KPSC ಕಿರಿಯ ಅಭಿಯಂತರರ ನೇಮಕಾತಿ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ!

KPSC: ಕರ್ನಾಟಕ ಲೋಕ ಸೇವಾ ಆಯೋಗದ ಕಿರಿಯ ಅಭಿಯಂತರರ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಪ್ರಕಟವಾಗಿದೆ.ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯ ಅನುಸಾರ 17-03-2022 ಸಂಬಂಧಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಅಭಿಯಂತರರ ಹುದ್ದೆಗಳ (89+47 ಹೈ.ಕ) ನೇಮಕಾತಿ ಪ್ರಕ್ರಿಯೆಗೆ ಆಯೋಗದ ಕೇಂದ್ರ ಕಚೇರಿಯಲ್ಲಿ ಮೂಲದಾಖಲೆಗಳ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತದೆ.ವೇಳಾಪಟ್ಟಿಯೊಳಗೊಂಡ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಆಯೋಗದ ವೆಬ್‍ಸೈಟ್ https://kpsc.kar.nic.in/Lists ರಡಿಯಲ್ಲಿ ಅಭ್ಯರ್ಥಿಗಳ ಮಾಹಿತಿಯ ಸಲುವಾಗಿ ಪ್ರಕಟಿಸಿರುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ (KPSC)ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಅಭಿಯಂತರರ ಹುದ್ದೆಗಳ (89+47 ಹೈ.ಕ) ನೇಮಕಾತಿಗಾಗಿ ಏಪ್ರಿಲ್ 26 ಮತ್ತು 27 ರಂದು ಮೂಲ ದಾಖಲೆಗಳ ಪರಿಶೀಲನೆ ನಡೆಸಲು ನಿಗದಿಪಡಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ತ್ವರಿತ ಅಂಚೆ ಮೂಲಕ ಕಳುಹಿಸಲಾಗಿದೆ.

ಇದನ್ನೂ ಓದಿ: PM Kisan Yojana: ರೈತರೇ 14ನೇ ಪಿಎಂ ಕಿಸಾನ್‌ ಯೋಜನೆ ಕಂತಿನ ಬಿಡುಗಡೆಗೆ ಮೊದಲು ಈ ಕೆಲಸ ಮಾಡಿ!

Leave A Reply

Your email address will not be published.