃತ ವಿಚ್ಛೇದನಕ್ಕೆ ಕಾರಣವಾಯಿತು.

ಆದರೆ, ಕೆಲವು ಮೂಲಗಳ ಪ್ರಕಾರ ಹಣಕ್ಕಾಗಿ ಸಂಕಷ್ಟ ಎದುರಾದ ಸಂದರ್ಭ ಸುರೇಶ್ ಅವರು ಈ ಸಂದರ್ಭದಲ್ಲಿ ಮಕ್ಕಳಾದರೆ ಕಷ್ಟ ಎಂದು ಆಪರೇಷನ್ ಮಾಡಿಸಿಕೊಂಡು ಬಿಟ್ಟಿದ್ದರಂತೆ. ಈ ವಿಷಯ ರೇವತಿಯವರಿಗೆ ಗೊತ್ತೇ ಇರಲಿಲ್ಲ ಎನ್ನಲಾಗಿದೆ. ಆದರೆ ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದೇ ಇದ್ದ ಹಿನ್ನೆಲೆ ಮನೆಯಲ್ಲಿ ಎಲ್ಲರೂ ಕೇಳಲು ಆರಂಭಿಸಿದಾಗ ಸುರೇಶ್ ರೇವತಿಯವರದ್ದೇ ತಪ್ಪು ಎಂದು ಆರೋಪಿಸಿದ್ದರಂತೆ. ಮೊದ ಮೊದಲು ಇದೇ ನಿಜ ಎಂದುಕೊಂಡಿದ್ದ ರೇವತಿಯವರಿಗೆ ಸತ್ಯ ತಿಳಿದಾಗ ಆಘಾತವಾಗಿತ್ತಂತೆ. ಸುರೇಶ್ ಅವರು ಈ ರೀತಿ ಮೋಸ ಮಾಡಿರುವುದನ್ನು ಒಪ್ಪಿಕೊಳ್ಳಲು ಅಗಲಿಲ್ಲ. ಆದರೆ ಪತಿ ಆಪರೇಷನ್ (Opeation) ಮಾಡಿಸಿಕೊಂಡು ಎಲ್ಲರೆದರು ತಮ್ಮನ್ನು ಬಂಜೆ ಎಂದು ಹೇಳುತ್ತಿದ್ದುದನ್ನು ಅರಿತ ರೇವತಿಯವರು ಡೈವೋರ್ಸ್ ನೀಡಿದರು ಎಂದು ಹೇಳಲಾಗುತ್ತಿದೆ.

ವಿಚ್ಛೇದನವಾದ ಬಳಿಕ ಕೆಲ ವರ್ಷಗಳ ಬಳಿಕ ನಟಿ ವೀರ್ಯ ದಾನಿಗಳ ಸಹಾಯದಿಂದ IVF (ಇನ್ ವಿಟ್ರೋ ಫರ್ಟಿಲೈಸೇಶನ್) ಮೂಲಕ 48 ನೇ ವಯಸ್ಸಿನಲ್ಲಿ ಮಗಳಿಗೆ ಜನ್ಮ ನೀಡಿದ್ದು, ಮಗಳು ಮಹಿಗೆ ವಾಸ್ತವ ಪ್ರಪಂಚ ಅರಿವಾಗುವ ಸಂದರ್ಭ ಸತ್ಯ ಹೇಳುವ ತೀರ್ಮಾನ ಮಾಡಿದ್ದಾರಂತೆ ನಟಿ ರೇವತಿ. ಸೌತ್ ಸಿನಿಪ್ರಿಯರು ನಟಿ ರೇವತಿ ಸಿನಿಮಾಗಾಗಿ ವಿಶೇಷವಾಗಿ ಇಂದಿಗೂ ಎದುರು ನೋಡುತ್ತಿದ್ದಾರೆ.

Leave A Reply

Your email address will not be published.