Bank Balance: ಈ ಬ್ಯಾಂಕ್ ನಲ್ಲಿ ಕಡಿಮೆ ಬ್ಯಾಲೆನ್ಸ್ ಇದ್ರೆ ನಿಮ್ಮ ಖಾತೆಗೆ ಬೀಳಲಿದೆ ಮೇ.1 ರಿಂದ ಸ್ಪೆಷಲ್ ದಂಡ!
Bank Balance : ಗ್ರಾಹಕ ಸೇವೆ ಮೂಲಸೌಕರ್ಯ ಹಾಗೂ ಸಮೀಕ್ಷೆಗಳ ಮೂಲಕ ಫೀಡ್ ಬ್ಯಾಕ್ ಸಂಗ್ರಹಿಸುವ ಪ್ರಯತ್ನಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದೆ. ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಗ್ರಾಹಕರಿಗೆ ಮಹತ್ವ ಮಾಹಿತಿ ಒಂದು ಇಲ್ಲಿದೆ.
ಬರುವ ತಿಂಗಳು ಮೇ 1ರಿಂದ ಎಟಿಎಂ ಬಳಸುವ ಮೊದಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಡಿಮೆ ಬ್ಯಾಲೆನ್ಸ್ ( Bank Balance) ಕಾರಣಕ್ಕೆ ಎಟಿಎಂ ವಹಿವಾಟುಗಳು ವಿಫಲವಾದರೆ 10ರೂ +ಜಿಎಸ್ ಟಿ ದಂಡ ಶುಲ್ಕ ವಿಧಿಸಲಾಗುತ್ತದೆ ಎಂದು ಈ ಹೊಸ ನಿಯಮದ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಈಗಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಗ್ರಾಹಕರಿಗೆ ಈ ಶುಲ್ಕದ ಬಗ್ಗೆ ಮಾಹಿತಿ ನೀಡಲು ಎಸ್ ಎಂಎಸ್ ಅಲರ್ಟ್ ಕಳುಹಿಸಲು ಪ್ರಾರಂಭಿಸಿದೆ.
ಹಾಗೆಯೇ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಗ್ರಾಹಕರ ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಇದ್ದರೂ ಎಟಿಎಂ ವಹಿವಾಟು ವಿಫಲವಾದಲ್ಲಿ ಅದನ್ನು ಪರಿಹರಿಸಲು ಪಿಎನ್ ಬಿ ಮಾರ್ಗಸೂಚಿಗಳನ್ನು ರೂಪಿಸಿದೆ.
ಇನ್ನು ಒಂದು ವೇಳೆ ಎಟಿಎಂ ವಹಿವಾಟು ವಿಫಲವಾದರೆ, ಪಿಎನ್ ಬಿ ಗ್ರಾಹಕರು 1800180222 ಮತ್ತು 18001032222 ಟೋಲ್ ಫ್ರೀ ಸಂಖ್ಯೆ ಮೂಲಕ ಗ್ರಾಹಕ ಸಂಬಂಧ ಕೇಂದ್ರವನ್ನು ಸಂಪರ್ಕಿಸಿ ದೂರುಗಳನ್ನು ದಾಖಲಿಸಬಹುದು ಎಂದು ತಿಳಿಸಲಾಗಿದೆ.
ಅದಲ್ಲದೆ ಎಟಿಎಂ ವಹಿವಾಟು ವಿಫಲವಾಗಿರುವ ಬಗ್ಗೆ ಗ್ರಾಹಕರು ದೂರು ನೀಡಿದಲ್ಲಿ ಬ್ಯಾಂಕ್ ದೂರು ಸ್ವೀಕರಿಸಿದ ಏಳು ದಿನಗಳೊಳಗೆ ಈ ಸಮಸ್ಯೆಯನ್ನು ಬಗೆಹರಿಸಲಿದೆ.
ಒಂದು ವೇಳೆ ಬ್ಯಾಂಕ್ 30 ದಿನಗಳೊಳಗೆ ಗ್ರಾಹಕರ ಸಮಸ್ಯೆ ಬಗೆಹರಿಸಲು ವಿಫಲವಾದ್ರೆ, ಗ್ರಾಹಕರು ಪ್ರತಿದಿನ 100ರೂ. ದರದಲ್ಲಿ ಪರಿಹಾರ ಪಡೆಯಲಿದ್ದಾರೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
ಇದರೊಂದಿಗೆ ಬ್ಯಾಂಕ್ ಗ್ರಾಹಕ ಸಂತೃಪ್ತಿ ಸಮೀಕ್ಷೆ ನಡೆಸುತ್ತಿದ್ದು, ಗ್ರಾಹಕರು ಪಿಎನ್ ಬಿ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅದರಲ್ಲಿಭಾಗವಹಿಸಬಹುದು.
ಮುಖ್ಯವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಪಿಎನ್ ಬಿ (PNB) ಪ್ರಮುಖ ನಗರಗಳಲ್ಲಿ ತಿಂಗಳಿಗೆ 3 ಉಚಿತ ಎಟಿಎಂ ವಿತ್ ಡ್ರಾಗಳಿಗೆ ಅವಕಾಶ ಕಲ್ಪಿಸಿದೆ. ಇನ್ನು ಇತರ ಪ್ರದೇಶಗಳಲ್ಲಿ ಎಸ್ ಬಿಐ ಮಾದರಿಯಲ್ಲೇ ಎಟಿಎಂ 3 ಉಚಿತ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದೆ.
ಸದ್ಯ ಬ್ಯಾಂಕ್ ಎಟಿಎಂ ವಿತ್ ಡ್ರಾಗಳ ಮೇಲೆ 10ರೂ. ಶುಲ್ಕ ವಿಧಿಸಿದ್ದು, ಬ್ಯಾಂಕಿನ ನಿತ್ಯದ ವಹಿವಾಟು ಮಿತಿ ಕ್ಲಾಸಿಕ್ ಕಾರ್ಡ್ ಗಳ ಬಳಕೆದಾರರಿಗೆ 25,000ರೂ. ಹಾಗೂ ಗೋಲ್ಡ್ ಹಾಗೂ ಪ್ಲಾಟಿನಂ ಕಾರ್ಡ್ ಗಳನ್ನು ಹೊಂದಿದವರಿಗೆ 50,000ರೂ. ಇರಿಸಲಾಗಿದೆ.
ಇದನ್ನೂ ಓದಿ: M.S.Dhoni: RCB ವಿರುದ್ಧ ಬ್ಯಾಟಿಂಗ್ ಮಾಡಲು ಬಂದ ಧೋನಿ! ಜನರ ಕರತಾಡನಕ್ಕೆ ಬೆಚ್ಚಿ ವಿಸ್ಮಯದ ನೋಟ ಬೀರಿದ ಅನುಷ್ಕಾ ಶರ್ಮಾ!