Tulsi Vastu Tips: ಈ ನಾಲ್ಕು ವಸ್ತು ತುಳಸಿ ಕಟ್ಟೆ ಹತ್ತಿರ ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ!

Tulsi Vastu Tips : ತುಳಸಿ ಗಿಡ ಭಾರತೀಯ ಮನೆಗಳಲ್ಲಿ ಹೆಚ್ಚಾಗಿ ಕಾಣಬಹುದು, ಏಕೆಂದರೆ ಇದನ್ನು ಹಿಂದೂಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಸಾಕ್ಷಾತ್​ ಲಕ್ಷ್ಮೀ ಸ್ವರೂಪ ಆಗಿದೆ . ತುಳಸಿ ಕಟ್ಟೆಯಿರುವ ಸ್ಥಳ ಪೂಜನೀಯ ಸ್ಥಳವೇ ಸರಿ. ಅದಲ್ಲದೆ ಗಿಡಮೂಲಿಕೆಗಳ ರಾಣಿ ಎಂದು ತುಳಸಿ ಕರೆಯಲ್ಪಟ್ಟಿದೆ. ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟುಕೊಳ್ಳುವುದರಿಂದ ಕುಟುಂಬಕ್ಕೆ ಸಾಮರಸ್ಯ ಮತ್ತು ಸಂತೋಷ ಬರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ (Tulsi Vastu Tips) ತಿಳಿಸಲಾಗಿದೆ.

ಆದರೆ ಗಂಗಾ ಮಾತೆಗೆ ಸಮಾನವಾದ ಪವಿತ್ರತೆಯನ್ನು ಹೊಂದಿರುವ ತುಳಸಿ ಕಟ್ಟೆ ಬಳಿ ಈ ನಾಲ್ಕು ವಸ್ತುಗಳನ್ನು ಇಡಲೇ ಬಾರದು, ಹಾಗೆ ಮಾಡಿದರೆ ನೀವೇ ಕಷ್ಟಗಳನ್ನು ತಂದುಕೊಂಡಂತೆ ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖ ಮಾಡಲಾಗಿದೆ.

ತುಳಸಿ ಕಟ್ಟೆ ಇರುವ ಪರಿಸರದಲ್ಲಿ ಕಸದ ಬುಟ್ಟಿಯನ್ನು ಇರಬಾರದು. ಹೀಗೆ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೇರಿದಂತಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

ತುಳಸಿ ಗಿಡದ ಆಸುಪಾಸು ಚಪ್ಪಲಿಗಳನ್ನು ಇಡಬಾರದು. ಹೀಗೆ ಚಪ್ಪಲಿ ಇರಿಸಿದರೆ ತುಳಸಿಗೆ ಅವಮಾನ ಮಾಡಿದಂತೆ. ತಾಯಿ ಲಕ್ಷ್ಮೀಯನ್ನು ಕೂಡ ಅವಮಾನ ಮಾಡದಂತಾಗುತ್ತದೆ. ತುಳಸಿ ಸಸ್ಯದ ಸುತ್ತಮುತ್ತಲ ಪರಿಸರವನ್ನು ಕಡ್ಡಾಯವಾಗಿ ಸ್ವಚ್ಛವಾಗಿ ಇರಿಸಿಕೊಳ್ಳಬೇಕು.

ತುಳಸಿ ಭಗವಾನ್​ ವಿಷ್ಣುವಿಗೆ ಅತ್ಯಂತ ಪ್ರೀತಿಕರ. ಆದ್ದರಿಂದ ತುಳಸಿಯನ್ನು ಆರಾಧಿಸಿದರೆ ತುಂಬಾ ಒಳ್ಳೆಯದಾಗುತ್ತದೆ. ತುಳಸಿ ಹತ್ತಿರ ಎಂದಿಗೂ ಪೊರಕೆ ಇಡಬಾರದು. ಪೊರಕೆಯಿಟ್ಟರೆ ವಿಷ್ಣುಮೂರ್ತಿ ಮತ್ತು ಲಕ್ಷ್ಮೀ ದೇವಿ ಇಬ್ಬರಿಗೂ ಅವಮಾನ ಮಾಡಿದಂತಾಗುತ್ತದೆ. ಇದು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು.

ತುಳಸಿ ಮುಂತಾದ ಮಹಾಮಹಿಮಾನ್ವಿತ ಸಸ್ಯದ ಸಮೀಪ ಮುಳ್ಳುಗಳು ಇರುವ ಸಸ್ಯಗಳನ್ನು ಇಡಬಾರದು. ಇದು ತುಂಬಾ ಅಶುಭ. ಈ ಮುಳ್ಳು ಸಸ್ಯಗಳ ಪರಿಸರದಲ್ಲಿ ತುಳಸಿ ಗಿಡವನ್ನು ಇರಿಸಿದರೆ ಅದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ಈ ಮೇಲಿನಂತೆ ಶಾಸ್ತ್ರ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯದ ಸುತ್ತ ಮುತ್ತಲೂ ಕೆಲವು ವಸ್ತುಗಳನ್ನು ಇಡದಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ : ಮಗನ ಬರ್ತ್‌ಡೇ ಗೋವುಗಳ ಜೊತೆ ಆಚರಿಸಿದ್ಯಾಕೆ ರಿಷಬ್‌ಶೆಟ್ಟಿ?

Leave A Reply

Your email address will not be published.