Actress Soundarya : ಸಾಯುವ ಸಮಯದಲ್ಲಿ ನಟಿ ಸೌಂದರ್ಯ ಗರ್ಭಿಣಿಯಾಗಿದ್ರಾ?!

Actress Soundarya : ಬಹುಭಾಷಾ ನಟಿ ಸೌಂದರ್ಯ (Actress Soundarya) ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿ ಆಗಿದ್ದರು. ತಮ್ಮ ನೈಜ ನಟನೆ ಮತ್ತು ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ಈಕೆಯ ಕನಸು ತಾನು ವೈದ್ಯೆಯಾಗಬೇಕೆಂಬದು (doctor). ಆದರೆ ಆಕಸ್ಮಿಕವಾಗಿ ಸಿನಿಮಾರಂಗಕ್ಕೆ (film industry) ಕಾಲಿಟ್ಟರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ನಟಿಸಿ
ಸೈ ಎನಿಸಿಕೊಂಡಿದ್ದರು.

 

ನಟಿ ಸೌಂದರ್ಯಾ ಎಸ್ ಸಿದ್ದಲಿಂಗಯ್ಯ ನಿರ್ದೇಶಿಸಿದ ‘ಬಾ ನನ್ನ ಪ್ರೀತಿಸು’ (baa nanna prithisu) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರವಿಚಂದ್ರನ್ (V. Ravichandran), ವಿಷ್ಣುವರ್ಧನ್ (Vishnuvardhan), ಬಾಲಕೃಷ್ಣ, ನಾಗಾರ್ಜುನಾ, ವೆಂಕಟೇಶ್, ರಜನಿಕಾಂತ್ (Rajinikanth) ಅಂತ ಸೂಪರ್‌ಸ್ಟಾರ್ ಜೊತೆ ನಟಿಸಿದ್ದರು. ಸುಮಾರು 12 ವರ್ಷಗಳ ಅಂತರದಲ್ಲಿ ನಟಿ ಸೌಂದರ್ಯ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು. ಆಕೆಯನ್ನು ದಕ್ಷಿಣದ ಮಹಿಳಾ ಸೂಪರ್ ಸ್ಟಾರ್ ಆಗಿದ್ದ ಮಹಾನಟಿ ಸಾವಿತ್ರಿಗೆ ಹೋಲಿಸಲಾಗಿದೆ.

ಸೌಂದರ್ಯ 2003 ರಲ್ಲಿ ರಘು ಎಂಬವರನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಇದಾದ ಒಂದು ವರ್ಷದ ನಂತರ ಅವರು ರಾಜಕೀಯಕ್ಕೆ ಕಾಲಿಟ್ಟರು. 17 ಏಪ್ರಿಲ್ 2004 ರಂದು ಆಂಧ್ರಪ್ರದೇಶದ ಕರೀಂನಗರದಲ್ಲಿ ನಡೆಯಲಿರುವ ಬಿಜೆಪಿ (bjp) ಚುನಾವಣಾ ಪ್ರಚಾರಕ್ಕಾಗಿ ಸೌಂದರ್ಯ ಬೆಂಗಳೂರಿನಿಂದ (banglore) ವಿಮಾನದ ಮೂಲಕ ಹೊರಟರು. 4 ಆಸನಗಳ ಈ ವಿಮಾನದಲ್ಲಿ ಸೌಂದರ್ಯ ಅವರ ಸಹೋದರ ಅಮರನಾಥ್ (Amaranath) ಮತ್ತು ಇತರರು ಇದ್ದರು. ಜಕ್ಕೂರು ಏರ್‌ಫೀಲ್ಡ್‌ನಿಂದ 11.5 ನಿಮಿಷಕ್ಕೆ ಟೇಕಾಫ್ ಆದ ವಿಮಾನ 100 ಅಡಿ ಎತ್ತರಕ್ಕೆ ತಲುಪುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತಕ್ಕೀಡಾಗಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬಿದ್ದಿತು. ಈ ದುರಂತದಲ್ಲಿ ಹಲವರು ಸಾವನ್ನಪ್ಪಿದ್ದು, ಸೌಂದರ್ಯಾ ಜೊತೆಗೆ ಸಹೋದರ ಅಮರ್‌ನಾಥ್ ಕೂಡ ಸಾವನ್ನಪ್ಪಿದ್ದರು. ಆದರೆ, ಸಾಯುವ ಸಮಯದಲ್ಲಿ ನಟಿ ಸೌಂದರ್ಯ ಗರ್ಭಿಣಿಯಾಗಿದ್ರು (Soundarya pregnant) ಎನ್ನಲಾಗಿದೆ.

ಹೌದು, ಈ ಘಟನೆಯ ಒಂದು ದಿನದ ಮೊದಲು ಸೌಂದರ್ಯ ಅವರು ತಮಿಳು ನಿರ್ದೇಶಕ ಆರ್‌ವಿ ಉದಯಕುಮಾರ್ ಅವರಿಗೆ ಕರೆ ಮಾಡಿದ್ದು, ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಮಾತನ್ನಾಡಿದರು ಎನ್ನಲಾಗಿದೆ. ಈ ವೇಳೆ ನಟಿ ತಾನು ತಾಯಿಯಾಗಲಿದ್ದೇನೆ ಮತ್ತು ಈಗ ಚಿತ್ರರಂಗದಿಂದ ಹೊರಬರಲು ಬಯಸುತ್ತೇನೆ ಎಂದು ನಿರ್ದೇಶಕರ ಬಳಿ ಹೇಳಿದ್ದರು ಎನ್ನಲಾಗಿದೆ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಮರುದಿನವೇ ಸೌಂದರ್ಯ ತೀರಿಕೊಂಡರು. ಕೇವಲ 31 ವಯಸ್ಸಿಗೆ ಬದುಕು ಅಂತ್ಯವಾಯಿತು. ಸೌಂದರ್ಯ ಅನಾಥ ಮಕ್ಕಳಿಗಾಗಿ 3 ಶಾಲೆಗಳನ್ನು ನಡೆಸುತ್ತಿದ್ದರು. ಅವರ ಸಾವಿನ ಬಳಿಕ ತಾಯಿ ಮಂಜುಳಾ ಈ ಜವಾಬ್ದಾರಿಯನ್ನು ವಹಿಸಿಕೊಂಡರು.

Leave A Reply

Your email address will not be published.