Prakash Raj: ವಿನೋದ್ ‘ರಾಜ್’ ಹುಟ್ಟಿನ ಗುಟ್ಟಿನ ಚರ್ಚೆಗೆ ಅಂದು ದ್ವಾರಕೀಶ್ ಅವರ ಆ ಹೇಳಿಕೆಯೇ ಕಾರಣ – ಪ್ರಕಾಶ್ ರಾಜ್ ಮೆಹು!!

Prakash Raj mehu: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿರುವ ವಿಚಾರವೆಂದರೆ ಅದು ಲೀಲಾವತಿ (Actress Leelavathi) ಪುತ್ರ ವಿನೋದ್ (Vinod Raj) ಅವರು ವಿಚಾರ. ವಿನೋದ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಲೀಲಾವತಿ ಅವರು ಪ್ರತಿಕ್ರಿಯೆ ನೀಡಿದ್ದರು. “ಹೌದು, ನನ್ನ ಮಗನಿಗೆ ಮದುವೆ ಮಾಡಿದ್ದೀನಿ. ತಿರುಪತಿಯಲ್ಲಿ ಮದುವೆ ನಡೆದಿತ್ತು ಎಂದಿದ್ದರು. ವಿನೋದ್ ರಾಜ್ ಕೂಡ ಇದನ್ನು ಒಪ್ಪಿಕೊಂಡಿದ್ದರು. ಇದೀಗ ಈ ವಿಚಾರ ಮತ್ತಷ್ಟು ತಿರುವು ಪಡೆದಿದ್ದು, ವಿನೋದ್ ಹುಟ್ಟಿನ ಗುಟ್ಟಿನ ಬಗ್ಗೆ ಚರ್ಚೆಯಾಗುತ್ತಿದೆ.

ಈ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು (Prakash Raj mehu) ಅವರು “ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್”, ಅದಕ್ಕೆ ಸಾಕ್ಷಿ ಚೆನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್‌ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ” ಎಂದೂ ಬರೆದುಕೊಂಡಿದ್ದರು.

ಜೊತೆಗೆ ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, (Marriage) ಅಷ್ಟೆ ಅಲ್ಲದೇ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗ ಕೂಡ ಇದ್ದಾನೆ ಎಂದು ಪೋಸ್ಟ್ ( The post Vinod Raj) ಮೂಲಕ ಹೇಳಿದ್ದರು. ಈ ಬಗ್ಗೆ ನಟಿ ಲೀಲಾವತಿಯವರು ಪ್ರತಿಕ್ರಿಯೆ ನೀಡಿದ್ದರು. ನಂತರ ವಿನೋದ್ ರಾಜ್ ಕೂಡ ಈ ಬಗ್ಗೆ ಮಾತನಾಡಿದ್ದರು. ಇದೀಗ ಈ ಎಲ್ಲಾ ಚರ್ಚೆಗೆ ಅಂದು ನಟ, ನಿರ್ಮಾಪಕ ದ್ವಾರಕೀಶ್ ನೀಡಿದ ಹೇಳಿಕೆಯೇ ಕಾರಣ ಎಂದಿದ್ದಾರೆ. ಅಷ್ಟಕ್ಕೂ ನಟ ಏನು ಹೇಳಿದ್ದರು?

ಸದ್ಯ ನಿರ್ದೇಶಕ ಪ್ರಕಾಶ್ ರಾಜ್ ಮೇಹು, “ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಮತ್ತೊಂದು ಸತ್ಯವನ್ನು ಒಪ್ಪಿಕೊಂಡುಬಿಡಿ’ ಎಂದು ಮತ್ತೆ ಪ್ರಕಾಶ್ ರಾಜ್ ಮೇಹು ಮತ್ತೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಅಲ್ಲದೆ,‌ “ಅಣ್ಣಾವ್ರು ಹಾಗೂ ಲೀಲಾವತಿ ಪುತ್ರ ವಿನೋದ್ ರಾಜ್ ಎನ್ನುವ ವಿವಾದ ಹುಟ್ಟಿಕೊಳ್ಳಲು ಅಂದು ದ್ವಾರಕೀಶ್ ನೀಡಿದ ಹೇಳಿಕೆಯೇ ಕಾರಣ” ಎಂದಿದ್ದಾರೆ.

“ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಸಂಬಂಧ ಬಿರುಕು ಮೂಡಿದ್ದು, ನಂತರ ಲೀಲಾವತಿ ಅವರು ಮಹಾಲಿಂಗ ಭಾಗವತರ್ ಜೊತೆ ಬದುಕಲು ಆರಂಭಿಸಿದರು. ಆಗ ಲೀಲಾವತಿ ಅವರಿಗೆ ಮಗು ಹುಟ್ಟುತ್ತದೆ. ಆ ಮಗುವಿಗೆ ಐದಾರು ವರ್ಷ ಆದಮೇಲೆ ಮತ್ತೆ ಲೀಲಾವತಿ ನಟಿಸಲು ಆರಂಭಿಸುತ್ತಾರೆ. ‘ಸಿಪಾಯಿ ರಾಮು’ ಹಾಗೂ ‘ಭಕ್ತ ಕುಂಬಾರ’ ಸಿನಿಮಾಗಳಲ್ಲಿ ಅಣ್ಣಾವ್ರ ಜೊತೆಗೆ ನಟಿಸುತ್ತಾರೆ. ಆ ಸಿನಿಮಾ ಸೆಟ್‌ಗಳಿಗೂ ಮಹಾಲಿಂಗ ಭಾಗವತರ್ ಮಗನನ್ನು ಕರೆದುಕೊಂಡು ಬಂದಿರುತ್ತಾರೆ. ನನ್ನ ಮಗ ವಿನೋದ್ ಎಂದು ಹೇಳಿಕೊಂಡಿಕೊಂದು ಎಂದು ನೋಡಿರುವ ಜನ ಈಗಲೂ ಇದ್ದಾರೆ.” ಎಂದು ಹೇಳಿದರು.

“ಅಂದಿನವರಿಗೆ ರಾಜ್‌ಕುಮಾರ್ ಮಗ ವಿನೋದ್ ಎಂದು ಅನ್ನಿಸಿರಲಿಲ್ಲ. ಅವರ ಅಪ್ಪಯಾರು ಎಂದು ಗೊತ್ತಿತ್ತು. ಆನಂತರ ದ್ವಾರಕೀಶ್ ಅವರೊಟ್ಟಿಗೆ ಅಣ್ಣಾವು 2 ಸಿನಿಮಾ ಮಾಡಿದ ಮೇಲೆ ಡೇಟ್ಸ್ ಕೊಟ್ಟಿರಲ್ಲ. ಕಾರಣಾಂತರಗಳಿಂದ ಇಬ್ಬರು ದೂರ ಆಗಿದ್ದು, 80ರ ದಶಕದಲ್ಲಿ ಶಿವರಾಜ್‌ಕುಮಾರ್ ಇಂಡಸ್ಟ್ರಿಗೆ ಬಂದು ‘ಆನಂದ್’ ಸಿನಿಮಾ ಹಿಟ್ ಆಗುತ್ತೆ. ಡೇಟ್ಸ್ ಕೇಳಿದಾಗ ಪಾರ್ವತಮ್ಮ, ಶಿವಣ್ಣನ ಡೇಟ್ಸ್ ಕೊಡಲ್ಲ.

ಆಗ ದ್ವಾರಕೀಶ್ ಲೀಲಾವತಿಯವರ ಮನೆಗೆ ಹೋಗಿ ನಿಮ್ಮ ಮಗನನ್ನು ಹೀರೊ ಮಾಡ್ತೀನಿ ಎಂದು ಹೇಳಿ ‘ಡ್ಯಾನ್ಸ್ ರಾಜ್ ಡ್ಯಾನ್ಸ್’ ಸಿನಿಮಾ ಮಾಡ್ತಾರೆ. ವಿನೋದ್ ಎನ್ನುವ ಹೆಸರನ್ನು ವಿನೋದ್ ರಾಜ್ ಮಾಡಿ ಸಿನಿಮಾ ಮಾಡಿದರು. ಅದಕ್ಕೂ ಮುನ್ನ ಎಲ್ಲಾ ದಾಖಲೆಗಳಲ್ಲೂ ಹೆಸರು ವಿನೋದ್ ಅಂತಲೇ ಇತ್ತು ರಾಜ್ ಅಂತ ಸೇರಿಸಿದ್ದು ಅದರ ಬಗ್ಗೆ ನನ್ನ ಆಕ್ಷೇಪಣೆ ಇಲ್ಲ. ಯಾಕಂದ್ರೆ ಆ ಕಾಲದಲ್ಲಿ ಚರಣ್ ರಾಜ್, ಸುಂದರ್ ರಾಜ್ ಅಂತೆಲ್ಲಾ ಇದ್ದರು ಎಂದರು.

ಆದರೆ ದ್ವಾರಕೀಶ್ ಸಿನಿಮಾ ಪ್ರತಿಕಾಗೋಷ್ಠಿಯಲ್ಲಿ ಒಂದು ಹೇಳಿಕೆ ಕೊಡುತ್ತಾರೆ. ಅದೇ ಇಷ್ಟಕ್ಕೆಲ್ಲಾ ಕಾರಣ ಎಂದು ಹೇಳಿದರು. ಅಂದು ದ್ವಾರಕೀಶ್ ಮಾತನಾಡುತ್ತಾ “ವಿನೋದ್ ರಾಜ್ ಹುಟ್ಟಿನ ಬಗ್ಗೆ ಗುಟ್ಟೊಂದು ಇದೆ. ‘ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಬಿಡುಗಡೆಯ ನಂತರ ಆ ಗುಟ್ಟನ್ನು ಬಹಿರಂಗ ಪಡಿಸುತ್ತೇನೆ” ಎಂದು ಹೇಳಿದ್ದು, ಆದರೆ, ಸಿನಿಮಾ ಬಿಡುಗಡೆ ಆದಮೇಲೂ ದ್ವಾರಕೀಶ್ ಏನೂ ಹೇಳಿಲ್ಲ. ರಾಜ್‌ಕುಮಾರ್ ಹಾಗೂ ಲೀಲಾವತಿಯವರಿಗೆ ಸಂಬಂಧ ಎಂದು ಕೆಲವರಿಗೆ ಗೊತ್ತಿತ್ತು. ಹಾಗಾಗಿ ಎರಡನ್ನು ಲಿಂಕ್ ಮಾಡಿ ಅವರ ಮಗ ವಿನೋದ್ ರಾಜ್ ಅನ್ನೋದು ತಾನಾಗಿಯೇ ಪ್ರಚಾರವಾಯಿತು.

ಮುಂದೆ ಯಾರೂ ಏನೂ ಹೇಳಲಿಲ್ಲ. ಲೀಲಾವತಿಯವರೂ ಏನೂ ಹೇಳಲಿಲ್ಲ. ವಿನೋದ್ ರಾಜ್ ಮಾಡಿದ ‘ನಂಜುಂಡ’, ‘ಕನ್ನಡದ ಕಂದ’, ‘ರಾಜಣ್ಣ’ ಎಲ್ಲಾ ಸಿನಿಮಾಗಳಲ್ಲಿ ಅಪ್ಪ, ಹೆಂಡತಿ, ಮಗನಿಗೆ ಮೋಸ ಮಾಡಿದ ಕಥೆಯನ್ನೇ ಹೇಳಿದ್ದರು, ಆ ಮೂಲಕ ಕೂಡ ಸುಳ್ಳು ಕಥೆಯನ್ನು ಸತ್ಯ ಎಂದು ಹಬ್ಬಿಸುತ್ತಾ ಹೋದರು.” ಆದರೆ, ಅಣ್ಣಾವ್ರು ಇಲ್ಲ ಎನ್ನುವ ಒಂದೇ ಒಂದು ಧೈರ್ಯದಿಂದ ರವಿ ಬೆಳಗೆರೆಯವರ ಬಳಿ ‘ರಾಜ್ ಲೀಲಾ ವಿನೋದ’ ಪುಸ್ತಕ ಬರೆಸಿದ್ದು, ಅದರಲ್ಲಿ ಆ ಸುಳ್ಳನ್ನು ಸತ್ಯ ಮಾಡಲು ಹೋದರು ಎಂದು ಪ್ರಕಾಶ್ ರಾಜ್ ಮೇಹು ಹೇಳಿದರು.

Leave A Reply

Your email address will not be published.