Home Breaking Entertainment News Kannada IPL 2023: ಅರ್ಜುನ್ ತೆಂಡೂಲ್ಕರ್ ಸಾಧನೆಗೆ ಭರ್ಜರಿ ಗಿಫ್ಟ್ ಕೊಟ್ಟ ಸಚಿನ್ ತೆಂಡೂಲ್ಕರ್!!

IPL 2023: ಅರ್ಜುನ್ ತೆಂಡೂಲ್ಕರ್ ಸಾಧನೆಗೆ ಭರ್ಜರಿ ಗಿಫ್ಟ್ ಕೊಟ್ಟ ಸಚಿನ್ ತೆಂಡೂಲ್ಕರ್!!

IPL 2023

Hindu neighbor gifts plot of land

Hindu neighbour gifts land to Muslim journalist

IPL 2023 : ಸಚಿನ್ ತೆಂಡೂಲ್ಕರ್ (Sachin Tendulkar) ಬಗ್ಗೆ ಗೊತ್ತಿಲ್ಲದವರು ಯಾರೂ ಇರಲಿಕ್ಕಿಲ್ಲ. ಅಂದು ಮತ್ತು ಇಂದು ಕೂಡ ಸ್ಟಾರ್ ಕ್ರಿಕೆಟಿಗ. ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ತೆಂಡೂಲ್ಕರ್ ಇದೀಗ ಮತ್ತೆ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಹೌದು, ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ತಂದೆಯ ಹಾಗೇ ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಲು ಹೆಜ್ಜೆ ಇಟ್ಟಿದ್ದಾರೆ. ಅರ್ಜುನ್ ತೆಂಡೂಲ್ಕರ್ ಮಂಗಳವಾರ ನಡೆದ ಐಪಿಎಲ್‌ ನಲ್ಲಿ (IPL 2023) ಮೊದಲ ವಿಕೆಟ್ ಪಡೆದಿದ್ದಾರೆ. ಮಗ ಅರ್ಜುನ್ ಸಾಧನೆ ಕಂಡು ಭಾವುಕರಾಗಿ ಸಚಿನ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 25 ಪಂದ್ಯಗಳು ನಿನ್ನೆ ( ಏಪ್ರಿಲ್ 18 ) ನಡೆದ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡಿವೆ.

ಸನ್‌ ರೈಸರ್ಸ್ ಹೈದರಾಬಾದ್ (ಎಸ್‌ ಆರ್‌ ಎಚ್) ವಿರುದ್ಧದ ಎರಡನೇ ಪಂದ್ಯದಲ್ಲಿ 18 ರನ್‌’ಗಳಿಗೆ ಅರ್ಜುನ್ 1 ವಿಕೆಟ್ ಪಡೆದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ಕೊನೆಯ ಓವರ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್ ಅದ್ಭುತ ಬೌಲಿಂಗ್ ನೆರವಿನಿಂದ 14 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಸಾಧನೆಯನ್ನು ಮುಂಬೈ ತಂಡದ ಮ್ಯಾನೇಜ್ಮೆಂಟ್ ಕೂಡ ಅಭಿನಂದಿಸಿದ್ದು, ಅರ್ಜನ್‌ ಬೌಲಿಂಗ್‌ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್ ಸೇರಿದಂತೆ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಟಾರ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮುಂಬೈ ಮ್ಯಾನೇಜ್‌ಮೆಂಟ್ ಪರವಾಗಿ POTM (ಪ್ಲೇಯರ್ ಆಫ್ ದಿ ಮ್ಯಾಚ್) ಬ್ಯಾಡ್ಜ್ ಅನ್ನು ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಅವರ ಟಿ-ಶರ್ಟ್‌’ಗೆ ತೊಡಿಸಿದರು. ಅಪ್ಪ-ಮಗ ಖುಷಿಯ ಕ್ಷಣದಲ್ಲಿ ಭಾವುಕರಾಗಿದ್ದು, ಉಳಿದವರು ಚಪ್ಪಾಳೆಯ ಮೂಲಕ ಹೆಮ್ಮೆಯ ಕ್ಷಣಕ್ಕೆ ಇನ್ನಷ್ಟು ಖುಷಿ ತುಂಬಿದರು.

ಪಂದ್ಯದ ಬಗ್ಗೆ ಅರ್ಜುನ್ ತೆಂಡೂಲ್ಕರ್ ಮಾತನಾಡಿದ್ದು, “ಮೊದಲ ಐಪಿಎಲ್ ವಿಕೆಟ್ ಪಡೆದಿದ್ದು ಸಂತೋಷವಾಗಿದೆ. ನಮ್ಮಲ್ಲಿ ಏನಿದೆಯೋ ಅದರಲ್ಲಿ ಯೋಜನೆ ರೂಪಿಸಿ, ಏನು ಮತ್ತು ಅದರಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಮೇಲೆ ನಾನು ಗಮನ ಹರಿಸಬೇಕಾಗಿತ್ತು” ಎಂದು ಹೇಳಿದರು.

 

ಇದನ್ನು ಓದಿ : IPL 2023: ಅರ್ಜುನ್ ತೆಂಡೂಲ್ಕರ್ ಸಾಧನೆಗೆ ಭರ್ಜರಿ ಗಿಫ್ಟ್ ಕೊಟ್ಟ ಸಚಿನ್ ತೆಂಡೂಲ್ಕರ್!!