Eid Ul Fitr: ಕರಾವಳಿಯಲ್ಲಿ ನಾಳೆ ಈದ್‌ ಉಲ್‌ ಫಿತ್ರ್‌ ಆಚರಣೆ! ಹೆಚ್ಚಿನ ಮಾಹಿತಿ ಇಲ್ಲಿದೆ

Eid-Ul-Fitr 2023: ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ಆಚರಿಸಲಾಗುವ ಪವಿತ್ರ ಮಾಸ ರಂಜಾನ್ ಅನ್ನು (Ramzan Festival) ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಸದ್ಯ ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ ಮಾಸದ ಉಪವಾಸ ಇಂದು ಚಂದ್ರದರ್ಶನ ಹಿನ್ನೆಲೆ ನಾಳೆ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ (Eid-Ul-Fitr 2023) ಆಚರಿಸಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ಖಾಜಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪ್ರಕಾರ ಇಂದು ಚಂದ್ರನ ದರ್ಶನವಾದ ಕಾರಣ, ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದಿಂದ ರಂಜಾನ್ ಉಪವಾಸ ಅಂತ್ಯಗೊಳ್ಳಲಿದೆ ಎಂದು ಘೋಷಣೆ ಮಾಡಿದ್ದಾರೆ.

1 ತಿಂಗಳ ಕಾಲ ಆಚರಿಸುವ ರಂಜಾನ್ ಉಪವಾಸ ವ್ರತ ನಾಳೆ ಅಂತ್ಯವಾಗಲಿದ್ದು, ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ, ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬ ಆಚರಿಸುತ್ತಾರೆ.

ಒಟ್ಟಿನಲ್ಲಿ ರಂಜಾನ್ ಪ್ರಯುಕ್ತ 30 ದಿನಗಳ ಕಾಲ ಉಪವಾಸ ಅನುಸರಿಸಿ , ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಅನುಸರಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಇಫ್ತಾರ್ ಭೋಜನದೊಂದಿಗೆ ಉಪವಾಸ ಮುಗಿಯುತ್ತದೆ. ನಾಳೆ ಉಪವಾಸ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ ಆಚರಿಸಲಾಗುವುದು.

ಆದರೆ ಈದ್ ಹಬ್ಬವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌’ನಲ್ಲಿ ಶುಕ್ರವಾರ ಅಂದರೆ ಏಪ್ರಿಲ್ 21 ರಂದು ಆಚರಿಸಲಾಗುತ್ತದೆ. ಯುಎಇಯ ಚಂದ್ರ ವೀಕ್ಷಣಾ ಸಮಿತಿ ಗುರುವಾರ ಇದನ್ನು ಪ್ರಕಟಿಸಿದ್ದು, ರಂಜಾನ್‌’ನ ಕೊನೆಯ ದಿನ ಏಪ್ರಿಲ್ 20 ಆಗಿದೆ.
ಇಸ್ಲಾಮಿಕ್ ತಿಂಗಳ ಶವ್ವಾಲ್ ಏಪ್ರಿಲ್ 21 ರಿಂದ ಪ್ರಾರಂಭವಾಗಲಿದೆ ಎಂದು ಸಮಿತಿ ಹೇಳಿದೆ. ಇದರೊಂದಿಗೆ ಯುಎಇಯಲ್ಲಿ 3 ದಿನಗಳ ಈದ್ ಹಬ್ಬ ಆರಂಭವಾಗಿದೆ.ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕತಾರ್ ಸೇರಿದಂತೆ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಏಪ್ರಿಲ್ 21 ಶುಕ್ರವಾರದಂದು ಅಂದರೆ ಇಂದು ಈದ್ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನಲಾಗಿದೆ.

ಉಳಿದಂತೆ ಆಸ್ಟ್ರೇಲಿಯಾ, ಸಿಂಗಾಪುರ, ಇಂಡೋನೇಷ್ಯಾ, ಮಲೇಷ್ಯಾ, ಬ್ರೂನಿ, ಥೈಲ್ಯಾಂಡ್, ಜಪಾನ್ ಮತ್ತು ಫಿಲಿಪೈನ್ಸ್‌ನಲ್ಲಿ ವಾಸಿಸುವ ಮುಸ್ಲಿಮರು ಏಪ್ರಿಲ್ 22 ಶನಿವಾರದಂದು ಈದ್ ಅಲ್ ಫಿತರ್ ಆಚರಿಸುವುದಾಗಿ ಘೋಷಿಸಿದ್ದಾರೆ. ಗುರುವಾರ ಅಲ್ಲಿ ಈದ್‌’ನ ಚಂದ್ರ ಕಾಣದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Ration Card Other Benefits: ರೇಶನ್ ಕಾರ್ಡ್’ನಿಂದಾಗುವ ಇತರ ಲಾಭಗಳ ಬಗ್ಗೆ ನಿಮಗ್ಗೊತ್ತಾ ?!

Leave A Reply

Your email address will not be published.